Phone hack symptoms : ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಾವು ಹಲವು ಕೆಲಸಗಳಿಗೆ ಸ್ಮಾರ್ಟ್ ಫೋನ್ ಬಳಸುತ್ತೇವೆ. ಹೀಗಿರುವಾಗ ನಮ್ಮ ಸ್ಮಾರ್ಟ್ ಫೋನ್ ಹ್ಯಾಕರ್ ಕೈಗೆ ಸಿಕ್ಕಿಬಿಟ್ಟರೆ ಅಪಾರ ನಷ್ಟ ಅನುಭವಿಸಬೇಕಾಗಬಹುದು. ಅದಕ್ಕಾಗಿ ನಾವು ಫೋನ್‌ ಹ್ಯಾಕ್ ಆಗದಂತೆ ರಕ್ಷಿಸಬಹುದು. ಅಷ್ಟೇ ಅಲ್ಲ ನಿಮ್ಮ ಸ್ಮಾರ್ಟ್ ಫೋನ್ ನಿಂದ ಹ್ಯಾಕರ್‌ಗಳು ಡೇಟಾ ಕದಿಯುತ್ತಿದ್ದರೆ ಅದರ ಮಾಹಿತಿ ಪಡೆಯಬಹುದು. ಅದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಂಡುಬರುವ ಕೆಲವು ಚಿಹ್ನೆಗಳತ್ತ ಗಮನ ಹರಿಸಬೇಕು.


COMMERCIAL BREAK
SCROLL TO CONTINUE READING

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಯಾವುದೇ ಅಪ್ಲಿಕೇಶನ್ ಕ್ಯಾಮರಾ ಅಥವಾ ಮೈಕ್ ಅನ್ನು ಪ್ರವೇಶಿಸಿದಾಗ, ನಿಮ್ಮ ಕ್ಯಾಮರಾ ಮತ್ತು ಮೈಕ್‌ನ ಹಸಿರು ಸೂಚಕವು ಪರದೆಯ ಮೇಲ್ಭಾಗದಲ್ಲಿ ಮಿನುಗಲು ಪ್ರಾರಂಭಿಸುತ್ತದೆ. ಇದರ ಅರ್ಥ ನೀವು ಆ ಅಪ್ಲಿಕೇಶನ್ ಅನ್ನು ತೆರೆದಿದ್ದೀರಿ ಅಂತ. 


ಇದನ್ನೂ ಓದಿ:ಶ್ರೀಪೆರುಂಬದೂರು ಬಳಿ 700 ಕೋಟಿ ರೂ ಮೌಲ್ಯದ 1,425 ಕೆಜಿ ಚಿನ್ನದ ಬಾರ್‌ಗಳು ವಶಕ್ಕೆ


ಒಂದು ವೇಳೆ ನೀವು ಆ ಆಪ್‌ಗಳನ್ನು ಬಳಸದೆ ಇದ್ದರೂ ಈ ಸೂಚನೆಗಳನ್ನು ತೋರಿಸಿದರೆ ಬೇರೆ ಯಾರೋ ಅವುಗಳನ್ನು ಬಳಕೆ ಮಾಡುತ್ತಿದ್ದಾರೆ ಅಂತ ಅರ್ಘ.  ನಿಮ್ಮ ಫೋನ್‌ನಲ್ಲಿ ಅಂತಹ ಯಾವುದೇ ಸೂಚಕವನ್ನು ನೀವು ನೋಡಿದರೆ, ತಕ್ಷಣವೇ ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ. ಅಪ್ಲಿಕೇಶನ್ ಸೆಟ್ಟಿಂಗ್‌ನಲ್ಲಿ ಕ್ಯಾಮರಾ ಮತ್ತು ಮೈಕ್ರೋಫೋನ್ ಪ್ರವೇಶವನ್ನು ಆಫ್ ಮಾಡಿ. 


ಹ್ಯಾಕರ್‌ಗಳು ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ಮಾಲ್‌ವೇರ್ ಅಥವಾ ವೈರಸ್‌ಗಳನ್ನು ಕಳುಹಿಸಿ, ಫೋನ್‌ನ ಹಿನ್ನೆಲೆಗೆ ಹೋಗಿ ಡೇಟಾವನ್ನು ಕದಿಯುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ ಫೋನ್‌ ಬಿಸಿಯಾಗಲು ಪ್ರಾರಂಭಿಸುತ್ತದೆ. ಇದರ ಅರ್ಥ ಹ್ಯಾಕರ್‌ಗಳು ನಿಮ್ಮ ಡೇಟಾ ವೀಕ್ಷಿಸುತ್ತಿದ್ದಾರೆ ಅಂತ.


ಇದನ್ನೂ ಓದಿ:7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್‌ ಜೋಡಿ!


ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ವೀಡಿಯೊವನ್ನು ವೀಕ್ಷಿಸಿದ ನಂತರ ಸಂಗೀತವನ್ನು ಸ್ಟ್ರೀಮ್ ಮಾಡಿದರೆ, ಫೋನ್‌ನ ಡೇಟಾ ಬಳಕೆ ಹೆಚ್ಚಾಗುತ್ತದೆ. OTT ಅಪ್ಲಿಕೇಶನ್ ಬಳಸದೆಯೇ ನಿಮ್ಮ ಡೇಟಾ ತ್ವರಿತವಾಗಿ ಖಾಲಿಯಾಗುತ್ತಿದ್ದರೆ, ಇದು ಸ್ಮಾರ್ಟ್‌ಫೋನ್‌ನ ಹಿನ್ನೆಲೆಯಲ್ಲಿ ಡೇಟಾ ಮೈನಿಂಗ್ ಮಾಡಲಾಗುತ್ತಿದೆ ಎಂಬುವುದನ್ನು ಸೂಚಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.