ಬೆಂಗಳೂರು : ದೇಶದಲ್ಲಿ ಕಾರು ಮಾರಾಟದ ವಿಷಯದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ನಡುವೆ ಪೈಪೋಟಿ ಇದೆ. ಕಾರು ಮಾರಾಟದ ವಿಷಯದಲ್ಲಿ ಮೊದಲ ಮೂರು ಸ್ಥಾನಗಳನ್ನು ಈ ಮೂರು ಕಂಪನಿಗಳು ತಮ್ಮದಾಗಿಸಿಕೊಂಡಿವೆ. ಗರಿಷ್ಠ ಎಸ್‌ಯುವಿಗಳನ್ನು ಮಾರಾಟ ಮಾಡುವ ವಿಷಯದಲ್ಲೂ ಈ ಕಂಪನಿಗಳ ನಡುವೆ ಪೈಪೋಟಿ ಇದೆ. ಟಾಟಾ ಮೋಟಾರ್ಸ್‌ನ ಟಾಟಾ ನೆಕ್ಸಾನ್ ದೀರ್ಘಕಾಲದವರೆಗೆ ದೇಶದ ಅತ್ಯುತ್ತಮ ಮಾರಾಟವಾದ SUV ಆಗಿದ್ದರೆ, ಇದೀಗ ಹುಂಡೈ ಕೂಡಾ  ಕಾರು  ಮಾರಾಟದ ವಿಷಯದಲ್ಲಿ ದಾಖಲೆ ಬರೆದಿದೆ.  


COMMERCIAL BREAK
SCROLL TO CONTINUE READING

ಇಲ್ಲಿ ನಾವು ಹುಂಡೈ ಕ್ರೆಟಾದ ಬಗ್ಗೆ ಮಾತನಾಡುತ್ತಿದ್ದೇವೆ. SUV ಗಳ ವಿಷಯದಲ್ಲಿ ಟಾಟಾ ನೆಕ್ಸಾನ್ ನಂಬರ್ ಒನ್ ಆಗಿದ್ದರೆ, ಮಧ್ಯಮ ಗಾತ್ರದ SUV ಗಳಿಗೆ ಬಂದಾಗ ಹ್ಯುಂಡೈ ಕ್ರೆಟಾ ಮೊದಲ ಸ್ಥಾನದಲ್ಲಿದೆ.  2022 ರ ಮಾರಾಟದ ಅಂಕಿಅಂಶಗಳನ್ನು ನೋಡುವುದಾದರೆ, ಟಾಟಾ ನೆಕ್ಸಾನ್‌ನ 1,68,278 ಯುನಿಟ್‌ಗಳು ಮಾರಾಟವಾಗಿವೆ. ಹುಂಡೈ ಕ್ರೆಟಾ ಎರಡನೇ ಸ್ಥಾನದಲ್ಲಿದ್ದು, 1,40,895 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ.  ಇದೆ ವೇಳೆ, ಮಾರುತಿಯ ಬ್ರೆಝಾ 1,30,563 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 


ಇದನ್ನೂ ಓದಿ : ಮಾರುತಿ, ಹ್ಯುಂಡೈ ಸೇರಿದಂತೆ ಹಲವು ದೊಡ್ಡ ಕಾರು ಕಂಪನಿಗಳಿಗೆ ಟಕ್ಕರ್ ನೀಡಿದ ಭಾರತೀಯ ಕಂಪನಿ


ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಕ್ರೆಟಾದೊಂದಿಗೆ ಟಾಟಾ ಹ್ಯಾರಿಯರ್ ಎಸ್‌ಯುವಿ  ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಕೂಡಾ ಸ್ಪರ್ಧಿಸುತ್ತಿದೆ. ಕ್ರೆಟಾದೊಂದಿಗಿನ ಮಾರಾಟವನ್ನು ಹೋಲಿಸಿದರೆ, ಟಾಟಾ ಮತ್ತು ಮಾರುತಿ ಎರಡೂ  ಕಾರುಗಳ ಮಾರಾಟ ಕಡಿಮೆಯಿದೆ. ಉದಾಹರಣೆಗೆ ಟಾಟಾ ಹ್ಯಾರಿಯರ್ 2022 ರ ಸಂಪೂರ್ಣ ವರ್ಷದಲ್ಲಿ  32,258 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ, ಟಾಟಾ ಹ್ಯಾರಿಯರ್ ಮತ್ತು ಹ್ಯುಂಡೈ ಕ್ರೆಟಾ ಮಾರಾಟದ ಮಧ್ಯೆ 1 ಲಕ್ಷಕ್ಕೂ ಹೆಚ್ಚು ಯೂನಿಟ್ ಗಳ ವ್ಯತ್ಯಾಸವಿದೆ. 


ಹುಂಡೈ ಕ್ರೆಟಾದ ವೈಶಿಷ್ಟ್ಯಗಳು :
ಹ್ಯುಂಡೈ ಕ್ರೆಟಾದ ಬೆಲೆ 10.44 ಲಕ್ಷದಿಂದ 18.24 ಲಕ್ಷದವರೆಗೆ  ಇದೆ. ಹುಂಡೈ ಕ್ರೆಟಾ. 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಟರ್ಬೊ-ಪೆಟ್ರೋಲ್  ಹೀಗೆ, ಮೂರು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,  ಕನೆಕ್ಟೆಡ್ ಕಾರ್  ಟೆಕ್ನಾಲಜಿ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯುತ್ತದೆ. 


ಇದನ್ನೂ ಓದಿ : Arecanut today price: ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.