ನೋಯ್ಡಾ : ಜನವರಿ 22, 2024 ರಂದು ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತಿದೆ. ಕಾರಣ ಇಡೀ ವಿಶ್ವಕ್ಕೆ ತಿಳಿದಿದೆ. ಈ ದಿನ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ದಿವ್ಯ-ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆಯ ಸಮಾರೋಹ ಆಯೋಜಿಸಲಾಗುತ್ತಿದೆ. ರಾಮ ಭಕ್ತರ ವರ್ಷಾನುವರ್ಷಗಳ ನಿರೀಕ್ಷೆ ಅಂತ್ಯವಾಗುತ್ತಿದೆ ಮತ್ತು ಪ್ರಭು ಶ್ರೀರಾಮ ತನ್ನ ಮಂದಿರದಲ್ಲಿ ನೆಲೆಗೊಳ್ಳಲಿದ್ದಾನೆ. ಜನಸಾಮಾನ್ಯರಿಗೆ ಈ ದಿನ ಸರ್ಕಾರ ಅಯೋಧ್ಯೆಗೆ ಬಾರದಿರಲು ವಿನಂತಿಯನ್ನು ಮಾಡಿಕೊಂಡಿದೆ. ಮನೆಯಲ್ಲಿಯೇ ಇದ್ದುಕೊಂಡು ದೀಪಾವಳಿ ಆಚರಿಸಲು ವಿನಂತಿಸಿಕೊಂಡಿದೆ. ಇನ್ನೊಂದೆಡೆ ಇತ್ತ ಖಾಸಗಿ ಕಂಪನಿಯೊಂದು ದೇಶಾದ್ಯಂತ ಪ್ರಸಾದದ ಹೋಂ ದಿಲೆವರಿ ಮಾಡುವುದಾಗಿ ಹೇಳಿಕೊಂಡಿದೆ. ಖಾದಿಆರ್ಗ್ಯಾನಿಕ್ ಹೆಸರಿನ ವೆಬ್ ಸೈಟ್ ಈ ಹಕ್ಕು ಮಂಡಿಸಿದೆ. ರಾಮ ಮಂದಿರದಿಂದ ಬಂದ ಪ್ರಸಾದವನ್ನು ಮನೆಮನೆಗೆ ತಲುಪಿಸುವುದಾಗಿ ಹೇಳಿಕೊಂಡಿದೆ. ಯಾವ ರೀತಿ ಈ ಸಾಫ್ಟವೇರ್ ಕಂಪನಿ ದೇಶಾದ್ಯಂತ ಡೋರ್-ಟು-ಡೋರ್ ಪ್ರಸಾದ ವಿತರಿಸುವ ಹಕ್ಕು ಮಂಡಿಸುತ್ತಿದೆ ಎಂಬುದನ್ನು ನಾವು ಹೇಳಿಕೊಡುತ್ತಿದ್ದೇವೆ. ಒಂದು ವೇಳೆ ನೀವೂ ಕೂಡ ರಾಮಮಂದಿರದಿಂದ ಬಂದ ಪ್ರಸಾದವನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಲು ಬಯಸುತ್ತಿದ್ದರೆ, ವಿಧಾನ ಅತ್ಯಂತ ಸರಳವಾಗಿದೆ. ಬನ್ನಿ ಸಂಪೂರ್ಣ ಪ್ರೋಸೆಸ್ ಏನು ತಿಳಿದುಕೊಳ್ಳೋಣ, (Technology News In Kannada)
ದೇಶಾದ್ಯಂತ ಉಚಿತ ಪ್ರಸಾದ ವಿತರಣೆ
ಈ ಕುರಿತು ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಖಾದಿ ಆರ್ಗ್ಯಾನಿಕ್ ಮಾರಾಟ ಮುಖ್ಯಸ್ಥ ಆದರ್ಶ್, ರಾಮಮಂದಿರದ ಉಚಿತ ಪ್ರಸಾದ ವಿತರಿಸುವ ಖಾದಿ ಆರ್ಗ್ಯಾನಿಕ್ ವೆಬ್ಸೈಟ್ ಡ್ರಿಲ್ ಮ್ಯಾಪ್ಸ್ ಇಂಡಿಯ ಪ್ರೈವೇಟ್ ಲಿಮಿಟೆಡ್ ನ ಒಂದು ಭಾಗವಾಗಿದೆ. ತಮ್ಮ ಕಂಪನಿ ಭಾರತದಲ್ಲಿ ತಯಾರಾದ ಆರ್ಗ್ಯಾನಿಕ್ ಸರಕುಗಳನ್ನು ಅಮೆರಿಕಾ ಹಾಗೂ ಕೆನಡಾದಲ್ಲಿ ಮಾರಾಟ ಮಾಡುತ್ತದೆ. ಈ ಕಂಪನಿಯ ಕಚೇರಿ ನೋಯ್ಡಾದಲ್ಲಿದೆ. ಈ ಕಂಪನಿಗೆ ಆಶಿಶ್ ಸಿಂಗ್ ಸಂಸ್ಥಾಪಕರಾಗಿದ್ದಾರೆ ಮತ್ತು ಅವರು ಪ್ರಸ್ತುತ ಅವರು ಫೇಸ್ ಬುಕ್ ಪೆರೆಂಟ್ ಕಂಪನಿಯಾಗಿರುವ ಮೇಟಾದಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ಹೇಳುವ ಆದರ್ಶ್ ತಮ್ಮ ಕಂಪನಿಯ ಒಡೆಯ ಆಶೀಶ್ ಸಿಂಗ್ ಅವರಿಗೆ 20-25 ದಿನಗಳ ಹಿಂದೆ ಕನಸಿನಲ್ಲಿ ಆಂಜನೇಯ ಕಾಣಿಸಿದ್ದಾನೆ ಮತ್ತು ಆತ ಅವರಿಗೆ ರಾಮಮಂದಿರದ ಪ್ರಾಣ ಪ್ರತಿಷ್ಟಾಪನೆಯ ಸಮಾರೋಹದ ಪ್ರಸಾದವನ್ನು ದೇಶಾದ್ಯಂತ ವಿತರಿಸುವಂತೆ ಹೇಳಿದ್ದಾನೆ. ಇದಾದ ಬಳಿಕ ಅವರು ಪ್ರಸಾದ ವನ್ನು ದೇಶಾದ್ಯಂತದ ಭಕ್ತರಲ್ಲಿ ಉಚಿತವಾಗಿ ವಿತರಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ ಮತ್ತು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದಿದ್ದಾರೆ.
ಖಾದಿ ಆರ್ಗ್ಯಾನಿಕ್ ಖಾಸಗಿ ಸಂಸ್ಥೆಯಾಗಿದೆ
ಕಂಪನಿಯ ಕುರಿತು ಮಾಹಿತಿ ನೀಡಿರುವ ಆದರ್ಶ್, ಖಾದಿ ಆರ್ಗ್ಯಾನಿಕ್ ಒಂದು ಖಾಸಗಿ ಸಂಸ್ಥೆಯಾಗಿದೆ ಎನ್ನುತ್ತಾರೆ. ಪ್ರಾಣ ಪ್ರತಿಷ್ಟಾಪನೆಯ ಪ್ರಸಾದದ ಕುರಿತು ಹೇಳುವ ಅವರು, ಕಂಪನಿಗೆ ಸೇರಿದ ವ್ಯಕ್ತಿಗಳು ಪ್ರಸಾದವನ್ನು ರಾಮಮಂದಿರಕ್ಕೆ ಕೊಂಡೊಯ್ಯಲಿದ್ದಾರೆ ಮತ್ತು ಅಲ್ಲಿ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಬರಲಿದ್ದಾರೆ. ಇದಾದ ಬಳಿಕ ಪ್ರಸಾದವನ್ನು ದೇಶಾದ್ಯಂತ ಜನರಿಗೆ ಹಂಚಲಾಗುವುದು ಎಂದಿದ್ದಾರೆ. ಇದಕ್ಕೂ ಮೊದಲು ಪ್ರತಿಯೊಂದು ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಿಗೆ ಪ್ರಸಾದ ವಿತರಿಸುವ ಯೋಜನೆ ಕಂಪನಿ ಹೊಂದಿತ್ತು ಎಂದು ಹೇಳುವ ಆದರ್ಶ್, ಜನರ ಸಂದೇಶ ಹಾಗೂ ಕರೆಗಳನ್ನು ಆಧರಿಸಿ ಮನೆಮನೆಗೂ ಪ್ರಸಾದ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು ಎನ್ನುತ್ತಾರೆ,
ರೂ.51 ಡಿಲೆವರಿ ಶುಲ್ಕ
ಪ್ರಸಾದ ವಿತರಣೆಯ ಕೆಲಸಕ್ಕಾಗಿ ಕಂಪನಿ ಶಿಪ್ ರಾಜೆಟ್ ನಂತಹ ಕಂಪನಿಯ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಮನೆಮನೆಗೆ ಪ್ರಸಾದ ತಲುಪಿಸಲು ಪ್ರತಿ ಮನೆಗೆ ರೂ.40 ರಿಂದ 60 ರೂಪಾಯಿ ವೆಚ್ಚಕ್ಕೆ ಅನುಮತಿ ದೊರೆತಿದೆ. ಇದೇ ಕಾರಣದಿಂದ ನಾವು ಸರಾಸರಿ ರೂ.51 ದರವನ್ನು ನಿಗದಿಪಡಿಸಿದ್ದು. ಪ್ರಸಾದದ ವೆಚ್ಚ ಕಂಪನಿ ಭರಿಸುತ್ತಿದ್ದು, ಡಿಲೆವರಿ ವೆಚ್ಚ ಜನರಿಂದ ಪಡೆದುಕೊಳ್ಳಲಾಗುವುದು ಎಂದು ಆದರ್ಶ್ ಹೇಳಿದ್ದಾರೆ.
ಖಾದಿ ಆಗ್ಯಾನಿಕ್ ವೆಬ್ ಸೈಟ್ ಈಗಾಗಲೇ ಇದ್ದು, ಈ ವೆಬ್ ಸೈಟ್ ಮೇಲೆ ಪ್ರಸಾದ ವಿತರಣೆಯ ಅಭಿಯಾನ ಈಗಾಗಲೇ ಆರಂಭಗೊಂಡಿದೆ ಎಂದು ಆದರ್ಶ್ ಹೇಳಿದ್ದಾರೆ. ಈ ವೆಬ್ ಸೈಟ್ ಮೇಲೆ ರಾಮಮಂದಿರಕ್ಕೆ ಸಂಬಂಧಿಸಿದ ಸಂಗತಿಗಳು ಉದಾಹರಣೆಗೆ ಟೀಷರ್ಟ್, ಕಾಯಿನ್, ಧ್ವಜ ಇತ್ಯಾದಿಗಳು ಕೂಡ ಲಭ್ಯವಿರಲಿವೆ. ಜನವರಿ 22 ಕ್ಕೂ ಮುನ್ನ ಈ ವಸ್ತುಗಳ ಮಾರಾಟದಿಂದ ಬಂದ ಆದಾಯವನ್ನು ದಾನ ಮಾಡಲಾಗುವುದು ಎಂದು ಆದರ್ಶ್ ಹೇಳಿದ್ದಾರೆ.
ಇದನ್ನೂ ಓದಿ-UPI LIte ಸೇವೆಯನ್ನು ಫೋನ್ ಪೇನಲ್ಲಿ ಹೇಗೆ ಸಕ್ರೀಯಗೊಳಿಸಬೇಕು? ಇಲ್ಲಿದೆ ಸುಲಭ ವಿಧಾನ
ಉಚಿತ ಪ್ರಸಾದ ಆನ್ಲೈನ್ ನಲ್ಲಿ ಬುಕ್ ಮಾಡುವುದು ಹೇಗೆ?
>> ಇದಕ್ಕಾಗಿ ಮೊದಲು khadiorganic.com ವೆಬ್ಸೈಟ್ ಗೆ ಭೇಟಿ ನೀಡಿ, ಬಳಿಕ ಮುಖ್ಯ ಪುಟದಲ್ಲಿ ನಾನಿಸುವ Free Prasad ಆಯ್ಕೆಯನ್ನು ಕ್ಲಿಕ್ಕಿಸಿ.
>> ಇದಾದ ನಂತರ ಮುಂದಿನ ಪುಟದಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
>> ಡೋರ್ ಸ್ಟೆಪ್ ಡಿಲೆವರಿ ಬೇಕಾದರೆ 'Delivery' ಆಯ್ಕೆಯನ್ನು ಕ್ಲಿಕ್ಕಿಸಿ.
>> ಡಿಸ್ಟ್ರಿಬ್ಯೂಷನ್ ಸೆಂಟರ್ ನಿಂದ ನಿಮಗೆ ಪ್ರಸಾದ ಬೇಕಿದ್ದರೆ, 'Pick From Your Distribution Center' ಮೇಲೆ ಕ್ಲಿಕ್ಕಿಸಿ.
>> ಇದಾದ ಬಳಿಕ ಹೆಸರು, ಫೋನ್ ಸಂಖ್ಯೆ ಗಳಂತಹ ಅತ್ಯಾವಶ್ಯಕ ಮಾಹಿತಿಯನ್ನು ಭರ್ತಿ ಮಾಡಬೇಕು.
>> ಕೊನೆಗೆ ಡಿಲೆವರಿ ಚಾರ್ಜ್ ಪಾವತಿಸಬೇಕು
ಆರ್ಡರ್ ಟ್ರ್ಯಾಕ್ ಮಾಡುವ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ ಎಂದು ಹೇಳಿಕೊಂಡಿರುವ ಕಂಪನಿ ಜನವರಿ 22 ರ ಬಳಿಕ ಬಳಕೆದಾರರು ತಮ್ಮ ಆರ್ಡರ್ ನ ಸ್ಥಿತಿಯನ್ನು ತಿಳಿದುಕೊಳ್ಳಬಹುದು ಎಂದು ಹೇಳಿದೆ.
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಕಂಪನಿಯ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿಯನ್ನು ಆಧರಿಸಿದೆ, ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಲಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ