Smart Discount: ಇತ್ತೀಚಿನ ದಿನಗಳಲ್ಲಿ ಪ್ರತಿಯಿಬ್ಬರ ಮನೆಯಲ್ಲೂ ಎಲ್ಇಡಿ ಟಿವಿ ಇರುತ್ತದೆ. ಅದರಲ್ಲೂ 32 ಇಂಚಿನ ಮಾದರಿಯನ್ನು ಹೆಚ್ಚಿನ ಗ್ರಾಹಕರು ಆದ್ಯತೆ ಕೊಟ್ಟು ಖರೀದಿಸುತ್ತಾರೆ. ಇದು ಸಖತ್ ಸ್ಮಾರ್ಟ್ ಆಗಿದ್ದು, ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಫ್ಲಿಪ್‌ಕಾರ್ಟ್ ಸ್ಮಾರ್ಟ್ ಎಲ್‌ಇಡಿ ಟಿವಿಗಳಲ್ಲಿ ಭಾರೀ ಕೊಡುಗೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಗ್ರಾಹಕರು ದೊಡ್ಡ ಉಳಿತಾಯವನ್ನು ಮಾಡಬಹುದು. ಈ ಆಫರ್‌ನಲ್ಲಿ 32-ಇಂಚಿನ ಸ್ಮಾರ್ಟ್ LED ಟಿವಿಯನ್ನು ಭಾರೀ ಕಡಿಮೆ ಬೆಲೆಗೆ ಖರೀದಿಸಬಹುದು. ಹೇಗೆ ಈ ಉಳಿತಾಯ ಮಾಡಬಹುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:: WhatsApp ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ಇನ್ಮುಂದೆ...!


ಎಷ್ಟಿದೆ ಗೊತ್ತಾ ರಿಯಾಯಿತಿ:


ರಿಯಾಯಿತಿ ನೀಡಲಾಗುತ್ತಿರುವ ಸ್ಮಾರ್ಟ್ LED ಟಿವಿಯ ನಿಜವಾದ ಬೆಲೆ ರೂ.13999 ಆಗಿದ್ದು, ರಿಯಾಯಿತಿ ಬಳಿಕ ಭಾರೀ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಈ ರಿಯಾಯಿತಿಯ ಹೊರತಾಗಿಯೂ, ಗ್ರಾಹಕರಿಗೆ ಬೇರೊಂದು ಬಹುದೊಡ್ಡ ಡಿಸ್ಕೌಂಟ್ ಸಿಗುತ್ತಿದೆ. ಈಗ ಸ್ಮಾರ್ಟ್ LED ಟಿವಿಯ ಬೆಲೆಯನ್ನು ಕೇಳಿದರೆ ನಿಮಗೆ ಶಾಕ್ ಆಗಬಹುದು. ಈ ಸ್ಮಾರ್ಟ್ LED ಟಿವಿಯಲ್ಲಿ ಕಂಪನಿಯು ರೂ.13150 ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ನೀವು ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ನೀವು ಈ ಬೋನಸ್ ಅನ್ನು ಗೆಲ್ಲಬಹುದು ಅದರ ನಂತರ ರೂ. 13150 ಮೊತ್ತವು ರೂ. 13999 ರಿಂದ ಕಡಿಮೆಯಾಗುತ್ತದೆ. ಆಗ ಗ್ರಾಹಕರು ಕೇವಲ ರೂ. 849 ಪಾವತಿಸಬೇಕಾಗುತ್ತದೆ. ಇಷ್ಟು ಕಡಿಮೆ ಬೆಲೆಗೆ ನೀವು 32 ಇಂಚಿನ ಸ್ಮಾರ್ಟ್ LED ಟಿವಿಯನ್ನು ಖರೀದಿಸಲು ಸಾಧ್ಯವೇ ಇಲ್ಲ.


ಇದನ್ನೂ ಓದಿ: Apple iPhone: ಎಲ್ಲಾ ಐಫೋನ್‌ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸರ್ಕಾರ! ಕಾರಣವೇನು?


ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:


ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಈ ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್‌ ಬೆಂಬಲವನ್ನು ಪಡೆಯಬಹುದು. ಇಂಟರ್ನೆಟ್‌ಗೆ ಸಂಪರ್ಕಿಸುವ ಮೂಲಕ, ನೀವು ಈ ಅಪ್ಲಿಕೇಶನ್‌ಗಳಿಂದ ಇತ್ತೀಚಿನ ಚಲನಚಿತ್ರಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಬಹುದು. ಈ ಸ್ಮಾರ್ಟ್ LED ಟಿವಿಯಲ್ಲಿ 24 W ಸೌಂಡ್ ಔಟ್‌ಪುಟ್ ನೀಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.