ನವದೆಹಲಿ: ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತಮ ಆಯ್ಕೆ. ಪ್ರಸಿದ್ಧ POCO ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ POCO M5 ಸ್ಮಾರ್ಟ್‍ಫೋನ್ ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಿದೆ.
ಇಂದಿನಿಂದ ಅಂದರೆ ಸೆಪ್ಟೆಂಬರ್ 13ರಿಂದ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಎಲ್ಲಾ ಆಫರ್‍ಗಳ ಸಹಾಯದಿಂದ ನೀವು ಈ ಫೋನ್ ಅನ್ನು 700 ರೂ.ಗಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
POCO M5 ಮೇಲೆ ಭಾರೀ ರಿಯಾಯಿತಿ
POCO M5 ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 4GB ಮತ್ತು 64GB ಸ್ಟೋರೇಜ್ ಹೊಂದಿರುವ ಈ ಫೋನಿನ ಬೆಲೆ 12,499 ರೂ. ಆಗಿದೆ. ನೀವು 6GB RAM ಮತ್ತು 128GB ROM ನೊಂದಿಗೆ ಇದನ್ನು ಖರೀದಿಸಬಹುದು. ನೀವು ಆಕ್ಸಿಸ್ ಬ್ಯಾಂಕ್ ಅಥವಾ ICICI ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ 1,222 ರೂ.ಗಳ ತ್ವರಿತ ರಿಯಾಯಿತಿ ಪಡೆಯುತ್ತೀರಿ. ಆಗ ಈ ಫೋನ್ ಬೆಲೆ 11,277 ರೂ. ಆಗುತ್ತದೆ.
ಇದನ್ನೂ ಓದಿ: Post Office ಈ ಯೋಜನೆಯಲ್ಲಿ ಕೇವಲ ₹50 ಹೂಡಿಕೆ ಮಾಡಿ 35 ಲಕ್ಷದವರೆಗೆ ಲಾಭ ಸಿಗಲಿದೆ!
ಈ ರೀತಿ 649 ರೂ.ಗೆ POCO M5 ಖರೀದಿಸಿ
POCO M5 ಡೀಲ್‌ನಲ್ಲಿ ವಿನಿಮಯ ಕೊಡುಗೆ ಸಹ ನೀಡಲಾಗುತ್ತಿದೆ. ಹಳೆಯ ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ ನೀವು 11,850 ರೂ.ವರೆಗೆ ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ ಈ ಫೋನ್‌ನ ಬೆಲೆ ನಿಮಗೆ 649 ರೂ. ಆಗುತ್ತದೆ. ಈ ರೀತಿ ನೀವು ಸುಮಾರು 13 ಸಾವಿರ ರೂ. ಮೌಲ್ಯದ ಫೋನ್ ಅನ್ನು 700 ರೂ.ಗಿಂತ ಕಡಿಮೆ ಬೆಲೆಗೆ ಮನೆಗೆ ತೆಗೆದುಕೊಂಡು ಹೋಗಬಹುದು.
POCO M5ನ ವೈಶಿಷ್ಟ್ಯಗಳು
POCO M5ನ ಪ್ರೊಸೆಸರ್ ಕುರಿತು ಮಾತನಾಡುವುದಾದರೆ ಈ Poco ಸ್ಮಾರ್ಟ್‌ಫೋನ್ Mediatek Helio G99 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಈ ಕ್ಯಾಮೆರಾ ಸೆಟಪ್ 50MP ಮುಖ್ಯ ಸೆನ್ಸಾರ್, 2MP Deep ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸೆನ್ಸಾರ್ ಒಳಗೊಂಡಿದೆ. ಈ ಫೋನ್ 8MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ.
6GBಯ RAM ಮತ್ತು 128GBವರೆಗಿನ ಸ್ಟೋರೇಜ್ ಹೊಂದಿರುವ ಈ ಫೋನ್ 6.58-ಇಂಚಿನ ಪೂರ್ಣ HD + ಡಿಸ್ಪ್ಲೇ, ತ್ವರಿತ ಚಾರ್ಜಿಂಗ್ ಬೆಂಬಲ, ಡ್ಯುಯಲ್ ಸಿಮ್ ಸೌಲಭ್ಯ ಮತ್ತು ಆಡಿಯೋ ಜ್ಯಾಕ್ ಜೊತೆಗೆ 5000mAh ಬ್ಯಾಟರಿ ಸಹ ಹೊಂದಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಇದು 4G ಸ್ಮಾರ್ಟ್‌ಫೋನ್ ಆಗಿರುತ್ತದೆ.
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗುವುದು 9 ಸಾವಿರ ರೂಪಾಯಿ ಪಿಂಚಣಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.