ಇವೇ ನೋಡಿ ಸ್ಮಾರ್ಟ್‌ಫೋನ್‌ನಲ್ಲಿ ಹುಡುಗಿಯರು ಅತಿ ಹೆಚ್ಚು ಬಳಸುವ ಆಪ್‌ಗಳು

ಈಗಂತೂ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳದ್ದೇ ಹಾವಳಿ. ಪ್ರತಿಯೊಬ್ಬರಿಗೂ ಜೀವನಾಡಿ ಆಗಿರುವ ಸ್ಮಾರ್ಟ್‌ಫೋನ್‌ನಲ್ಲಿ ಮಹಿಳೆಯರು ಅತಿ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳು ಯಾವುವು ಎಂದು ಗೊತ್ತಾ? ವರದಿಯೊಂದರ ಪ್ರಕಾರ, ಸುಮಾರು 6.1% ನಷ್ಟು ಭಾರತೀಯ ಮಹಿಳೆಯರು  ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 

Written by - Yashaswini V | Last Updated : Apr 14, 2023, 06:28 PM IST
  • ವರದಿಯು 85 ಮಿಲಿಯನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ರಚಿತವಾದ ಫಸ್ಟ್ ಪಾರ್ಟಿ ಡೇಟಾವನ್ನು ಬಳಸುತ್ತದೆ.
  • ಭಾರತೀಯ ಗ್ರಾಹಕರ ಮೊಬೈಲ್ ಬಳಕೆಯ ಪ್ರವೃತ್ತಿಗಳು ಮತ್ತು ಬೆಳವಣಿಗೆಯನ್ನು ವಿಶ್ಲೇಷಿಸಲು 2022 ಮತ್ತು 2023 ರ ಡೇಟಾವನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.
  • ವರದಿಯ ಪ್ರಕಾರ, ಭಾರತೀಯ ಮಹಿಳೆಯರು ಯಾವ ಆಪ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿಯೋಣ...
ಇವೇ ನೋಡಿ ಸ್ಮಾರ್ಟ್‌ಫೋನ್‌ನಲ್ಲಿ ಹುಡುಗಿಯರು ಅತಿ ಹೆಚ್ಚು ಬಳಸುವ ಆಪ್‌ಗಳು  title=
Which app girls use the most?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಮ್ಮ ಬಹುತೇಕ ಎಲ್ಲಾ ಕೆಲಸಗಳು ಸಹ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಪೂರ್ಣಗೊಳ್ಳುತ್ತವೆ. ವರದಿಯೊಂದರ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಸಮಯ ಕಳೆಯುವವರ ಸಂಖ್ಯೆ 50% ನಷ್ಟು ಹೆಚ್ಚಾಗಿದೆ. ಮಾತ್ರವಲ್ಲ, ಎಲ್ಲೆಡೆ ಆನ್ಲೈನ್ ಪೇಮೆಂಟ್ ಜನಪ್ರಿಯವಾಗುತ್ತಿದೆ. ಈ ಕುರಿತಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸ್ಟಾರ್ಟ್-ಅಪ್ ಬಾಬಲ್ ಎಐ ವರದಿ ಮಾಡಿದ್ದು, ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಯಾವ ಅಪ್ಲಿಕೇಷನ್‌ಗಳನ್ನು ಬಳಸುತ್ತಾರೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದೆ. 

ವಾಸ್ತವವಾಗಿ, ಸೆಲ್ ಫೋನ್ ಬಳಕೆಯ ಟ್ರೆಂಡ್‌ಗಳು ಮತ್ತು ವಿವಿಧ ಪ್ಲಾಟ್‌ಫಾರ್ಮ್‌ಗಳಾದ್ಯಂತ ಮಾರುಕಟ್ಟೆ ಮತ್ತು ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಲು ಬಾಬಲ್ AI ನ ಅಧ್ಯಯನವನ್ನು ವರದಿಯು ಆಧರಿಸಿದೆ ಎಂದು ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ- ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇ ಈ ಪುಟ್ಟ ಲ್ಯಾಂಪ್

ಗಮನಾರ್ಹವಾಗಿ, 2022 ಕ್ಕಿಂತ 2023 ರ ಆರಂಭಿಕ ತಿಂಗಳುಗಳಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 50 ಪ್ರತಿಶತ ಹೆಚ್ಚು ಸಮಯವನ್ನು ಕಳೆದಿದ್ದಾರೆ ಎಂದು ಒಟ್ಟಾರೆ ಡೇಟಾದಿಂದ ತಿಳಿದುಬಂದಿದೆ. ಭಾರತದಲ್ಲಿ ಹೆಚ್ಚಿನ ಜನ  (ಒಟ್ಟು 76.68 ಪ್ರತಿಶತ) ಸಂವಹನ ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಮತ್ತು ವೀಡಿಯೊ ಅಪ್ಲಿಕೇಶನ್‌ಗಳಲ್ಲಿ ಕಳೆಯುತ್ತಾರೆ ಎನ್ನಲಾಗಿದೆ. ಈ ವರದಿಯಲ್ಲಿ ಭಾರತೀಯ ಮಹಿಳೆಯರು  ಯಾವ ಆಪ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. 

ಇದನ್ನೂ ಓದಿ- ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಉಚಿತವಾಗಿ ಸಿಗಲಿದೆ ವಿದ್ಯುತ್

ವರದಿಯ ಪ್ರಕಾರ, ಮಹಿಳೆಯರ ಭಾಗವಹಿಸುವಿಕೆ ಕೂಡ ಅಪ್ಲಿಕೇಶನ್‌ನಿಂದ ಅಪ್ಲಿಕೇಶನ್‌ಗೆ ಬದಲಾಗುತ್ತದೆ. 
* 6.1 ರಷ್ಟು ಮಹಿಳೆಯರು ಮಾತ್ರ ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯರಾಗಿದ್ದಾರೆ.
* ಸುಮಾರು  23.5 ಪ್ರತಿಶತದಷ್ಟು ಮಹಿಳೆಯರು ಕುಕ್ಕಿಂಗ್ ಆಪ್‌ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 
* 23.3 ಶೇಕಡಾ ರಷ್ಟು ಮಹಿಳೆಯರು ವೀಡಿಯೊ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. 
* ಆದಾಗ್ಯೂ, 11.3% ರಷ್ಟು ಮಹಿಳೆಯರು ಮಾತ್ರ ಸ್ಮಾರ್ಟ್‌ಫೋನ್‌ಗಳ ಮೂಲಕ ಪಾವತಿ ಮಾಡುತ್ತಾರೆ ಎಂಬ ಮಾಹಿತಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸ್ಟಾರ್ಟ್-ಅಪ್ ಬಾಬಲ್ ಎಐ ವರದಿಯಿಂದ ಬಹಿರಂಗಗೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News