Instagram Reels Offer:  ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಗಳನ್ನು ತಯಾರಿಸಿ ಹಂಚಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೀಲ್‌ಗಳನ್ನು ತಯಾರಿಸಲು ಇಷ್ಟಪಡುವ ಜನರಿಗೆ Instagram ದೊಡ್ಡ ಉಡುಗೊರೆಯನ್ನು ನೀಡಿದೆ. ಹೌದು, ಇದೀಗ ರೀಲ್ ಗಳ ಮೂಲಕ ಹಣ ಗಳಿಸುವ ಆಯ್ಕೆಯೂ ನಿಮ್ಮ ಮುಂದೆ ಬಂದಿದೆ, ನಿಮ್ಮ ಯಾವ ರೀಲ್ ಜನರಿಗೆ ಹೆಚ್ಚು ಇಷ್ಟವಾಗುತ್ತದೆಯೋ, ಅಷ್ಟು ಹೆಚ್ಚು ಹಣವನ್ನು ಹಣ ಗಳಿಸಬಹುದು. ಇನ್‌ಸ್ಟಾಗ್ರಾಮ್ ಬೋನಸ್ ನೀಡುವುದರ ಜೊತೆಗೆ ಇದೀಗ ನಿಮಗೆ ಹೊಸ ಕಂಟೆಂಟ್ ಕೂಡ ನೀಡಲು ಹೊರಟಿದೆ. ಇದಕ್ಕಾಗಿ, Instagram ನಲ್ಲಿ ಖಾತೆಯನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ನೀವು ರೀಲ್‌ಗಳನ್ನು ತಯಾರಿಸಲು ಇಷ್ಟಪಡುತ್ತಿದ್ದರೆ ಮತ್ತು Instagram ನಿಂದ ಹಣವನ್ನು ಗಳಿಸಲು ಬಯಸುತ್ತಿದ್ದರೆ, ನಂತರ Instagram ಅನ್ನು ಡೌನ್‌ಲೋಡ್ ಮಾಡಿ. ಅದರ ಮೇಲೆ ರೀಲ್ ತಯಾರಿಸಿ ಅಪ್ಲೋಡ್ ಮಾಡಿ. ನಿಮ್ಮ ರೀಲ್‌ ಗೆ ಇನ್ಸ್ಟಾಗ್ರಾಮ್ ನಿಮಗೆ ಹಣ ಪಾವತಿಸಲಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರೀಲ್ ಮಾಡುವ ಟ್ರೆಂಡ್ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ತಮ್ಮನ್ನು ತಾವು ಫೇಮಸ್ ಮಾಡಿಕೊಳ್ಳಲು ವಿವಿಧ ರೀತಿಯ ರೀಲ್ ಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಕೆಲವು ವಿಡಿಯೋಗಳಲ್ಲಿ ಸಾವಿರಾರು ಲೈಕ್‌ಗಳು ಬರುತ್ತವೆ, ಹೀಗಾಗಿ ಅಂತಹ ಜನರಿಗೆ ಇನ್ಸ್ಟಾಗ್ರಾಮ್  ಅತ್ಯುತ್ತಮವಾಗಿದೆ.


ಇದನ್ನೂ ಓದಿ-Honda Activa ಗ್ರಾಹಕರನ್ನು ತನ್ನತ್ತ ಸೆಳೆಯಲು ಬಂತು Hero Xoom, ಅದ್ಭುತ ವೈಶಿಷ್ಟ್ಯಗಳು ಮತ್ತು ಬೆಲೆಯೂ 10 ಸಾವಿರ ಕಮ್ಮಿ


ನಿಮ್ಮ ಖಾತೆಯನ್ನು ವ್ಯಾಪಾರ ಅಥವಾ ಕ್ರಿಯೇಟರ್ ಖಾತೆಯಾಗಿ ನೀವು ಪರಿವರ್ತಿಸಬೇಕು
ಈ ವೈಶಿಷ್ಟ್ಯವು ಹಲವು ತಿಂಗಳುಗಳಿಂದ ಲೈವ್ ನಲ್ಲಿದೆ. ಆದರೆ, ಕೆಲವೇ ಕೆಲವು ಕ್ರಿಯೇಟರ್ಸ್ ಗಳಿಗೆ ಮಾತ್ರ ಇದು ಲೈವ್ ಆಗಿದೆ. ಆದರೆ ಇದೀಗ ಮಾರ್ಚ್ ಅಂತ್ಯದ ವೇಳೆಗೆ ಇದು ಎಲ್ಲರಿಗೂ ಬಿಡುಗಡೆಯಾಗಲಿದೆ. ನಿಮ್ಮ ಖಾತೆಯನ್ನು ಈಗಾಗಲೇ ಇನ್‌ಸ್ಟಾದಲ್ಲಿ ರಚಿಸಿದ್ದರೆ, ಇದಕ್ಕಾಗಿ ನೀವು ನಿಮ್ಮ ಖಾತೆಯನ್ನು ವ್ಯಾಪಾರ ಅಥವಾ ಕ್ರಿಯೇಟರ್ ಖಾತೆಯಾಗಿ ಪರಿವರ್ತಿಸಬೇಕು. ಇದರ ನಂತರ ನೀವು ಸಾಮಾನ್ಯ ರೀಲ್ಗಳನ್ನು ಅಪ್ಲೋಡ್ ಮಾಡಬೇಕು. ನೀವು ಇನ್ಸ್ಟಾಗ್ರಾಮ್ ಗೆ ಹೋಗುವ ಮೂಲಕ ಕ್ರಿಯೆಟರ್ ಆಪ್ಶನ್ ನಲ್ಲಿ ಈ  ಸ್ಥಿತಿಯನ್ನು ಪರಿಶೀಲಿಸಬಹುದು. ಇದರ ನಂತರ, ನೀವು ಬೋನಸ್ ಆಯ್ಕೆಯನ್ನು ಪಡೆಯುತ್ತೀರಿ. ನೀವು ಅದನ್ನು ಪಡೆಯದಿದ್ದರೆ, ನಿಮ್ಮ ವಿನಂತಿಯನ್ನು ನೀವು InstaHelp ನಲ್ಲಿ ಹಾಕಬಹುದು.


ಇದನ್ನೂ ಓದಿ-ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್

ಪ್ರತಿ ರೀಲ್ ಗೆ ನೀವು ರೂ.550 ಗಳಿಕೆ ಮಾಡಬಹುದು
ಒಂದು ವೇಳೆ ನೀವು ಇದಕ್ಕೆ ಅರ್ಹರಾಗಿದ್ದರೆ, ಉಡುಗೊರೆ  ಆಯ್ಕೆಯು ರೀಲ್‌ನಲ್ಲಿ ನಿಮ್ಮ ಹೆಸರಿನ ಮೇಲೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಅನುಯಾಯಿಗಳು ನಿಮಗೆ ಈ ಸ್ಟಾರ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. 45 ಸ್ಟಾರ್‌ಗಳನ್ನು ಪಡೆದರೆ ರೂ 95 ಸಿಗುತ್ತದೆ. ಮತ್ತು 300 ಸ್ಟಾರ್ ಗಳನ್ನು ಪಡೆದರೆ ನಿಮಗೆ ರೂ 550 ನೀಡಲಾಗುವುದು. ಲೈಕ್ಸ್ ಗಳು ಹೆಚ್ಚಾದಂತೆ ನಿಮ್ಮ ಆದಾಯವೂ ಹೆಚ್ಚಾಗಲಿದೆ. ಶೀಘ್ರದಲ್ಲೇ ಎಲ್ಲರೂ ಇದರ ಪ್ರಯೋಜನ ಪಡೆಯಲಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.