ಅಯೋಧ್ಯೆಯ ಸರಯು ನದಿಯಲ್ಲಿ ಸಂಚರಿಸಲಿದೆ ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿ
Solar Boat In Sarayu River: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಗೂ ಮೊದಲೇ ಸರಯು ನದಿಯಲ್ಲಿ ಸೋಲಾರ್ ಬೋಡ್ ಸಂಚರಣೆಗೆ ಸಿದ್ದವಾಗಿದೆ. ಈ ಸೋಲಾರ್ ಬೋಡ್ 30 ಪ್ರಯಾಣಿಕರಿಗೆ ಸ್ಥಳಾವಕಾಶ ನೀಡಬಲ್ಲದು ಮತ್ತು ನಯಾ ಘಾಟ್‌ನಿಂದ ಕಾರ್ಯನಿರ್ವಹಿಸುತ್ತದೆ.
Solar Boat In Sarayu River: ಅಯೋಧ್ಯೆಯ ಸರಯು ನದಿಯಲ್ಲಿ ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿ ಸಂಚರಿಸಲಿದೆ. ಉತ್ತರ ಪ್ರದೇಶದ ಅಯೋಧ್ಯೆ ನಗರವನ್ನು ಮಾದರಿ ಸೌರ ನಗರವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಸೋಲಾರ್ ಬೋಟ್ ಅನ್ನು ಉತ್ತರ ಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಂಸ್ಥೆ (UPNEDA) ಸಿದ್ಧಪಡಿಸಿದೆ.
ಸರಯು ಘಾಟ್‌ನ ದಡದಲ್ಲಿ ಈ ಸೋಲಾರ್ ಬೋಟ್ ಅನ್ನು ಜೋಡಿಸಲಾಗಿದೆ ಮತ್ತು ಅದರ ಬಿಡಿ ಭಾಗಗಳು ಮತ್ತು ಇತರ ಪರಿಕರಗಳನ್ನು ದೇಶದ ವಿವಿಧ ಮೂಲೆಗಳಿಂದ ಸಂಗ್ರಹಿಸಲಾಗಿದೆ ಎಂದು ಯುಪಿಎನ್‌ಇಡಿಎ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ, ಒಂದು ಸೋಲಾರ್ ಬೋಟ್ ಅನ್ನು ಸಂಪೂರ್ಣವಾಗಿ ಜೋಡಿಸಲಾಗಿದ್ದು ಇದು ಪರೀಕ್ಷಾ ಹಂತದಲ್ಲಿದೆ ಎಂದು ತಿಳಿದುಬಂದಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಜನವರಿ 17 ಮತ್ತು 18 ರ ನಡುವೆ, ಈ ಸೋಲಾರ್ ಬೋಟ್ ಜಲನಿರೋಧಕ ಸೇರಿದಂತೆ ವಿವಿಧ ಪರೀಕ್ಷಾ ವಿಧಾನಗಳಿಗೆ ಒಳಗಾಗುತ್ತದೆ.
ಇದನ್ನೂ ಓದಿ- Gadget Repair Guide: ಸ್ಮಾರ್ಟ್ ಫೋನ್ ನಿಂದ ಹಿಡಿದು ಸಿಲಿಂಗ್ ಫ್ಯಾನ್ ವರೆಗೆ ಎಲ್ಲವನ್ನೂ ಮನೆಯಲ್ಲಿಯೇ ಈ ರೀತಿ ಸರಿಪಡಿಸಿ!
ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿಯನ್ನು ಉದ್ಘಾಟನೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿಯ ವೈಶಿಷ್ಟ್ಯಗಳು:
>> ಈ ಸೌರಶಕ್ತಿ ಚಾಲಿತ ದೋಣಿಯು ಶುದ್ಧ ಶಕ್ತಿಯ ಮೂಲಕ ಕಾರ್ಯನಿರ್ವಹಿಸುವ ಪರಿಕಲ್ಪನೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಡ್ಯುಯಲ್-ಮೋಡ್ ಆಪರೇಟಿಂಗ್ ಬೋಟ್ ಆಗಿದ್ದು, ಇದು 100 ಪ್ರತಿಶತ ಸೌರ ವಿದ್ಯುತ್ ಬೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
>> ಸೌರಶಕ್ತಿ ಹಾಗೂ ವಿದ್ಯುತ್ ಶಕ್ತಿಯಿಂದ ದೋಣಿಯನ್ನು ನಿರ್ವಹಿಸಬಹುದಾಗಿದೆ.
>> ಹಗುರವಾದ ಮತ್ತು ಬಾಳಿಕೆ ಬರುವ ಫೈಬರ್ ಗ್ಲಾಸ್ ದೇಹದೊಂದಿಗೆ ನಿರ್ಮಿಸಲಾದ ಈ ದೋಣಿ ಶಬ್ದ ಮುಕ್ತ ಮತ್ತು ಪರಿಸರ ಸ್ನೇಹಿ ಕಾರ್ಯಾಚರಣೆಯನ್ನು ದೃಢಪಡಿಸುತ್ತದೆ.
ಇದನ್ನೂ ಓದಿ- Breath For Smartphone Unlock: ಇನ್ಮುಂದೆ ಫಿಂಗರ್ ಪ್ರಿಂಟ್ ಅಲ್ಲ, ಉಸಿರಿನಿಂದ ಅನ್ಲಾಕ್ ಆಗಲಿದೆ ಸ್ಮಾರ್ಟ್ ಫೋನ್!
>> ಈ ಸೋಲಾರ್ ಬೋಟ್ ನಯಾ ಘಾಟ್‌ನಿಂದ ಕಾರ್ಯನಿರ್ವಹಿಸಲಿದ್ದು ಒಮ್ಮೆಗೆ 30 ಪ್ರಯಾಣಿಕರನ್ನು ಹೊತ್ತು ಸಾಗುವಷ್ಟು ಅನುಕೂಲಗ್ಲಾನ್ನು ಹೊಂದಿದೆ.
>> ದೋಣಿಯು 3.3-ಕಿಲೋವ್ಯಾಟ್ ರೂಫ್‌ಟಾಪ್ ಸೌರ ಫಲಕಗಳಿಂದ ಚಾಲಿತವಾಗಿದೆ ಮತ್ತು ದೋಣಿಯ ಮೇಲ್ಛಾವಣಿಯಲ್ಲಿ ಆರು ಸೌರ ಫಲಕಗಳನ್ನು ಅಳವಡಿಸಲಾಗಿದೆ, ಇದು 550 ವ್ಯಾಟ್‌ಗಳ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ ಬೋಟ್ ಐದರಿಂದ ಆರು ಗಂಟೆಗಳ ಕಾಲ ಪ್ರೊಪಲ್ಷನ್ ಟೈಮ್‌ಫ್ರೇಮ್ ಅನ್ನು ನಿರ್ವಹಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.