ಇದ್ದಕ್ಕಿದ್ದಂತೆ ಕಡಿಮೆಯಾದ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಬೆಲೆ.! ಹೊಸ ಬೆಲೆ ಕೇಳಿ ಗ್ರಾಹಕರು ಫುಲ್ ಖುಷ್
Samsung Galaxy A32 Price Cut: ಗ್ಯಾಲಕ್ಸಿ ಎ 32 ಬೆಲೆಯನ್ನು ಇದೀಗ ಕಡಿತ ಮಾಡಲಾಗಿದೆ. ಈ ಫೋನ್ ಬೆಲೆ ಇದ್ದಕ್ಕಿದ್ದಂತೆ ಸಾಕಷ್ಟು ಕಡಿಮೆಯಾಗಿದೆ.
Samsung Galaxy A32 Price Cut : ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 33 5ಜಿ ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಈ ಹಿಂದೆ, ಬಿಡುಗಡೆಯಾಗಿದ್ದ ಗ್ಯಾಲಕ್ಸಿ ಎ 32 ಬೆಲೆಯನ್ನು ಇದೀಗ ಕಡಿತ ಮಾಡಲಾಗಿದೆ. ಈ ಫೋನ್ ಬೆಲೆ ಇದ್ದಕ್ಕಿದ್ದಂತೆ ಸಾಕಷ್ಟು ಕಡಿಮೆಯಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಹೊಸ ಬೆಲೆ:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. 6GB RAM + 128GB ಸ್ಟೋರೇಜ್ ಮಾಡೆಲ್ ಬೆಲೆ 24,999 ರೂ ಮತ್ತು 8GB RAM + 128GB ಸ್ಟೋರೇಜ್ ಮಾಡೆಲ್ ಬೆಲೆ 27,999 ರೂ. ಆದರೆ ಬೆಲೆ ಕಡಿತದ ನಂತರ, Amazon India ನಲ್ಲಿ ಈ ಮಾದರಿಗಳ ಬೆಲೆ 18,899 ಮತ್ತು 18,870 ರೂ. ಗೆ ಲಭ್ಯವಿದೆ.
ಇದನ್ನೂ ಓದಿ : POCO M5: 700 ರೂ.ಗಿಂತ ಕಡಿಮೆ ಬೆಲೆಗೆ 50MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‍ಫೋನ್ ಖರೀದಿಸಿ!
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ32 ವಿಶೇಷಣಗಳು :
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ32 90Hz ರಿಫ್ರೆಶ್ ರೇಟ್, 800 nits ಬ್ರೈಟ್‌ನೆಸ್ ಮತ್ತು ಕಡಿಮೆ ಬ್ಲೂ ಲೈಟ್ ಗೆ SGS ಪ್ರಮಾಣೀಕರಣದೊಂದಿಗೆ ಬರುತ್ತದೆ. 6.4-ಇಂಚಿನ ಸೂಪರ್ AMOLED FHD+ ಇನ್ಫಿನಿಟಿ-ಯು ಡಿಸ್ಪ್ಲೇಯನ್ನು ಈ ಫೋನ್ ಹೊಂದಿದೆ. ಫೋನ್ ಒಳಗೆ MediaTek Helio G80 CPU ಅನ್ನು 8GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಸಹಾಯದಿಂದ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ32 ಕ್ಯಾಮೆರಾ :
ಈ ಫೋನ್ ನ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳಿವೆ. 64MP f/1.8 ಮುಖ್ಯ ಲೆನ್ಸ್, 8MP f/2.2 123-ಡಿಗ್ರಿ ಅಲ್ಟ್ರಾ-ವೈಡ್ ಲೆನ್ಸ್, ಮತ್ತು ಎರಡು f/2.4 5MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 20MP f/2.2 ಸೆಲ್ಫಿ ಕ್ಯಾಮೆರಾ ಇರಲಿದೆ. ಇದಲ್ಲದೆ, ಸಾಧನವು 15W ಚಾರ್ಜಿಂಗ್, USB-C ಮತ್ತು 3.5mm ಆಡಿಯೊ ಜ್ಯಾಕ್ ಸಂಪರ್ಕಗಳೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ : Cheapest Jio Plan: 3 ಟಾಪ್ ಓಟಿಟಿಗಳ ಉಚಿತ ಚಂದಾದಾರಿಕೆ ಮತ್ತು ಹಲವು ಸೌಲಭ್ಯಗಳು ಬೆಲೆ ಕೇವಲ...?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.