Apple iPhone 14: ಬಹುನಿರೀಕ್ಷಿತ ಆ್ಯಪಲ್ ಐಫೋನ್ 14ರ ಸರಣಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ..?

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆ್ಯಪಲ್ ಪಾರ್ಕ್ ಪ್ರಧಾನ ಕಚೇರಿಯಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಆ್ಯಪಲ್ ಐಫೋನ್ ಹೊಸ ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.  

Written by - Puttaraj K Alur | Last Updated : Sep 8, 2022, 12:53 PM IST
  • ಬಹುನಿರೀಕ್ಷಿತ ಆ್ಯಪಲ್ ಐಫೋನ್ 14ರ ಸರಣಿ, ವಾಚ್‍ಗಳು ಬಿಡುಗಡೆಯಾಗಿವೆ
  • ಐಫೋನ್ 14 ಸರಣಿಗೆ 79,900 ರೂ.ಮತ್ತು ಐಫೋನ್ 14+ನ ಬೆಲೆ 89,900 ರೂ.
  • iPhone 14 Pro 1,29,900 ರೂ. ಮತ್ತು iPhone 14 Pro Maxಗೆ 1,39,900 ರೂ.
Apple iPhone 14: ಬಹುನಿರೀಕ್ಷಿತ ಆ್ಯಪಲ್ ಐಫೋನ್ 14ರ ಸರಣಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ..? title=
iPhone 14 Launch in India

ನವದೆಹಲಿ: ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆಯಾಗಿದೆ. ಬುಧವಾರ ರಾತ್ರಿ ನಡೆದ ಸೆಪ್ಟೆಂಬರ್ ಈವೆಂಟ್‍ನಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಹೊಸ ಸರಣಿಯ ಐಫೋನ್‍ಗಳ ಬಗ್ಗೆ ಮಾಹಿತಿ ನೀಡಿದರು. iPhone 14 ಲಾಂಚ್ ಈವೆಂಟ್‍ನಲ್ಲಿ ಐಫೋನ್‍ಗಳ ಜೊತೆಗೆ ಹೊಸ ವಾಚ್ ಸರಣಿ 8 ಮತ್ತು Next Generationನ AirPods Proವನ್ನು ಬಿಡುಗಡೆ ಮಾಡಲಾಯಿತು.  

ಐಫೋನ್ ಬೆಲೆ ಎಷ್ಟು..?

ಐಫೋನ್ 14 ಸರಣಿಯು 79,900 ರೂ. ಮತ್ತು ಐಫೋನ್ 14+ನ ಬೆಲೆ 89,900 ರೂ. ಆಗಿದೆ. ಅದೇ ರೀತಿ iPhone 14 Proಗೆ 1,29,900 ರೂ. ಆದರೆ, iPhone 14 Pro Maxಗೆ 1,39,900 ರೂ. ಬೆಲೆ ನಿಗದಿಪಡಿಸಲಾಗಿದೆ. ಐಫೋನ್ 14 ಪ್ರೊ ಸ್ಫೋರ್ಟ್ಸ್ ಡೈನಾಮಿಕ್ ಐಲ್ಯಾಂಡ್ ನಾಚ್(Dynamic Island Notch) ಹೊಂದಿದೆ. ಇದು ನಿಮ್ಮ ಚಟುವಟಿಕೆ ಅಥವಾ ನೀವು ತೆರೆದಿರುವ ಅಪ್ಲಿಕೇಶನ್ ಆಧರಿಸಿ ಬದಲಾಗುತ್ತದೆ. ಉದಾಹರಣೆಗೆ ಸಂಗೀತ ಅಪ್ಲಿಕೇಶನ್ ತೆರೆದಾಗ, ನಾಚ್ ವಿಭಿನ್ನ ರೀತಿಯ ಅನಿಮೇಷನ್ ಪ್ರದರ್ಶಿಸುತ್ತದೆ. iPhone 14 Pro 48MP ಮುಖ್ಯ ಕ್ಯಾಮೆರಾ ಹೊಂದಿದೆ. ಭಾರತೀಯ ಗ್ರಾಹಕರಿಗೆ ಐಫೋನ್ ಸೆಪ್ಟೆಂಬರ್ 16ರಿಂದ ಅಧಿಕೃತವಾಗಿ ಖರೀದಿಗೆ ಲಭಿಸಲಿವೆ.

ಇದನ್ನೂ ಓದಿ: Saregama ಕಾರ್ವಾನ್ ಮೊಬೈಲ್ ಭಾರತದಲ್ಲಿ ಬಿಡುಗಡೆ- ಇದರ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಐಫೋನ್ 14 ಮತ್ತು ಐಫೋನ್ 14+ ಹಳೆಯ A15 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸಲಿವೆ. ಆದರೆ ಆ್ಯಪಲ್ ಕ್ಯಾಮೆರಾವನ್ನು ಮತ್ತಷ್ಟು ಸುಧಾರಿಸಿದೆ. ಕ್ರ್ಯಾಶ್ ಡಿಟೆಕ್ಷನ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಐಫೋನ್ 14 ಸರಣಿಯ ಅಮೆರಿಕ ಮಾದರಿಗಳಲ್ಲಿ ಸಿಮ್ ಟ್ರೇ ತೆಗೆದು ಹಾಕಲಾಗಿದೆ. ಆ್ಯಪಲ್ ಉಪಗ್ರಹ ಸಂಪರ್ಕದ ಮೂಲಕ ತುರ್ತು SOS ತಂತ್ರಜ್ಞಾನ ಪರಿಚಯಿಸುತ್ತಿದೆ. ಆದರೆ ಈ ತಂತ್ರಜ್ಞಾನ ಸದ್ಯ ಅಮೆರಿಕ ಮತ್ತು ಕೆನಡಾದ ಗ್ರಾಹಕರಿಗೆ ಮಾತ್ರ ಲಭಿಸಲಿದೆ.

ಈವೆಂಟ್‍ನಲ್ಲಿ ಮೊದಲು ಆ್ಯಪಲ್ ವಾಚ್ ಸರಣಿ 8 ರಿಲೀಸ್ ಮಾಡಲಾಯಿತು. ಇದರಲ್ಲಿ ಹಲವಾರು ವಿಶೇಷ ವೈಶಿಷ್ಟ್ಯಗಳಿದ್ದು, ದೇಹದ ಉಷ್ಣತೆಯ ಸಂವೇದಕವು ಮಹಿಳೆಯರಿಗೆ ಯಾವಾಗ ಅಂಡೋತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಇದು ಚಾಲನೆ ಮಾಡುವಾಗ ಕ್ರ್ಯಾಶ್ ಡಿಟೆಕ್ಷನ್‌ ಮತ್ತು ಅಂತಾರಾಷ್ಟ್ರೀಯ ರೋಮಿಂಗ್‌ ಬೆಂಬಲದೊಂದಿಗೆ ಬರುತ್ತದೆ. Apple ವಾಚ್ ಸರಣಿ 4ಗೆ ಹೊಸ Low-Power Modeನ್ನು ಸಹ ತರುತ್ತಿದೆ. Apple Watch Series 8 GPS ಆವೃತ್ತಿಗೆ 399 ಅಮೆರಿಕನ್ ಡಾಲರ್(31,789.83 ರೂ.) ಮತ್ತು ಸೆಲ್ಯುಲಾರ್ ಆವೃತ್ತಿಗೆ 499 ಅಮೆರಿಕನ್ ಡಾಲರ್ (39,757.20 ರೂ.) ಬೆಲೆ ನಿಗದಿಪಡಿಸಲಾಗಿದೆ. ಇವುಗಳು ಇಂದು Pre-Orderಗೆ ಲಭ್ಯವಿರುತ್ತವೆ. ಸೆಪ್ಟೆಂಬರ್ 16ರಿಂದ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿವೆ. ಆ್ಯಪಲ್ ವಾಚ್ SE 2ನ್ನು ಸಹ ಬಹಿರಂಗಪಡಿಸಿದೆ.

ಇದನ್ನೂ ಓದಿ: ಮೊಬೈಲ್ ರೀಚಾರ್ಜ್ ಮಾಡಿದರೆ 10 ಲಕ್ಷ ಬಹುಮಾನ.! ಜಿಯೋ ಗ್ರಾಹಕರಿಗೆ ಬಂಪರ್ ಆಫರ್

ಏತನ್ಮಧ್ಯೆ ಹೊಸ ಆ್ಯಪಲ್ ವಾಚ್ ಅಲ್ಟ್ರಾ ಸಾಧಕರಿಗೆ ಸಜ್ಜಾಗಿದೆ. ಇದು Special Case ನೊಂದಿಗೆ ಬರುತ್ತಿದೆ. ಇದು 49 MM ಕೇಸ್ ಮತ್ತು ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. Dedicated Action Button ಸಹ ಇರಲಿದೆ. ಆ್ಯಪಲ್ ವಾಚ್ ಅಲ್ಟ್ರಾಗೆ 799 ಅಮೆರಿಕನ್ ಡಾಲರ್(63,684.33 ರೂ.) ಬೆಲೆ ನಿಗದಿಪಡಿಸಲಾಗಿದೆ. ಇದು ಸೆಪ್ಟೆಂಬರ್ 23ರಿಂದ ಮಾರಾಟವಾಗಲಿದೆ. Apple AirPods Pro 2ನ್ನು ಸಹ ಬಿಡುಗಡೆ ಮಾಡುತ್ತಿದೆ. ಇವುಗಳು ಪ್ರಾದೇಶಿಕ ಆಡಿಯೋ, ಹೊಸ H2 ಚಿಪ್ ಮತ್ತು Advanced Noise Cancellation ನೊಂದಿಗೆ ಬರುತ್ತಿದೆ. ಲೈಟ್ ಸ್ವೈಪ್ ಮೂಲಕ ಮೇಲಕ್ಕೆ ಅಥವಾ ಕೆಳಕ್ಕೆ ವಾಲ್ಯೂಮ್ ನಿಯಂತ್ರಿಸಲು ಬಳಕೆದಾರರಿಗೆ ಅವಕಾಶ ಕಲ್ಪಿಸಲು ಟಚ್ ಕಂಟ್ರೋಲ್‌ ಆಪ್ಶನ್ ನೀಡಲಾಗಿದೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆ್ಯಪಲ್ ಪಾರ್ಕ್ ಪ್ರಧಾನ ಕಚೇರಿಯಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಐಫೋನ್ ಹೊಸ ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News