ಬೆಂಗಳೂರು : ಐಫೋನ್ ಅಂದರೆ ದುಬಾರಿ ಫೋನ್. ಈ ಕಾರಣಕ್ಕಾಗಿಯೇ ಇದನ್ನೂ ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಈ ದುಬಾರಿ ಫೋನ್ ಮೇಲೆ ರಿಯಾಯಿತಿ ಸಿಕ್ಕಿದರೆ ? ರಿಯಾಯಿತಿ ಎನ್ನುವುದಕ್ಕಿಂತ ಭಾರೀ ರಿಯಾಯಿತಿ ಎಂದರೆ ತಪ್ಪಲ್ಲ. ಹೌದು ಐಫೋನ್ 13 ರ ಮೇಲೆ ಭರ್ಜರಿ ರಿಯಾಯಿತಿ ಸಿಗುತ್ತಿದೆ.  Apple ಪ್ರೀಮಿಯಂ ರೀ ಸೇಲ್ ನಲ್ಲಿ 79,900 ರೂ. ಮೌಲ್ಯದ iPhone 13 ಅನ್ನು ಕೇವಲ 52,900 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

iStore ಇಂಡಿಯಾದಲ್ಲಿ iPhone 13 ಮೇಲೆ ರಿಯಾಯಿತಿ :
ಪ್ರೀಮಿಯಂ ಆಪಲ್ ಸೆಲ್ಲರ್ iStoreನಲ್ಲಿ  iPhone 13 ಅನ್ನು ಕೇವಲ 52,900 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ 5,000 ರೂ. ತ್ವರಿತ ರಿಯಾಯಿತಿ ಮತ್ತು HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂ.  ತ್ವರಿತ  ರಿಯಾಯಿತಿ ನೀಡಲಾಗುತ್ತಿದೆ. ಒಂದು ವೇಳೆ ನಿಮ್ಮ ಬಳಿ iPhone XR 64GB ಉತ್ತಮ ಸ್ಥಿತಿಯಲ್ಲಿದ್ದರೆ, ಈ ಫೋನ್ ಮೇಲೆ 18 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡಾ ಸಿಗುತ್ತದೆ. 


ಇದನ್ನೂ ಓದಿ : ಬಟ್ಟೆ ವಾಶ್‌ಗೂ ಸೈ, ನೀರು ತುಂಬಿಸಲು ಜೈ.. ಈ ವಿಶೇಷ ಬಕೆಟ್‌ ಬೆಲೆ ತುಂಬಾ ಅಗ್ಗ!


ಈ ಸೇಲ್ ನಲ್ಲಿ 256GBಯ ಬೆಲೆ 62,900 ರೂ. 512GB ಬೆಲೆ 82,900 ರೂ. ಹಸಿರು ಐಫೋನ್ 13  ಸಹ ರೂ 52,900 ಗೆ ಲಭ್ಯವಿದೆ. ಇದಲ್ಲದೆ, iPhone 13 Pro, iPhone 13 Pro Max, iPhone SE 3 ಮತ್ತು iPhone 13 Mini ನಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ಸಹ ಇಲ್ಲಿ ನೀಡಲಾಗುತ್ತಿದೆ. 


iPhone 13 ವಿಶೇಷಣಗಳು :
Apple ನ iPhone 13 6.1 Super Retina XDR OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್ iOS 15 ಮತ್ತು Apple ನ A15 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಎರಡು 12MP ಕ್ಯಾಮೆರಾಗಳ ಡ್ಯುಯಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ.  ಅದು 4K ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 12MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5G ಸಂಪರ್ಕ, MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು Wi-Fi 6 ಸಂಪರ್ಕ ಬೆಂಬಲವನ್ನು ಬೆಂಬಲಿಸುತ್ತದೆ.


ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಲು ಈ ಸಣ್ಣ ಟ್ರಿಕ್ ಟ್ರೈ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.