iPhone Box Charger Issue: ಐಫೋನ್ ವಿರುದ್ಧ ಪ್ರಮುಖ ಕ್ರಮವನ್ನು ಕೈಗೊಂಡಿರುವ ಬ್ರೆಜಿಲ್ ಸರ್ಕಾರವು ದೇಶದ ಆಪಲ್ ಸ್ಟೋರ್ಗಳಿಂದ ಹೆಚ್ಚಿನ ಸಂಖ್ಯೆಯ ಐಫೋನ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜನರು ಐಫೋನ್ನ ಬಾಕ್ಸ್ನೊಳಗೆ ಚಾರ್ಜರ್ ನೀಡುವುದಿಲ್ಲ ಎಂದು ನಿರಂತರವಾಗಿ ದೂರುತ್ತಿದ್ದಾರೆ. ಈ ರೀತಿ ಮಾಡುವುದು ತಪ್ಪಾಗಿದೆ. ಐಫೋನ್ ಬಾಕ್ಸ್ ನಲ್ಲಿ ಚಾರ್ಜರ್ ಸಿಗಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ಇದರಿಂದಾಗಿ ಸರ್ಕಾರ ಆಪಲ್ಗೆ ಲಕ್ಷಾಂತರ ಡಾಲರ್ಗಳ ದಂಡವನ್ನೂ ವಿಧಿಸಿದೆ, ಆದರೆ ಇದನ್ನು ಕಂಪನಿಯು ಲೆಕ್ಕಿಸದ ಕಾರಣ ಸರ್ಕಾರವು ೀ ದೊಡ್ಡ ಕ್ರಮವನ್ನು ತೆಗೆದುಕೊಂಡಿದೆ.
ಇದನ್ನೂ ಓದಿ : Amazing offer! ₹14,999 ಬೆಲೆಯ ಸ್ಮಾರ್ಟ್ಫೋನ್ ಕೇವಲ ₹549 ಗೆ ಲಭ್ಯ
ವಾಸ್ತವವಾಗಿ, ಬ್ರೆಜಿಲ್ ಸರ್ಕಾರವು ದೇಶಾದ್ಯಂತ ಆಪಲ್ ಸ್ಟೋರ್ಗಳು ಮತ್ತು ಮರುಮಾರಾಟಗಾರರಿಂದ ಹೆಚ್ಚಿನ ಸಂಖ್ಯೆಯ ಐಫೋನ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಂಪನಿಗೆ ಈ ಕ್ರಮದಿಂದ ದೊಡ್ಡ ಹೊಡೆತ ಬಿದ್ದಿದೆ. 2020 ರಲ್ಲಿ ಐಫೋನ್ 12 ಅನ್ನು ಬಿಡುಗಡೆ ಮಾಡಿದ ನಂತರ, ಬಾಕ್ಸ್ನಲ್ಲಿ ಚಾರ್ಜರ್ ಇಲ್ಲದಿರುವ ವಿಚಾರ ಮುನ್ನೆಲೆಗೆ ಬಂದಿತು. ಈ ವಿಷಯದ ಬಗ್ಗೆ ಆಪಲ್ ಅನ್ನು ನಿರಂತರವಾಗಿ ಎಚ್ಚರಿಸಲಾಗುತ್ತಿದೆ ಮತ್ತು ಮಿಲಿಯನ್ ಡಾಲರ್ಗಳ ದಂಡವನ್ನು ಸಹ ವಿಧಿಸಲಾಗಿದೆ. ಇದರ ಹೊರತಾಗಿಯೂ ಕಂಪನಿಯು ಚಾರ್ಜರ್ ನೀಡಲು ಸಿದ್ಧವಾಗಿಲ್ಲ.
9To5Mac ನ ವರದಿಯ ಪ್ರಕಾರ, ಆಪಲ್ ತನ್ನ ಗ್ರಾಹಕರಿಗೆ ಬಾಕ್ಸ್ನಲ್ಲಿ ಐಫೋನ್ ಜೊತೆ ನಿರಂತರವಾಗಿ ಚಾರ್ಜರ್ ಒದಗಿಸದ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವವರೆಗೆ ಅಥವಾ ಯಾವುದೇ ಹೊಸ ನಿಯಮವನ್ನು ಮಾಡುವವರೆಗೆ, ದೇಶದಲ್ಲಿ ಐಫೋನ್ಗಳನ್ನು ಮಾರಾಟ ಮಾಡಲು ಅನುಮತಿಸಲಾಗುವುದಿಲ್ಲ. ಚಾರ್ಜರ್ ಇಲ್ಲದೆ ಐಫೋನ್ ಅಪೂರ್ಣವಾಗಿದ್ದು, ಕಂಪನಿಯು ನಿರಂತರವಾಗಿ ಅಪೂರ್ಣ ಉತ್ಪನ್ನವನ್ನು ಕಳುಹಿಸುತ್ತಿರುವುದರಿಂದ ಮತ್ತು ಚಾರ್ಜರ್ಗೆ ಪ್ರತ್ಯೇಕ ಹಣ ವಸೂಲಿ ಮಾಡುತ್ತಿರುವುದರಿಂದ ಐಫೋನ್ನೊಂದಿಗೆ ಚಾರ್ಜರ್ ಅನ್ನು ಸಹ ನೀಡಬೇಕು ಎಂಬುದು ಜನರ ಮತ್ತು ಸರ್ಕಾರದ ಆಗ್ರಹವಾಗಿದೆ. ಬ್ರೆಜಿಲ್ ಸರಕಾರದ ಈ ನಿರ್ಧಾರದಿಂದ ಆ್ಯಪಲ್ ಗೆ ದೊಡ್ಡ ಪೆಟ್ಟು ಬಿದ್ದಿದೆ.ಆದರೆ ಇದೀಗ ಆ ಕಂಪನಿಯು ಬಾಕ್ಸ್ ನಲ್ಲಿ ಚಾರ್ಜರ್ ನೀಡುತ್ತದೆಯೇ ಅಥವಾ ಸರಕಾರದ ನಿರ್ಧಾರವನ್ನು ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ : 7.5 ಕೆಜಿಯ ಈ Fully Automatic ವಾಷಿಂಗ್ ಮಷಿನ್ ಮೇಲೆ ಭಾರಿ ರಿಯಾಯಿತಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.