ನವದೆಹಲಿ :  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್ ಇದೆ.  ಫೋನ್‌ಗಳ ವೈಶಿಷ್ಟ್ಯಗಳು ಹೆಚ್ಚಾದಂತೆ, ಅವುಗಳ ಬೆಲೆಯೂ ಹೆಚ್ಚಾಗತೊಡಗುತ್ತದೆ. ಆದರೆ,  ಅದ್ಭುತ  ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಫೋನ್ ಕೈಗೆಟಕುವ ದರದಲ್ಲಿ ಸಿಗಲಿದೆ. ಇಂದಿನಿಂದ Infinix ಕಂಪನಿಯ Infinix Smart 5A  ಮಾರುಕಟ್ಟೆಗೆ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

Infinix Smart 5A ಫೋನಿನ ಬೆಲೆ :
ಇಂದು ಅಂದರೆ ಆಗಸ್ಟ್ 9 ರಂದು ಬಿಡುಗಡೆಯಾದ ಈ ಫೋನಿನ ಬೆಲೆ 7,999 ರೂ. ಆದರೆ,  ಇಂದು ಮೊದಲ ದಿನವಾದ ಫ್ಲಿಪ್‌ಕಾರ್ಟ್‌ನಲ್ಲಿ 6,499 ರೂ. ಗಳಿಗೆ ಸಿಗಲಿದೆ. ಮಧ್ಯಾಹ್ನ 12 ಗಂಟೆಯಿಂದ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಸಿಗುತ್ತಿದೆ. 


ಇದನ್ನೂ ಓದಿ : Airtel- ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿಯೂ ಈ ಸಂದೇಶ ಸ್ವೀಕರಿಸಿದ್ದೀರಾ?


ಕ್ಯಾಮೆರಾ :
ಇದು 8MP ಫ್ರಂಟ್ ಕ್ಯಾಮೆರಾದೊಂದಿಗೆ 8MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಡೆಪ್ತ್ ಕ್ಯಾಮೆರಾದೊಂದಿಗೆ (Camera) ಬರುವ ಇನ್ಫಿನಿಕ್ಸ್ ಸ್ಮಾರ್ಟ್ 5A ನಲ್ಲಿ, ಗ್ರಾಹಕರಿಗೆ ಟ್ರಿಪಲ್ ಎಲ್ಇಡಿ ಫ್ಲ್ಯಾಶ್, ಆಟೋ-ಸೀನ್ ಡಿಟೆಕ್ಷನ್, ಕಸ್ಟಮ್ ಬೊಕೆ, ಪಿಕ್ಚರ್ ಮೋಡ್ ಮತ್ತು ಎಐ 3 ಡಿ ಬ್ಯೂಟಿ ಮೋಡ್ ನಂತಹ ಆಪ್ಶನ್ ಗಳು ಸಿಗುತ್ತವೆ. 


ಫೋನಿನ ಇತರ ವೈಶಿಷ್ಟ್ಯಗಳು : 
5,000mAh ಬ್ಯಾಟರಿ ಬಾಳಿಕೆ, ಫಿಂಗರ್‌ಪ್ರಿಂಟ್ ಸೆನ್ಸರ್, G- ಸೆನ್ಸರ್,  4G ಸೇವೆಗಳು, ಐ ಕೇರ್ ಮೋಡ್ ಮತ್ತು 6.52-ಇಂಚಿನ HD+ ಡಿಸ್‌ಪ್ಲೇ ಈ ಫೋನಿನ ಕೆಲವು ವೈಶಿಷ್ಟ್ಯಗಳಾಗಿವೆ. Infinix Smart 5A 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು,  ಇದನ್ನು micro SD card ಸಹಾಯದಿಂದ 256GB ವರೆಗೆ ವಿಸ್ತರಿಸಬಹುದಾಗಿದೆ. 


ಇದನ್ನೂ ಓದಿ : World's Smallest Smartphone: ವಿಶ್ವದ ಈ ಅತ್ಯಂತ ಚಿಕ್ಕ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ 7,500ಕ್ಕೆ ಖರೀದಿಸಬಹುದು, ಇಲ್ಲಿದೆ ವಿಶೇಷತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ