Kisan Credit Card ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ? ಇಲ್ಲಿದೆ ನಿಜಾಂಶ

Interest Free Loan On KCC? - ಕಳೆದ ಕೆಲ ದಿನಗಳಿಂದ ಸಂದೇಶವೊಂದು ಭಾರಿ ವೈರಲ್ ಆಗುತ್ತಿದ್ದು, ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ರೂ. ಗಳವರೆಗೆ ಸಾಲ ನೀಡುತ್ತಿದೆ ಎನ್ನಲಾಗಿದೆ. ಈ ಸಂದೇಶದ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ಸರ್ಕಾರ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.   

Written by - Nitin Tabib | Last Updated : May 15, 2022, 06:29 PM IST
  • KCC ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ?
  • ಭಾರಿ ವೈರಲ್ ಆಗುತ್ತಿದೆ ಈ ಸಂದೇಶ
  • ಸರ್ಕಾರ ನೀಡಿದ ಸ್ಪಷ್ಟೀಕರಣ ಏನು?
Kisan Credit Card ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ? ಇಲ್ಲಿದೆ ನಿಜಾಂಶ title=
Kisan Credit Card Interest

Kisan Credit Card Interest: ಸರ್ಕಾರದ ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತಿದೆ ಎಂಬ ಸಂದೇಶವು ನಿಮಗೂ ಬಂದಿದ್ದರೆ, ಈ ಸುದ್ದಿ ನಿಮಗಾಗಿ. ನೀವು ಜಾಗರೂಕರಾಗಿರುವುದು ತುಂಬಾ ಮುಖ್ಯ. ಈ ಬಗ್ಗೆ ಸಾಮಾನ್ಯ ಜನರಿಗೆ ಪಿಐಬಿಯಿಂದ ಸರಿಯಾದ ಮಾಹಿತಿಯನ್ನು ನೀಡಿದೆ. 

3 ಲಕ್ಷ ರೂ. ಗಳವರೆಗಿನ ಸಾಲಕ್ಕೆ ಶೇ.7ರಷ್ಟು ಬಡ್ಡಿ
ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಆಗಿರುವ ಪಿಐಬಿ ಫ್ಯಾಕ್ಟ್ ಮೂಲಕ ಸರ್ಕಾರ ಈ ಸಂದೇಶದ ಹಿಂದಿನ ಸತ್ಯಾಸತ್ಯತೆ ಕುರಿತು ಮಾಹಿತಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕುರಿತಂತೆ ಇಂತಹ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸರ್ಕಾರ ಹೇಳಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀಡಲಾಗುವ 3 ಲಕ್ಷ ರೂ. ಗಳವರೆಗಿನ ಸಾಲಕ್ಕೆ ಶೇ.7ರ ಲೆಕ್ಕಾಚಾರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಇದರಲ್ಲಿ ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವಟಿಸಿ ಶೇ.3 ರಷ್ಟು ರಿಯಾಯ್ತಿ ಕೂಡ ಪಡೆಯಬಹುದು. 

ಇದನ್ನೂ ಓದಿ-'ಪ್ರಧಾನಿ ಮೋದಿ ಅವರಿಗೆ ಕಾಶ್ಮೀರಿಗಳ ನರಮೇಧಕ್ಕಿಂತ ಸಿನಿಮಾ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ'

ಕಳೆದ ಕೆಲ ದಿನಗಳಿಂದ ಭಾರಿ ವೈರಲ್ ಆಗುತ್ತಿದೆ ಈ ಸಂದೇಶ
ಏಪ್ರಿಲ್ 1 ರಿಂದ ಕೆಸಿಸಿ ಮೇಲಿನ ಬಡ್ಡಿದರ ಶೂನ್ಯ ಮಾಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಸಂದೇಶದ ಸ್ಕ್ರೀನ್ ಶಾಟ್ ಪಿಐಬಿ ಫ್ಯಾಕ್ಟ್ ಚೆಕ್ ತಂಡ ಹಂಚಿಕೊಂಡಿದ್ದು, ಈ ಸಂದೇಶ ಕಳೆದ ಕೆಲ ದಿನಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರಲ್ಲಿ ವೃತ್ತಪತ್ರಿಕೆಯ ಕಟಿಂಗ್ ವೊಂದನ್ನು ಬಲಸಲಾಗಿದ್ದು, ಅದರಲ್ಲಿ ಏಪ್ರಿಲ್ 1, 2022 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಮೂರು ಲಕ್ಷ ರೂಗಳವರೆಗಿನ ಮೊತ್ತಕ್ಕೆ ಯಾವುದೇ ರೀತಿಯ ಬಡ್ಡಿ ಅನ್ವಯಿಸುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ-Bank Rules : ಬ್ಯಾಂಕ್ ಖಾತೆದಾರರ ಗಮನಕ್ಕೆ : ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡುವ - ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ

ವೇಗ ಪಡೆದುಕೊಂಡ ಸೈಬರ್ ಕ್ರೈಂ ಪ್ರಕರಣಗಳು
ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ ಫ್ಯಾಕ್ಟ್ ಚೆಕ್ಕಿಂಗ್  ತಂಡ ಈ ಸಂದೇಶ ಸಂಪೂರ್ಣ ನಕಲಿಯಾಗಿದೆ ಹಾಗೂ ಸುಳ್ಳು ಸುದ್ದಿ ಪಸರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ರೈತರು ಶೇ.7 ರಷ್ಟು ಬಡ್ಡಿಯನ್ನು ಪಾವತಿಸಬೇಕು ಎಂದು ಟ್ವೀಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡಿಜಿಟೈಜೇಶನ್ ಜೊತೆಗೆ ಸೈಬರ್ ಕ್ರೈಂ ಪ್ರಕರಣಗಳು ಕೂಡ ಹೆಚ್ಚಾಗತೊಡಗಿವೆ. ಹೀಗಾಗಿ ಜನರನ್ನು ವಂಚನೆಯಿಂದ ರಕ್ಷಿಸಲು ಪಿಐಬಿ ಫ್ಯಾಕ್ಟ್ ಚೆಕ್ ತಂಡ ವೈರಲ್ ಸಂದೇಶಗಳ ಸತ್ಯಾಸತ್ಯತೆಯನ್ನು ಜನರ ಮುಂದಿಡುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News