iPhone ಬಳಕೆದಾರರಿಗೆ ಹೈ ಅಲರ್ಟ್! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್ ಆಗುವ ಸಾಧ್ಯತೆ..! ತಕ್ಷಣವೇ ಈ ಕೆಲಸ ಮಾಡಿ ಎಂದು ಸರ್ಕಾರದಿಂದ ಸೂಚನೆ
CERT-In ಪ್ರಕಾರ, ಅನೇಕ ಆಪಲ್ ಪ್ರಾಡಕ್ಟ್‌ಗಳು ಭದ್ರತಾ ನ್ಯೂನತೆಗಳನ್ನು ಎದುರಿಸಿವೆ. ಕೆಲವು Apple ಸಾಧನಗಳು ಹ್ಯಾಕರ್ಸ್‌ಗಳ ಕೈಗೆ ಸಿಗುವ ಸಾಧ್ಯತೆ ಇದೆ. ಅಂದರೆ ನೀವು ಬಳಸುವ ಪ್ರಾಡಕ್ಟ್‌ಗಳಿಗೆ ಪ್ರವೇಶವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿವೆ.
Apple iPhone 16 ಸರಣಿ ಬಿಡುಗಡೆ ಬೆನ್ನಲ್ಲೇ ಭಾರತ ಸರ್ಕಾರವು ಹೈ ಅಲರ್ಟ್ ಘೋಷಣೆ ಮಾಡಿದ್ದು, ಆಪಲ್ ಪ್ರಾಡಕ್ಟ್ ಬಳಕೆ ಮಾಡುತ್ತಿರುವವರು ಎಚ್ಚರ ವಹಿಸುವಂತೆ ಸೂಚನೆ ನೀಡಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ವರದಿ ಮಾಡಿದಂತೆ, Apple ಪ್ರಾಡಕ್ಟ್‌ಗಳು ದುರ್ಬಳಕೆ ಆಗುವ ಸಾಧ್ಯತೆ ಇದೆ.
ನಿಮ್ಮ ಆಪಲ್ ಫೋನ್ ಸುರಕ್ಷಿತವಾಗಿದೆಯೇ?
CERT-In ಪ್ರಕಾರ, ಅನೇಕ ಆಪಲ್ ಪ್ರಾಡಕ್ಟ್‌ಗಳು ಭದ್ರತಾ ನ್ಯೂನತೆಗಳನ್ನು ಎದುರಿಸಿವೆ. ಕೆಲವು Apple ಸಾಧನಗಳು ಹ್ಯಾಕರ್ಸ್‌ಗಳ ಕೈಗೆ ಸಿಗುವ ಸಾಧ್ಯತೆ ಇದೆ. ಅಂದರೆ ನೀವು ಬಳಸುವ ಪ್ರಾಡಕ್ಟ್‌ಗಳಿಗೆ ಪ್ರವೇಶವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿವೆ. ಒಂದು ವೇಳೆ ಪ್ರವೇಶ ಪಡೆದಲ್ಲಿ, ಡೇಟಾ ಕಲೆಹಾಕಿ ಅದನ್ನು ಸೋರಿಕೆ ಮಾಡಬಹುದು, ಅಷ್ಟೇ ಅಲ್ಲದೆ, ನಿಮ್ಮ ವೈಯಕ್ತಿಕ ಡೇಟಾ ವಶಪಡಿಸಿಕೊಂಡು, ನಿಮ್ಮನ್ನು ಟ್ರ್ಯಾಕ್ ಮಾಡಬಹುದು ಅಥವಾ ಬೆದರಿಕೆಯನ್ನು ಹಾಕುವ ಸಾಧ್ಯತೆ ಇದೆ.
CERT-In ಕೆಲವು ಆಪಲ್ ಪ್ರಾಡಕ್ಟ್‌ಗಳನ್ನು ಪಟ್ಟಿ ಮಾಡಿದ್ದು, ಅದರ ಪ್ರಕಾರ ಆ ಸಾಧನಗಳು ಡೇಂಜರ್ ಝೋನ್‌ನಲ್ಲಿದೆ. ಪ್ರಸ್ತುತ iOS 17.7 ಮತ್ತು iOS 18 ಆವೃತ್ತಿಗಳಲ್ಲಿ ಐಫೋನ್ ಕೆಲಸ ಮಾಡುತ್ತಿದೆ. ಇನ್ನು iPhone 15 Pro ಮತ್ತು iPhone 15 ಹೆಚ್ಚಿನ ಅಪಾಯಗಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ಮ್ಯಾಕ್, ಆಪಲ್ ಟಿವಿ, ಐಪ್ಯಾಡ್ ಮತ್ತು ಆಪಲ್ ವಾಚ್ ಸೇರಿದಂತೆ ಇತರ ಆಪಲ್ ಉತ್ಪನ್ನಗಳು ಸಹ ಹೈ ಅಲರ್ಟ್ ಪಟ್ಟಿಯ ಅಡಿಯಲ್ಲಿ ಬರುತ್ತವೆ. ಐಫೋನ್ 16 ಇದರಡಿಯಲ್ಲಿ ಬರುವುದಿಲ್ಲ ಎಂಬುದನ್ನು CERT-In ಉಲ್ಲೇಖಿಸಿದೆ.,
ಹೇಗೆ ರಕ್ಷಿಸುವುದು?
ಆಪಲ್ ತನ್ನ ಹೊಸ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದ ನಂತರ ಈ ಸುದ್ದಿ ಹೊರಬಿದ್ದಿದ್ದು, ಇದು ಬಳಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿದೆ. ಆದರೆ, ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸಾಧನವನ್ನು ನೀವು ರಕ್ಷಿಸಬಹುದು ಎಂದು CERT-In ತಂಡವು ವಿವರಿಸಿದೆ. ಆ
ಮೊದಲು ನೀವು ನಿಮ್ಮ ಆಪಲ್ ಸಾಧನವನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಪ್ರಸ್ತುತ ಆವೃತ್ತಿ ಮಾತ್ರವಲ್ಲದೆ, tvOS (18 ರ ಹಿಂದಿನ ಆವೃತ್ತಿಗಳು), watchOS (11 ರ ಹಿಂದಿನ ಆವೃತ್ತಿಗಳು) ಮತ್ತು ಕೊನೆಯದಾಗಿ visionOS (2 ರ ಹಿಂದಿನ ಆವೃತ್ತಿಗಳು) ಅನ್ನು ಅಪ್ಡೇಟ್ ಮಾಡಿಕೊಳ್ಳಿ.
ʼಸಫಾರಿʼ ಎಂಬ ನಿಮ್ಮ ಸರ್ಚ್ ಎಂಜಿನ್ ಅನ್ನು ಸಹ ಅಪ್ಡೇಟ್ ಮಾಡಬೇಕು.
ಪಾಸ್‌ವರ್ಡ್ ಅಥವಾ ಎರಡು ಅಂಶದ ದೃಢೀಕರಣ (Two-factor authentication)ವನ್ನು ಬಳಸಿಕೊಂಡು ನಿಮ್ಮ ಸಾಧನವನ್ನು ಸೇಫ್ ಮಾಡಿಕೊಳ್ಳಿ.
ಕೊನೆಯದಾಗಿ, Amazon ಅಥವಾ Netflix ನಂತಹ ಸ್ಟ್ರೀಮಿಂಗ್ ಸಾಧನಗಳ ಪಾಸ್‌ವರ್ಡ್ʼಗಳನ್ನು ಅನೇಕರ ಜೊತೆ ಶೇರ್ ಮಾಡದೆ ಇರುವುದು ಒಳ್ಳೆಯದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.