iPhone 14 Price List And Offers : Apple iPhone 14 ಸರಣಿಯನ್ನು ಭಾರತ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಘೋಷಿಸಲಾಗಿದೆ. iPhone 14, iPhone 14 Plus, iPhone 14 Pro ಮತ್ತು iPhone 14 Pro Max ಎಂಬ ನಾಲ್ಕು ಮಾದರಿಗಳಲ್ಲಿ ಫೋನ್ ಬಿಡುಗಡೆಯಾಗುತ್ತಿದೆ. ಎಲ್ಲಾ ನಾಲ್ಕು ಮಾದರಿಗಳಲ್ಲಿ ಯಾವ ಕೊಡುಗೆಗಳು ಲಭ್ಯವಿವೆ ಮತ್ತು ಅದನ್ನು ಎಷ್ಟು ಅಗ್ಗವಾಗಿ ಖರೀದಿಸಬಹುದು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಭಾರತದಲ್ಲಿ iPhone 14 ಮತ್ತು iPhone 14 Plus ಬೆಲೆ :
ಭಾರತೀಯ ಗ್ರಾಹಕರು iPhone 14 ನ 128GB ರೂಪಾಂತರವನ್ನು  79,900 ರೂ. 256GB ರೂಪಾಂತರವನ್ನು  89,900 ರೂ. ಮತ್ತು 512GB ರೂಪಾಂತರವನ್ನು1,09,900  ರೂ.ಗೆ ಮತ್ತು iPhone 14 Plus ಅನ್ನು89,900 ರೂ.ಗೆ  ಖರೀದಿಸಬಹುದು.  ಐಫೋನ್ 14 ಮಾರಾಟವು ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗಲಿದೆ. ಐಫೋನ್ 14 ಪ್ಲಸ್ ಮಾರಾಟವು ಅಕ್ಟೋಬರ್ 7 ರಿಂದ ನಡೆಯಲಿದೆ.


ಇದನ್ನೂ ಓದಿ : Apple iPhone 14: ಬಹುನಿರೀಕ್ಷಿತ ಆ್ಯಪಲ್ ಐಫೋನ್ 14ರ ಸರಣಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ..?


ಭಾರತದಲ್ಲಿ iPhone 14 Pro ಮತ್ತು iphone 14 Pro ಮ್ಯಾಕ್ಸ್ ಬೆಲೆ :
iPhone 14 Pro 128GB ವೇರಿಯಂಟ್ ಬೆಲೆ 1,29,900 ರೂ, 256GB ವೇರಿಯಂಟ್ ಬೆಲೆ  139,900 ರೂಪಾಯಿ. 512GB ವೇರಿಯಂಟ್ ಬೆಲೆ  159,900 ರೂ. ಮತ್ತು 1TB ರೂಪಾಂತರದ ಬೆಲೆ  179,900 ರೂ. ಅಂದರೆ ಕಳೆದ ವರ್ಷ ಬಿಡುಗಡೆಯಾದ  iPhone 13 Pro ಗಿಂತ 10,000 ಹೆಚ್ಚು. iPhone 14 Pro Max ಬೆಲೆ 1,39,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಕೂಡಾ 2021 ರಿಂದ iPhone 13 Pro Max ಗಿಂತ 10,000 ರೂ. ದುಬಾರಿ. 256GB ವೇರಿಯಂಟ್ ಬೆಲೆ  149,900 ರೂ.  512GB ರೂಪಾಂತರದ ಬೆಲೆ  169,900 ರೂ. ಮತ್ತು 1TB ರೂಪಾಂತರದ ಬೆಲೆ 189,900 ರೂಪಾಯಿ. ಇದರ ಮಾರಾಟ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗುತ್ತದೆ. ಆದರೆ ಪ್ರಿ ಆರ್ಡರ್ ಇಂದಿನಿಂದಲೇ ಮಾಡಿಕೊಳ್ಳಬಹುದು. 


iPhone 14 ಸರಣಿಯ ಬಿಡುಗಡೆ ಕೊಡುಗೆಗಳು : 
54,900 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಲ್ಲಿ, Apple.com ಆಪಲ್ ಉತ್ಪನ್ನಗಳ ಖರೀದಿಯ ಮೇಲೆ 6,000 ರೂ.ರೆಗೆ ತ್ವರಿತ ಕ್ಯಾ ಶ್‌ಬ್ಯಾಕ್ ಅನ್ನು ನೀಡುತ್ತದೆ. ಅದೇ ಕೊಡುಗೆಯು iPhone 14 ಲೈನ್‌ಅಪ್‌ಗೆ ಅನ್ವಯಿಸುತ್ತದೆ. ಗ್ರಾಹಕರು ಅಧಿಕೃತ ವೆಬ್‌ಸೈಟ್ ಮೂಲಕ iPhone 14 ಲೈನ್ ಅನ್ನು ಖರೀದಿಸಬಹುದು. ಇಲ್ಲಿ ಖರೀದಿಸಿದರೆಫೋನ್ ಖರೀದಿಸಿದ 3 ಅಥವಾ 6 ತಿಂಗಳವರೆಗೆ ಏನನ್ನೂ ಪಾವತಿಸಬೇಕಾಗಿಲ್ಲ. 


ಇದನ್ನೂ ಓದಿ : ಮೊಬೈಲ್ ರೀಚಾರ್ಜ್ ಮಾಡಿದರೆ 10 ಲಕ್ಷ ಬಹುಮಾನ.! ಜಿಯೋ ಗ್ರಾಹಕರಿಗೆ ಬಂಪರ್ ಆಫರ್


ಟ್ರೇಡ್-ಇನ್ ಮೂಲಕ iPhone 14/14 Plus/14 Pro/14 Pro Max ಅನ್ನು ಖರೀದಿಸಲು ಬಯಸುವ ಖರೀದಿದಾರರಿಗೆ Apple 2,200 ರಿಂದ 58,730 ರೂಗಳ ಕ್ರೆಡಿಟ್ ಅನ್ನು ನೀಡುತ್ತಿದೆ. ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ಖರೀದಿಸುವ ಗ್ರಾಹಕರು ಹೊಸ ಚಂದಾದಾರಿಕೆಯೊಂದಿಗೆ ಮೂರು ತಿಂಗಳ ಆಪಲ್ ಆರ್ಕೇಡ್ ಅನ್ನು ಪಡೆಯುತ್ತಾರೆ.



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.