Smartphone Tips: ಪ್ರತಿಯೊಬ್ಬರ ಜೀವನಾಡಿ ಆಗಿರುವ ಸ್ಮಾರ್ಟ್‌ಫೋನ್‌ ಬಳಕೆಗೆ ನೆಟ್‌ವರ್ಕ್ ಬಹಳ ಮುಖ್ಯ. ನೆಟ್‌ವರ್ಕ್ ಇಲ್ಲದಿದ್ದರೆ ಒಂದು ಕರೆ ಮಾಡುವುದು ಕೂಡ ಅಸಾಧ್ಯ. ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಒಂದು ಸೆಟ್ಟಿಂಗ್ ಚೇಂಜ್ ಮಾಡಿದ್ರೆ ಸಾಕು ನೆಟ್‌ವರ್ಕ್ ಇಲ್ಲದಿದ್ರೂ ಕಾಲ್ ಮಾಡಬಹುದು. 


COMMERCIAL BREAK
SCROLL TO CONTINUE READING

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಪರವಾಗಿಲ್ಲ ವೈಫೈ ಸಂಪರ್ಕ ಇದ್ದರೆ ನೀವು ಯಾವುದೇ ಸಮಸ್ಯೆ ಇಲ್ಲದೆ ಕಾಲ್ ಮಾಡಬಹುದು. ರಿಲಯನ್ಸ್ ಜಿಯೋ, ಏರ್‌ಟೆಲ್ ಟೆಲಿಕಾಂ ಬಳಕೆದಾರರಿಗೆ ಈ ಸೌಲಭ್ಯ ಸುಲಭವಾಗಿ ಲಭ್ಯವಾಗಲಿದೆ. 


ಇದನ್ನೂ ಓದಿ- ಸರ್ವಿಸ್ ಮಾಡಿಸ್ದೆ ಹಾಗೇ AC ಯೂಸ್ ಮಾಡ್ತೀರಾ, ನಿಮ್ಮ ಪ್ರಾಣಕ್ಕೇ ಕುತ್ತಾಗಬಹುದು ಹುಷಾರ್!


ಜಿಯೋ ಬಳಕೆದಾರರು ವೈಫೈ ಕರೆ ಮಾಡಲು ಈ ರೀತಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕು:- 
ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ನೀವು ಸುಲಭವಾಗಿ ಈ ವೈ-ಫೈ ಕಾಲಿಂಗ್ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ಗಳಿಗೆ ಹೋಗಿ, ಇಲ್ಲಿ ಮೊಬೈಲ್ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರಲ್ಲಿ ವೈ-ಫೈ ಕಾಲಿಂಗ್ ಎಂಬ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಆಕ್ಟಿವ್ ಮಾಡಿದರೆ ನಿಮಗೆ ವೈಫೈ ಕರೆ ಸೌಲಭ್ಯ ಲಭ್ಯವಾಗುತ್ತದೆ. 


ಇದನ್ನೂ ಓದಿ- ಮಿತ ವಿದ್ಯುತ್ ಬಿಲ್ ಜೊತೆಗೆ ತಂಪಾದ ಹವಾ ಆನಂದಿಸಲು ಇಂದೇ ಖರೀದಿಸಿ ಈ ಪೋರ್ಟಬಲ್ ಎಸಿ


ಏರ್‌ಟೆಲ್ ಗ್ರಾಹಕರು ವೈ-ಫೈ ಕರೆ ಸೌಲಭ್ಯವನ್ನು ಈ ರೀತಿ ಸಕ್ರಿಯಗೊಳಿಸಿ: 
ನೀವು ಏರ್‌ಟೆಲ್ ಗ್ರಾಹಕರಾಗಿದ್ದು ಏರ್‌ಟೆಲ್ ಫೈಬರ್ ಕನೆಕ್ಷನ್ ಹೊಂದಿದ್ದರೆ ನೀವೂ ಕೂಡ ಈ ಸೌಲಭ್ಯದ ಲಾಭವನ್ನು ಪಡೆಯಬಹುದು. ಇದಕ್ಕಾಗಿ, ಮೇಲೆ ತಿಳಿಸಿದಂತೆಯೇ ನಿಮ್ಮ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್ ಬದಲಾಯಿಸುವ ಮೂಲಕ ನೀವು ಯಾವುದೇ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದರೆ ವೈ-ಫೈ ಸೌಲಭ್ಯವನ್ನು ಆನಂದಿಸಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.