ರೈಲ್ವೇ ನಿಲ್ದಾಣದ ಫ್ರೀ ವೈ-ಫೈ ಬಳಕೆ ಎಷ್ಟು ಸುರಕ್ಷಿತ?
Indian Railways Free Wi-Fi: ಭಾರತೀಯ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಆದರೆ, ಈ ಫ್ರೀ ವೈ-ಫೈ ಬಳಕೆ ಎಷ್ಟು ಸುರಕ್ಷಿತ ಎಂದು ಎಂದಾದರೂ ಯೋಚಿಸಿದ್ದೀರಾ?
Free Wi-Fi In Railway Stations: ಪ್ರಸ್ತುತ, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿದ್ದು ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಪ್ಲಿಕೇಶನ್ ಗಳ ಬಳಕೆಗೆ ಇಂಟರ್ನೆಟ್ ಬಹಳ ಮುಖ್ಯ. ಹಾಗಾಗಿಯೇ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಆದರೆ, ರೈಲು ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಸೇವೆಯನ್ನು ಬಳಸುವುದು ಎಷ್ಟು ಸುರಕ್ಷಿತ ಎಂದು ಎಂದಾದರೂ ಯೋಚಿಸಿದ್ದೀರಾ?
ನೀವು ನಿಯಮಿತವಾಗಿ ಭಾರತೀಯ ರೈಲ್ವೇಯಲ್ಲಿ (Indian Railways) ಪ್ರಯಾಣಿಸುತ್ತಿದ್ದರೆ, ಈ ಸಂದರ್ಭದಲ್ಲಿ ಉಚಿತ ವೈ-ಫೈ ಅನ್ನು ಬಳಸುತ್ತಿದ್ದರೆ ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದಿರುವುದು ತುಂಬಾ ಅಗತ್ಯ. ವಾಸ್ತವವಾಗಿ, ರೈಲು ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಬಳಸುವುದು ಭದ್ರತಾ ದೃಷ್ಟಿಯಿಂದ ಸ್ವಲ್ಪ ಅಪಾಯಕಾರಿ ಆಗಿರಬಹುದು. ಫ್ರೀ ವೈ-ಫೈ ಏಕೆ ಅಪಾಯಕಾರಿ, ಸುರಕ್ಷತೆಗಾಗಿ ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ರೈಲ್ವೇ ನಿಲ್ದಾಣದ ಫ್ರೀ ವೈ-ಫೈ ಬಳಕೆ ಏಕೆ ಅಸುರಕ್ಷಿತ:-
ಎನ್‌ಕ್ರಿಪ್ಟ್ ಮಾಡದ ನೆಟ್‌ವರ್ಕ್:
ರೈಲ್ವೆ ನಿಲ್ದಾಣಗಳಲ್ಲಿ (Railway Station) ಲಭ್ಯವಿರುವ ವೈ-ಫೈ ಸಾಮಾನ್ಯವಾಗಿ ತೆರೆದ ನೆಟ್‌ವರ್ಕ್ ಆಗಿರುತ್ತದೆ, ಅಂದರೆ ಡೇಟಾ ಎನ್‌ಕ್ರಿಪ್ಟ್ ಆಗಿರುವುದಿಲ್ಲ. ಇದರರ್ಥ ಹ್ಯಾಕರ್‌ಗಳು ನಿಮ್ಮ ಡೇಟಾವನ್ನು ಸುಲಭವಾಗಿ ಪ್ರತಿಬಂಧಿಸಬಹುದು, ಇದರಲ್ಲಿ ನಿಮ್ಮ ಪಾಸ್‌ವರ್ಡ್‌ಗಳು, ಬ್ಯಾಂಕಿಂಗ್ ಮಾಹಿತಿ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುತ್ತದೆ.
ಮಾಲ್‌ವೇರ್ ಬೆದರಿಕೆ:
ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಹ್ಯಾಕರ್‌ಗಳು ದುರುದ್ದೇಶಪೂರಿತ ಸಾಫ್ಟ್‌ವೇರ್ (ಮಾಲ್‌ವೇರ್) ಅನ್ನು ಹರಡಬಹುದು. ಅದು ನಿಮ್ಮ ಸಾಧನಕ್ಕೆ ಸೋಂಕು ತರಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಅಪಾಯವಿರುತ್ತದೆ.
ಇದನ್ನೂ ಓದಿ- ಜನ್ಮ ಪ್ರಮಾಣಪತ್ರ ಕಳೆದುಹೋಗಿದ್ದರೆ Duplicate Copyಯನ್ನು ಈ ರೀತಿ ಪಡೆಯಿರಿ !
ಫಿಶಿಂಗ್ ದಾಳಿ:
ಕಾನೂನುಬದ್ಧ ವೆಬ್‌ಸೈಟ್‌ಗಳನ್ನು ಅನುಕರಿಸುವ ಫಿಶಿಂಗ್ ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ನಿಮ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಬಹುದು. ನೀವು ಈ ವೆಬ್‌ಸೈಟ್‌ಗಳಿಗೆ ಲಾಗಿನ್ ಮಾಡಿದಾಗ, ನೀವು ತಿಳಿಯದೆ ನಿಮ್ಮ ಮಾಹಿತಿಯನ್ನು ಹ್ಯಾಕರ್‌ಗಳಿಗೆ ನೀಡುವ ಅಪಾಯವೂ ಇರುತ್ತದೆ.
ಸಾರ್ವಜನಿಕ ಸ್ಥಳಗಳ ವೈ-ಫೈ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:-
ವಿಪಿಎನ್ ಬಳಕೆ:
ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ, ಹ್ಯಾಕರ್‌ಗಳಿಗೆ ಅದನ್ನು ಭೇದಿಸಲು ಕಷ್ಟವಾಗುತ್ತದೆ. ಹಾಗಾಗಿ, ಸಾರ್ವಜನಿಕ ವೈ-ಫೈ ಬಳಸುವಾಗ ವಿಪಿಎನ್ ಅನ್ನು ಬಳಸುವುದು ಯಾವಾಗಲೂ ಒಳ್ಳೆಯದು.
ಸ್ಟ್ರಾಂಗ್ ಪಾಸ್‌ವರ್ಡ್‌ಗಳ ಬಳಕೆ:
ನಿಮ್ಮ ಎಲ್ಲಾ ಆನ್‌ಲೈನ್ ಖಾತೆಗಳಿಗೆ ಬಲವಾದ, ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಿ. ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ನಲ್ಲಿ ಹುಟ್ಟಿದ ದಿನಾಂಕ, ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ಬಳಸಬೇಡಿ.
ಫೈರ್‌ವಾಲ್ ಸಕ್ರಿಯಗೊಳಿಸಿ:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೈರ್‌ವಾಲ್ ಅನ್ನು ಸಕ್ರಿಯಗೊಳಿಸಿ. ಇದು ನಿಮ್ಮ ಸಾಧನಕ್ಕೆ ಅನಧಿಕೃತ ಪ್ರವೇಶವನ್ನು ತಡೆಯುವಲ್ಲಿ ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ- ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ತುಂಬಾ ಹೀಟ್ ಆಗ್ತಿದ್ಯಾ? ಈ ಟಿಪ್ಸ್ ಅನುಸರಿಸಿ
ಆಂಟಿ-ವೈರಸ್ ಮತ್ತು ಆಂಟಿ-ಮಾಲ್‌ವೇರ್ ಸಾಫ್ಟ್‌ವೇರ್:
ನಿಮ್ಮ ಸಾಧನದಲ್ಲಿ ಆಂಟಿ-ವೈರಸ್ ಮತ್ತು ಆಂಟಿ-ಮಾಲ್‌ವೇರ್ ಸಾಫ್ಟ್‌ವೇರ್ ಇನ್ಸ್ಟಾಲ್ ಮಾಡಿ ಸಕ್ರಿಯಗೊಳಿಸಿ. ಇದರಿಂದ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಫೋನ್ ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.
ಸೂಕ್ಷ್ಮ ಮಾಹಿತಿ ಹಂಚಿಕೆ ತಪ್ಪಿಸಿ:
ನೀವು ಯಾವುದೇ ಸಾರ್ವಜನಿಕ ವೈ-ಫೈ ಬಲಸುವಾಗ ಆನ್‌ಲೈನ್ ಬ್ಯಾಂಕಿಂಗ್ ಅಥವಾ ಶಾಪಿಂಗ್‌ನಂತಹ ಚಟುವಟಿಕೆಗಳನ್ನು ತಪ್ಪಿಸಿ. ಏಕೆಂದರೆ, ಈ ಸಮಯದಲ್ಲಿ ನೀವು ಹಂಚಿಕೊಳ್ಳುವ ಸೂಕ್ಷ್ಮ ಮಾಹಿತಿ ನಿಮಗೆ ಅಪಾಯಕಾರಿ ಆಗಿರಬಹುದು.
ಗಮನಿಸಿ: ರೈಲು ನಿಲ್ದಾಣವಿರಲಿ ಅಥವಾ ಇನ್ನಾವುದೇ ಸಾರ್ವಜನಿಕ ಪ್ರದೇಶಗಳಿರಲಿ ಉಚಿತ ವೈ-ಫೈ ಬಳಸುವುದನ್ನು ತಪ್ಪಿಸಿ. ನಿಮ್ಮ ಸಾಧನವನ್ನು ಹ್ಯಾಕರ್‌ಗಳಿಂದ ರಕ್ಷಿಸಲು ಫ್ರೀ ವೈ-ಫೈ ಬದಲಿಗೆ ಮೊಬೈಲ್ ಡೇಟಾವನ್ನು ಬಳಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.