ಬೆಂಗಳೂರು : Withdraw Money from ATM Without Debit Card: ಇಲ್ಲಿಯವರೆಗೆ, ಎಟಿಎಂನಿಂದ ಹಣವನ್ನು ಪಡೆಯಬೇಕಾದರೆ ಡೆಬಿಟ್ ಕಾರ್ಡ್ ಅಥವಾ OTP ಆಧಾರಿತ ಆಯ್ಕೆಯನ್ನು ಬಳಸಬೇಕಿತ್ತು. ಆದರೆ ಈಗ ಫೋನ್‌ಪೇ, ಪೇಟಿಎಂ ಮತ್ತು ಗೂಗಲ್ ಪೇಯಂತಹ ಯುಪಿಐ ಅಪ್ಲಿಕೇಶನ್ ಸಹಾಯದಿಂದ ಕೂಡಾ ಎಟಿಎಂನಿಂದ ಹಣವನ್ನು ಪಡೆಯಬಹುದು. ಈ ವೈಶಿಷ್ಟ್ಯವನ್ನು ಸ್ವಲ್ಪ ಸಮಯದ ಹಿಂದೆ ಘೋಷಿಸಲಾಯಿತು. ಇದರೊಂದಿಗೆ, ಈಗ ಎನ್‌ಸಿಆರ್ ಕಾರ್ಪೊರೇಷನ್ ಸಹ ಎಲ್ಲಾ ಎಟಿಎಂಗಳನ್ನು ಅಪ್ ಡೇಟ್ ಮಾಡುತ್ತಿದೆ.  ಮೆಷಿನ್  ಅಪ್‌ಗ್ರೇಡ್ ಮಾಡಿದ ನಂತರ, ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ತೆಗೆಯುವುದನ್ನು  UPI ಅಪ್ಲಿಕೇಶನ್ ಮೂಲಕ ಮಾಡಬಹುದು. 


COMMERCIAL BREAK
SCROLL TO CONTINUE READING

ಈ ವಿಷಯಗಳನ್ನು ನೆನಪಿನಲ್ಲಿಡಿ :
ಈ ವೈಶಿಷ್ಟ್ಯವನ್ನು ಬಳಸುವ ಮೊದಲು, ನೀವು ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ವೈಶಿಷ್ಟ್ಯದ ಮೂಲಕ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಲ್ಲದೆ ನಗದು ಪಡೆಯುವುಡು ಸಾಧ್ಯವಾಗುತ್ತದೆ. ಆದ್ದರಿಂದ, ಈ ವೈಶಿಷ್ಟ್ಯವನ್ನು ATM ಯಂತ್ರದಲ್ಲಿಯೂ ಸಕ್ರಿಯಗೊಳಿಸಬೇಕು. ನಿಮ್ಮ ಸಂಖ್ಯೆಯನ್ನು ಬ್ಯಾಂಕ್‌ನಲ್ಲಿ ನೋಂದಾಯಿಸಿರಬೇಕು ಮತ್ತು ನಿಮ್ಮ ಫೋನ್‌ನಲ್ಲಿ ಕೆಲವು UPI ಅಪ್ಲಿಕೇಶನ್ ಇರಬೇಕು.


ಇದನ್ನೂ ಓದಿ : ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ! ನೀವು ಹೊಸ ಮೊಬೈಲ್ ಖರೀದಿಸಲು ಬಯಸಿದರೆ ಈಗಲೇ ಖರೀದಿಸಿ


ಯುಪಿಐ ಮೂಲಕ ಹಣ ತೆಗೆಯುವ ವಿಧಾನ : 
 ಇಲ್ಲಿ ತಿಳಿಸುವ ವಿಧಾನದ ಮೂಲಕ UPIಅಪ್ಲಿಕೇಶನ್‌ನ ಸಹಾಯದಿಂದ ಮಾತ್ರ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 


1.ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Pay, PhonePe, Paytm, WhatsApp Pay ಮತ್ತು Amazon Pay ಹೀಗೆ ಯಾವುದಾದರೂ ಒಂದು UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
2. ಈ ವೈಶಿಷ್ಟ್ಯವನ್ನು ಬಳಸುವಾಗ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ಸಕ್ರಿಯಗೊಳಿಸಬೇಕು.
3. ಈಗ ನೀವು ಎಟಿಎಂಗೆ  ಹೋಗಬೇಕು ಮತ್ತು ವಿತ್ ಡ್ರಾ ಕ್ಯಾಶ್ ಮೇಲೆ ಕ್ಲಿಕ್ ಮಾಡಬೇಕು. ಈಗ ಯುಪಿಐ ಆಯ್ಕೆ ನಿಮ್ಮ ಮುಂದೆ ಬರಲಿದೆ. ಇದನ್ನು ಕ್ಲಿಕ್ ಮಾಡಿದಾಗ, ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ.
4. ಈಗ ನಿಮ್ಮ ಫೋನ್‌ನಲ್ಲಿ ಯಾವುದಾದರೂ ಒಂದು UPI ಅಪ್ಲಿಕೇಶನ್ ತೆರೆಯಿರಿ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
5. ಇದರ ನಂತರ, ಎಟಿಎಂನಿಂದ ಹಣ ಪಡೆಯುವುದು ಸಾಧ್ಯವಾಗುತ್ತದೆ. ಹಣ ಪಡೆಯಬೇಕಾದರೆ ವಿಡ್ರಾ ಮಾಡಬೇಕಾದ ಮೊತ್ತ ಎಷ್ಟು ಎನ್ನುವುದನ್ನು ಇಲ್ಲಿ ನಮೂದಿಸಿ. 
6.ಈ ವೈಶಿಷ್ಟ್ಯದ ಅಡಿಯಲ್ಲಿ, ನೀವು 5 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ  ಎನ್ನುವುದು ನೆನಪಿರಲಿ. ಮೊತ್ತವನ್ನು ನಮೂದಿಸಿದ ನಂತರ, ಪ್ರೋಸೆಸ್ದ್ ಮೇಲೆ ಕ್ಲಿಕ್ ಮಾಡಿ.
7. ಈಗ ಪಿನ್ ಕೇಳಲಾಗುತ್ತದೆ, ನಿಮ್ಮ UPI ಪಿನ್ ಅನ್ನು ಇಲ್ಲಿ ನಮೂದಿಸಿ.
ಇದಾದ ನಂತರ ಎಟಿಎಂನಿಂದ ಹಣವನ್ನು ಪಡೆಯಬಹುದು.


ಇದನ್ನೂ ಓದಿ :   Kisan Credit Card ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ? ಇಲ್ಲಿದೆ ನಿಜಾಂಶ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.