Jioದ ಈ ರಿಚಾರ್ಜ್ ಪ್ಲಾನ್ ನಲ್ಲಿ 3 ತಿಂಗಳು ಉಚಿತವಾಗಿ ಸಿಗುತ್ತದೆ Disney+ Hotstar

Reliance Jio Entertainment Plan: ಇಂದು ನಾವು ನಿಮಗೆ ಜಿಯೋದ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಹೇಳಲಿದ್ದೇವೆ.ಇದರಲ್ಲಿ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

Written by - Ranjitha R K | Last Updated : Jan 7, 2025, 05:30 PM IST
  • ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ದೇಶಾದ್ಯಂತ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿದೆ
  • ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆ.
  • ಜಿಯೋದ ಪೈಸಾ ವಸೂಲ್ ಪ್ಲಾನ್
Jioದ ಈ ರಿಚಾರ್ಜ್ ಪ್ಲಾನ್ ನಲ್ಲಿ 3 ತಿಂಗಳು ಉಚಿತವಾಗಿ ಸಿಗುತ್ತದೆ Disney+ Hotstar  title=

Reliance Jio Entertainment Plan : ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ದೇಶಾದ್ಯಂತ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿದೆ. ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ವಿವಿಧ ಬೆಲೆ ಶ್ರೇಣಿಗಳಲ್ಲಿ ಅನೇಕ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಗಳಲ್ಲಿ, ಡೇಟಾ, ಕರೆ ಮತ್ತು SMS ಜೊತೆಗೆ OTT ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ನೀಡುವ ಕೆಲವು ಯೋಜನೆಗಳಿವೆ. ಇಂದು ನಾವು ನಿಮಗೆ ಜಿಯೋದ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಹೇಳಲಿದ್ದೇವೆ. ಇದರಲ್ಲಿ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಜಿಯೋದ ಪೈಸಾ ವಸೂಲ್ ಪ್ಲಾನ್ : 
ಜಿಯೋ ಪೋರ್ಟ್‌ಫೋಲಿಯೊದಲ್ಲಿ ವಿವಿಧ ಬೆಲೆ ಶ್ರೇಣಿಗಳಲ್ಲಿ ಹಲವು ರೀಚಾರ್ಜ್ ಯೋಜನೆಗಳಿವೆ. ಆದರೆ, ಜಿಯೋದ ಪೋರ್ಟ್‌ಫೋಲಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, 949 ರೂ.ಗಳ ಪ್ಲಾನ್ ಕಾಣಿಸುತ್ತದೆ. ಜಿಯೋ ವೆಬ್‌ಸೈಟ್‌ನಲ್ಲಿ ಎಂಟರ್‌ಟೈನ್‌ಮೆಂಟ್ ಪ್ಲಾನ್‌ಗಳ ವಿಭಾಗದಲ್ಲಿ ಈ  ರಿಚಾರ್ಜ್ ಪ್ಲಾನ್ ಕಾಣಿಸುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

ಇದನ್ನೂ ಓದಿ :  ಹೊಸ ವರ್ಷದಲ್ಲಿ 100 ರೂ.ಗಿಂತ ಕಡಿಮೆ ಬೆಲೆಯ ಧಮಾಕ ಆಫರ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್

ಯೋಜನೆಯ ಪ್ರಯೋಜನಗಳು: 
ಈ ಯೋಜನೆಯಲ್ಲಿ, ಜಿಯೋ ಬಳಕೆದಾರರು ಪ್ರತಿದಿನ 100 ಟೆಕ್ಸ್ಟ್ ಮೆಸೇಜ್  ಕಳುಹಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯು ಬಳಕೆದಾರರಿಗೆ ಒಟ್ಟು 168 GB ಡೇಟಾವನ್ನು ನೀಡುತ್ತದೆ. ಈ ರೀತಿಯಲ್ಲಿ ಬಳಕೆದಾರರು ದಿನಕ್ಕೆ 2 GB ಪಡೆಯುತ್ತಾರೆ. ಅಲ್ಲದೆ, 5G ಫೋನ್ ಬಳಸುತ್ತಿದ್ದು, ನಿಮ್ಮ ಏರಿಯಾದಲ್ಲಿ  5G ನೆಟ್‌ವರ್ಕ್ ಲಭ್ಯವಿದ್ದರೆ, 5G ಇಂಟರ್ನೆಟ್ ಅನ್ನು ಸಹ ಬಳಸಬಹುದು. 

ಪ್ಲಾನ್‌ನ ವಿಶೇಷತೆ: 
ಈ ಪ್ಲಾನ್‌ನ ದೊಡ್ಡ ವಿಶೇಷವೆಂದರೆ ಇದರಲ್ಲಿ ಬಳಕೆದಾರರು 3 ತಿಂಗಳವರೆಗೆ ಅಂದರೆ 90 ದಿನಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದಲ್ಲದೆ, ಇದರಲ್ಲಿ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಕೂಡಾ ಪಡೆಯುತ್ತಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಚಲನಚಿತ್ರಗಳು, ವೆಬ್ ಸರಣಿಗಳು ಇತ್ಯಾದಿಗಳನ್ನು ವೀಕ್ಷಿಸಲು ಇಷ್ಟಪಡುವ ಬಳಕೆದಾರರಿಗೆ ಈ ಯೋಜನೆಗಳು ಉತ್ತಮವಾಗಿದೆ. ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಲು ಬಯಸಿದರೆ, ಅದನ್ನು Jioನ ಅಧಿಕೃತ ವೆಬ್‌ಸೈಟ್, My Jio ಅಪ್ಲಿಕೇಶನ್ ಮತ್ತು Google Pay, Phone Pay ಮುಂತಾದ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News