Hyundai Cars Discount Offers : ಜುಲೈ 2023 ರಲ್ಲಿ, ಹ್ಯುಂಡೈ ತನ್ನ ಗ್ರಾಂಡ್ i10 ನಿಯೋಸ್, ಔರಾ, i20, i20 N ಲೈನ್, ಅಲ್ಕಾಜರ್ ಮತ್ತು ಕೋನಾ EV ಗಳ ಮೇಲೆ ಭಾರೀ  ರಿಯಾಯಿತಿಗಳನ್ನು ನೀಡುತ್ತಿದೆ. ಆದರೆ, ವೆನ್ಯೂ, ವೆನ್ಯೂ ಎನ್ ಲೈನ್, ವೆರ್ನಾ, ಕ್ರೆಟಾ ಮತ್ತು ಟಕ್ಸನ್‌ನಂತಹ ಜನಪ್ರಿಯ ಮಾದರಿಗಳ ಮೇಲೆ  ಯಾವುದೇ ರೀತಿಯ ಕೊಡುಗೆಗಳಿಲ್ಲದೆ ಮಾರಾಟವಾಗುತ್ತಿವೆ. 


COMMERCIAL BREAK
SCROLL TO CONTINUE READING

ಹುಂಡೈ ಗ್ರಾಂಡ್ ಐ10 ನಿಯೋಸ್ : 
ಹುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ಮೇಲೆ 25,000 ರೂ. ವರೆಗೆ ನಗದು ರಿಯಾಯಿತಿ,  10,000 ರೂ. ವರೆಗೆ ಹೆಚ್ಚುವರಿ ವಿನಿಮಯ ರಿಯಾಯಿತಿ ಮತ್ತು 3,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿ ನೀಡಲಾಗಿದೆ. ಅಂದರೆ ಈ ಕಾರಿನ ಮೇಲೆ ಒಟ್ಟು 38,000 ರೂ.ವರೆಗೆ ರಿಯಾಯಿತಿ ಕಲ್ಪಿಸಲಾಗಿದೆ. ಈ ಹ್ಯಾಚ್‌ಬ್ಯಾಕ್‌ನ ಬೆಲೆ 5.73 ಲಕ್ಷದಿಂದ 
8.51 ಲಕ್ಷದವರೆದೆಗೆ ಇದೆ. 


ಇದನ್ನೂ ಓದಿ : ಚಂದ್ರಯಾನಕ್ಕೆ ಕ್ಷಣಗಣನೆ: ಚಂದ್ರಯಾನ-3ರ ಉಡಾವಣೆಯ ಪ್ರತಿ ಹಂತದ ಮಾಹಿತಿ


ಹ್ಯುಂಡೈ ಔರಾ : 
ಹ್ಯುಂಡೈ ಔರಾ ಮೇಲೆ 20,000 ರೂ.ವರೆಗೆ ನಗದು ರಿಯಾಯಿತಿ, 10,000 ರೂ. ವರೆಗಿನ ಹೆಚ್ಚುವರಿ ವಿನಿಮಯ ರಿಯಾಯಿತಿ ಮತ್ತು 3,000 ರೂ.  ವರೆಗೆ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. ಈ ಎಲ್ಲಾ ರಿಯಾಯಿತಿಯನ್ನು ಸೇರಿಸಿದರೆ ಒಟ್ಟು 33,000 ರೂ.ವರೆಗೆ ರಿಯಾಯಿತಿ  ಸಿಕ್ಕಿದಂತಾಗುತ್ತದೆ. ಈ ಸೆಡಾನ್ ಬೆಲೆ 6.33 ಲಕ್ಷದಿಂದ 8.90 ಲಕ್ಷದವರೆಗೆ ಇದೆ.


ಹ್ಯುಂಡೈ i20: 
ಹ್ಯುಂಡೈ i20 ಖರೀದಿ ಮೇಲೆ 10,000 ರೂಪಾಯಿಗಳವರೆಗೆ ನಗದು ರಿಯಾಯಿತಿ  10,000 ರೂಪಾಯಿಗಳವರೆಗೆ ಹೆಚ್ಚುವರಿ ವಿನಿಮಯ ರಿಯಾಯಿತಿ ನೀಡಲಾಗುತ್ತಿದೆ. ಈ ರೀತಿಯಾಗಿ, ಒಟ್ಟು 20,000 ರೂ.ವರೆಗೆ ರಿಯಾಯಿತಿ ಕೊಡುಗೆ ಈ ಕಾರು ಖರೀದಿ ಮೇಲೆ ಸಿಗುತ್ತದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬೆಲೆ 7.46 ಲಕ್ಷದಿಂದ 12.31 ಲಕ್ಷದವರೆಗೆ ಇರುತ್ತದೆ.


ಇದನ್ನೂ ಓದಿ : ಚಂದ್ರನ ಅಂಗಳಕ್ಕಿಳಿಯಲು ಭಾರತದ ಸಿದ್ಧತೆ: ಬಾಹ್ಯಾಕಾಶ ಯೋಜನೆಗಳ ಸಾಕಾರಕ್ಕೆ ಹೊಸ ಹಾದಿ


ಹ್ಯುಂಡೈ ಅಲ್ಕಾಜರ್ : 
ಹ್ಯುಂಡೈ ಅಲ್ಕಾಜರ್ ಹೆಚ್ಚುವರಿ ಎಕ್ಸ್‌ಚೇಂಜ್ ಡಿಸ್ಕೌಂಟ್ 20,000 ರೂ.ವರೆಗೆ ಮಾತ್ರ ನೀಡಲಾಗುತ್ತಿದೆ. ಈ ಎಸ್‌ಯುವಿ ಬೆಲೆ 16.78 ಲಕ್ಷದಿಂದ 21.13 ಲಕ್ಷದವರೆಗೆ ಇದೆ.


ಹುಂಡೈ ಕೋನಾ EV : 
ಹುಂಡೈ ಕೋನಾ EV ಖರೀದಿ ಮೇಲೆ  1,00,000 ರೂ. ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಈ ಕಾರಿನ ಮೇಲೆ ಯಾವುದೇ ರೀತಿಯ ಹೆಚ್ಚುವರಿ ವಿನಿಮಯ ರಿಯಾಯಿತಿ ಅಥವಾ ಕಾರ್ಪೊರೇಟ್ ರಿಯಾಯಿತಿ ಇಲ್ಲ. ಇದರ ಬೆಲೆ 23.84 ಲಕ್ಷದಿಂದ 24.03 ಲಕ್ಷ ರೂ.ವರೆಗೆ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.