ಆನ್ ಲೈನ್ ವಂಚನೆಗೆ ಬಲಿಯಾಗಿದ್ದೀರಾ..! ಕೂಡಲೇ ಹೀಗೆ ಮಾಡಬಹುದು..!
ಸೈಬರ್ ಕ್ರೈಮ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈಬರ್ ಕ್ರೈಮ್ ಕೋರ್ಡಿನೇಶನ್ ಟೀಮ್ ಮತ್ತು ಗೃಹ ಸಚಿವಾಲಯ ಸೇರಿ ಈ ಹೆಜ್ಜೆ ಇಟ್ಟಿದೆ. ಇದೊಂದು ಆರಂಭಿಕ ಹೆಜ್ಜೆಯಾಗಿದೆ.
ನವದೆಹಲಿ: ಆನ್ ಲೈನ್ ವಂಚನೆ (Online fraud) ಈಗ ಸರ್ವೆಸಾಮಾನ್ಯ. ಎಲ್ಲಾ ವ್ಯವಹಾರಗಳೂ ಆನ್ ಲೈನಿನಲ್ಲೇ ಆಗುತ್ತಿರುವ ಕಾರಣ ಆನ್ ಲೈನ್ ವಂಚನೆಗೆ ಬಲಿಯಾಗುತ್ತಿರುವ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ನೀವು ಒಂದು ವೇಳೆ ಆನ್ ಲೈನ್ ವಂಚನೆಗೆ ಗುರಿಯಾಗಿದ್ದರೆ, ನಿಮಗೊಂದು ಹೆಲ್ಪ್ ಲೈನ್ (helpline) ಲಭ್ಯವಿದೆ. 155260 ನಂಬರಿಗೆ ಕಾಲ್ ಮಾಡಿ ರಿಪೋರ್ಟ್ ಮಾಡಬಹುದು. ಇದು ಎಮರ್ಜೆನ್ಸಿ ನಂಬರ್ ಸ್ವರೂಪದಲ್ಲಿ ಕೆಲಸ ಮಾಡುತ್ತದೆ.
ಸೈಬರ್ ಕ್ರೈಮ್ (Cyber crime) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈಬರ್ ಕ್ರೈಮ್ ಕೋರ್ಡಿನೇಶನ್ ಟೀಮ್ ಮತ್ತು ಗೃಹ ಸಚಿವಾಲಯ ಸೇರಿ ಈ ಹೆಜ್ಜೆ ಇಟ್ಟಿದೆ. ಇದೊಂದು ಆರಂಭಿಕ ಹೆಜ್ಜೆಯಾಗಿದೆ. ಈ ಸಹಾಯವಾಣಿಗೆ ಕಾಲ್ (Helpline) ಮಾಡಿ ಸೈಬರ್ ಕ್ರೈಂನ ದೂರು ನೀಡಬಹುದಾಗಿದೆ. ಈ ವ್ಯವಸ್ಥೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುತ್ತದೆ.
ಇದನ್ನೂ ಓದಿ : FIND MY iPHONE: ಕಳೆದುಹೋದ ಐಫೋನ್ ಅನ್ನು ಸುಲಭವಾಗಿ ಪತ್ತೆಹಚ್ಚಲು ಈ ಟ್ರಿಕ್ ಬಳಸಿ
ಹೆಲ್ಪ್ ಲೈನ್ ಗೆ ಕಾಲ್ ಮಾಡಿದರೆ ಪ್ರಯೋಜನ ಏನು..?
ಕಳೆದ ನವೆಂಬರಿನಲ್ಲಿ ಈ ಹೆಲ್ಪ್ ಲೈನಿನ ಟೆಸ್ಟಿಂಗ್ ಕಾರ್ಯ ನಡೆದಿತ್ತು. ಈ ಯೋಜನೆಯಲ್ಲಿ ಒಳಗೊಂಡಿರುವ ಅಧಿಕಾರಿಗಳ ಪ್ರಕಾರ ಸೈಬರ್ ಕ್ರೈಮ್ ಆದಾಗ ವ್ಯಕ್ತಿಯ ಖಾತೆಯಲ್ಲಿರುವ ದುಡ್ಡು ವಂಚಕನ ಖಾತೆಗೆ ಆನ್ ಲೈನ್ (Online) ಮೂಲಕ ವರ್ಗಾವಣೆಯಾಗುತ್ತದೆ. ಒಮ್ಮೆ ದುಡ್ಡು ವರ್ಗಾವಣೆ ಆದ ಮೇಲೆ ಅದು ಮತ್ತೆ ಸಿಗುವುದು ಅಸಂಭವೇ ಸರಿ. ವಂಚಕನೂ ಸಿಗುವುದಿಲ್ಲ, ಕಳೆದುಕೊಂಡ ದುಡ್ಡು ಕೂಡಾ ಸಿಗುವುದಿಲ್ಲ. ಆದರೆ, ಕೂಡಲೇ ಈ ಹೆಲ್ಪ್ ಲೈನಿಗೆ ಕಾಲ್ ಮಾಡಿ ದೂರು ಕೊಟ್ಟ ತಕ್ಷಣ ವಂಚನೆಗೊಳಗಾದ ಖಾತೆಯ ವ್ಯವಹಾರ ತಕ್ಷಣದಲ್ಲಿ ಹೋಲ್ಡ್ ಆಗುತ್ತದೆ. ಅಂದರೆ, ನಿಮ್ಮ ಖಾತೆಯಿಂದ ವರ್ಗಾವಣೆಯಾದ ದುಡ್ಡು (Money) ವಂಚಕನ ಖಾತೆ ಸೇರುವುದಿಲ್ಲ. ಆ ವ್ಯವಹಾರಕ್ಕೆ ತಡೆ ಬಿದ್ದಿರುತ್ತದೆ. ಅಂದರೆ ಅದು ಹೋಲ್ಡ್ ನಲ್ಲಿ ಇರುತ್ತದೆ. ಹಾಗಾಗಿ, ವಂಚನೆಗೆ ಬಲಿಯಾದರೂ, ದುಡ್ಡು ಕಳೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಮುಖ್ಯ ಮಾತು ಕೂಡಾ ನಿಮಗೆ ತಿಳಿದಿರಲಿ. ಈ ವ್ಯವಸ್ಥೆ ಇದೀಗ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬಂದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ರಾಜಾಸ್ತಾನಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಉಳಿದ ರಾಜ್ಯಗಳಲ್ಲಿ ಇದು ಶೀಘ್ರವೇ ಜಾರಿಗೆ ಬರಲಿದೆ.
ಇದನ್ನೂ ಓದಿ : ಬಂದಿದೆ ಅತ್ಯಾಧುನಿಕ ಟೆಕ್ನಾಲಜಿಯ ಟೀವಿ, ತಿಳಿಯಿರಿ ಫೀಚರ್ಸ್ ಮತ್ತು ಬೆಲೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.