ರಿಲಯನ್ಸ್ ಜಿಯೋ ಹೊಸ ರೀತಿಯ ವಂಚನೆಯ ಬಗ್ಗೆ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ವಂಚನೆ ಜಾಲದಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳು ಬರುತ್ತವೆ. ಈ ಸಂಖ್ಯೆಗಳಿಗೆ ನೀವು ಮತ್ತೆ ಕರೆ ಮಾಡಿದರೆ ನೀವು ಭಾರೀ ಫೋನ್ ಬಿಲ್ ತೆರಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಏನಿದು premium rate service scam? :
ಪ್ರೀಮಿಯಂ ರೇಟ್ ಸರ್ವಿಸ್ ಸ್ಕ್ಯಾಮ್ ನಲ್ಲಿ ಬಳಕೆದಾರರಿಗೆ ಅಪರಿಚಿತ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಸ್ಡ್ ಕಾಲ್ ಬರುತ್ತದೆ. ಬಳಕೆದಾರರು ಈ ಸಂಖ್ಯೆಗಳಿಗೆ ಮರಳಿ ಕರೆ ಮಾಡಿದರೆ, ಅವರನ್ನು ಪ್ರೀಮಿಯಂ ರೇಟ್ ಸರ್ವಿಸ್ ಲಿಸ್ಟ್ ಗೆ  ಸೇರಿಸಲಾಗುತ್ತದೆ. ಈ ಸೇವೆಯಲ್ಲಿ ಕರೆ ಮಾಡಲು ಪ್ರತಿ ನಿಮಿಷಕ್ಕೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. 


ಇದನ್ನೂ ಓದಿ : ಇಸ್ರೋ ನೂತನ ಅಧ್ಯಕ್ಷ ಡಾ ವಿ ನಾರಾಯಣನ್ ಯಾರು? ಇಲ್ಲಿದೆ ಪರಿಚಯ


ಈ ಸ್ಕ್ಯಾಮ್ ಹೇಗೆ ಕೆಲಸ ಮಾಡುತ್ತದೆ? :
ಈ ಸ್ಕ್ಯಾಮ್ ನಲ್ಲಿ ಅಪರಿಚಿತ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ ಬರುತ್ತದೆ. ಈ ಸಂಖ್ಯೆಗಳಿಗೆ ಮರಳಿ ನೀವು ಕರೆ ಮಾಡಿದರೆ, ಆ ಕರೆಗಳಿಗೆ ಸಾಕಷ್ಟು ಶುಲ್ಕ ವಿಧಿಸಲಾಗುತ್ತದೆ. ಈ ಮೂಲಕ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತದೆ. 


ಈ ಸ್ಕ್ಯಾಮ್ ಅನ್ನು ಗುರುತಿಸುವುದು ಹೇಗೆ? :
ಈ ವಂಚನೆಯಲ್ಲಿ, ನಿಮಗೆ ಗೊತ್ತಿಲ್ಲದ ದೇಶದ ಕೋಡ್‌ನ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳು ಬರುತ್ತವೆ. ಇಲ್ಲಿ ವಂಚಕರು ಸಾಮಾನ್ಯವಾಗಿ ನೀವು ಗುರುತಿಸದ ದೇಶದ ಕೋಡ್‌ಗಳನ್ನು ಬಳಸುತ್ತಾರೆ. 


ಇದನ್ನೂ ಓದಿ : ಅಗ್ಗದ ಬೆಲೆಗೆ Redmi Note 13 Pro+ ಖರೀದಿಸಿ; 200MP ಕ್ಯಾಮೆರಾ ಹೊಂದಿರೋ 5G ಫೋನಿನ ಬೆಲೆಯಲ್ಲಿ ಭಾರೀ ಕುಸಿತ!!


ಸುರಕ್ಷಿತವಾಗಿರುವುದು ಹೇಗೆ? :
ನಿಮಗೆ ಕರೆ ಮಾಡುವವರು ಯಾರು ಎನ್ನುವುದು ತಿಳಿದಿಲ್ಲದಿದ್ದರೆ '+91' ಹೊರತುಪಡಿಸಿ ಬೇರೆ ಯಾವುದೇ ಕೋಡ್‌ನಿಂದ ಕರೆ ಬಂದರೂ ಆ ನಂಬರ್ ಗೆ ಮರಳಿ ಕರೆ ಮಾಡಬೇಡಿ. ಅನುಮಾನಾಸ್ಪದ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಪುನರಾವರ್ತಿತ ಕರೆಗಳು ಬಾರದಂತೆ ತಡೆಯಲಿ ನಿಮ್ಮ ಫೋನ್ ನಲ್ಲಿ ಕಾಲ್ ಬ್ಲಾಕ್  ಆಯ್ಕೆಯನ್ನು ಬಳಸಿ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.