ನಿಮ್ಮ ಫೋನ್ ಕಳುವಾದರೆ ಆನ್‌ಲೈನ್‌ನಲ್ಲಿ ಡಾಟಾ ಡಿಲೀಟ್ ಮಾಡಲು ಈ ಸುಲಭ ಮಾರ್ಗ ಅನುಸರಿಸಿ
ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದರೆ, ಒಂದೊಮ್ಮೆ ನಿಮ್ಮ ಫೋನ್ ಕದ್ದಿದ್ದರೆ ಅಥವಾ ಕಳೆದುಹೋದರೆ, ಅದರಲ್ಲಿರುವ ಡೇಟಾವನ್ನು ಸುಲಭವಾಗಿ ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ...
ನವದೆಹಲಿ: ಹಲವು ಬಾರಿ ಫೋನ್ ಕಳುವಾದಾಗ ಸಾಕಷ್ಟು ಜನರಿಗೆ ಫೋನ್ ಕಳುವಾಯಿತಲ್ಲ ಎಂಬ ಚಿಂತೆಗಿಂತ ಅದರಲ್ಲಿರುವ ಮಾಹಿತಿ ಬೇರೆಯವರ ಕೈಗೆ ಸಿಕ್ಕರೆ ಎಂಬ ಚಿಂತೆಯೇ ಹೆಚ್ಚು ಕಾಡುತ್ತಿರುತ್ತದೆ. ಅದು ನಿಮ್ಮ ವೈಯಕ್ತಿಕ ಫೋಟೋ ಆಗಿರಬಹುದು ಅಥವಾ ನಿಮ್ಮ ಬ್ಯಾಂಕ್ ಸಂಬಂಧಿತ ಮಾಹಿತಿ ಆಗಿರಬಹುದು ಅಥವಾ ಇನ್ನಾವುದೇ ಮಾಹಿತಿ ಆಗಿರಬಹುದು. ನೀವು ಆಂಡ್ರಾಯ್ಡ್ (Android) ಫೋನ್ ಅನ್ನು ಬಳಸುತ್ತಿದ್ದರೆ, ಒಂದೊಮ್ಮೆ ನಿಮ್ಮ ಫೋನ್ ಕದ್ದಿದ್ದರೆ ಅಥವಾ ಕಳೆದುಹೋದರೆ, ಅದರಲ್ಲಿರುವ ಡೇಟಾವನ್ನು ಸುಲಭವಾಗಿ ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ...
LG ಕೂಡ ತರುತ್ತಿದೆ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್ಫೋನ್
ಹೌದು, ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ, ಆ ಫೋನ್‌ನಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳು, ಹಾಗೆಯೇ ಇಮೇಲ್‌ಗಳು ಮತ್ತು ಇತರ ಪ್ರಮುಖ ಅಪ್ಲಿಕೇಶನ್‌ಗಳ ಡೇಟಾವನ್ನು ನೀವು ಡಿಲೀಟ್ ಮಾಡಬಹುದು.
4 ಜಿ ಫೋನ್‌ಗಳು ಕೇವಲ 5000 ರೂ.ಗಳಿಗೆ ಲಭ್ಯ, ಈಗಲೇ ಆರ್ಡರ್ ಮಾಡಿ
ಆನ್‌ಲೈನ್‌ನಲ್ಲಿ ಡಾಟಾ ಡಿಲೀಟ್ ಮಾಡಲು ಈ ಸುಲಭ ಮಾರ್ಗ ಅನುಸರಿಸಿ
ಮೊದಲನೆಯದಾಗಿ, ಕಂಪ್ಯೂಟರ್ ಅಥವಾ ಇತರ ಫೋನ್‌ನಲ್ಲಿ ಇಂಟರ್ನೆಟ್ ಬ್ರೌಸರ್ ತೆರೆಯಿರಿ.
ಇಲ್ಲಿ ನೀವು https://www.google.com/android/find ಎಂದು ಟೈಪ್ ಮಾಡಬೇಕು.
ಈಗ ನೀವು ನಿಮ್ಮ ಕಳುವಾಗಿರುವ ಸ್ಮಾರ್ಟ್‌ಫೋನ್ (Smartphone)ನಲ್ಲಿ ಲಾಗಿನ್ ಆಗಿರುವ Gmail ID ಯೊಂದಿಗೆ ಲಾಗಿನ್ ಆಗಬೇಕು.
ಪ್ಲೇ ಸೌಂಡ್ (Play Sound), ಸುರಕ್ಷಿತ ಸಾಧನ (Secure Device) ಮತ್ತು ಸಾಧನ ಅಳಿಸಿ (Erase Device) ಎಂಬ ಮೂರು ಆಯ್ಕೆಗಳನ್ನು ನೀವು ನೋಡುತ್ತೀರಿ.
ನಿಮ್ಮ ಕಳುವಾಗಿರುವ ಫೋನ್‌ನಲ್ಲಿರುವ ಡೇಟಾವನ್ನು ಅಳಿಸಲು, ನೀವು ERASE DEVICE ಅನ್ನು ಕ್ಲಿಕ್ ಮಾಡಬೇಕು.
ಒಮ್ಮೆ ಕ್ಲಿಕ್ ಮಾಡಿದ ನಂತರ ನೀವು Gmail ಗಾಗಿ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.
ನಂತರ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇದ್ದರೆ ನಿಮ್ಮ ಎಲ್ಲಾ ಡೇಟಾವನ್ನು ನೀವು ಅಳಿಸಬಹುದು.
ಮೊದಲಿಗಿಂತ ಹೆಚ್ಚು ಶಕ್ತಿಶಾಲಿ ನಿಮ್ಮ ಸ್ಮಾರ್ಟ್‌ಫೋನ್ ಅದು ಹೇಗೆಂದು ಇಲ್ಲಿ ತಿಳಿಯಿರಿ
ಫೋನ್‌ನಲ್ಲಿರುವ ಡಾಟಾವನ್ನು ಡಿಲೀಟ್ ಮಾಡುವುದು ಏಕೆ ಮುಖ್ಯ?
ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಬಹುಮುಖ್ಯ ಮಾಹಿತಿಗಳನ್ನು ಫೋನ್‌ಗಳಲ್ಲೇ ಸೇವ್ ಮಾಡಿರುತ್ತಾರೆ. ಹಾಗೆಯೇ ಆ ಫೋನ್‌ನಿಂದ ಅಗತ್ಯ ಮಾಹಿತಿಯನ್ನು ಕದಿಯುವ ಮೂಲಕ ಹ್ಯಾಕರ್‌ಗಳು ನಿಮ್ಮನ್ನು ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಮೋಸ ಮಾಡಬಹುದು. ಆದ್ದರಿಂದ ನಿಮ್ಮ ಫೋನ್ ಕಳುವಾದಾಗ ಮೊದಲು ಅದರಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸುವುದು ಅಗತ್ಯವಾಗಿದೆ. ನೀವು ಇದನ್ನು ಮಾಡದಿದ್ದರೆ ಭವಿಷ್ಯದಲ್ಲಿ ಭಾರಿ ನಷ್ಟವಾಗಬಹುದು.