ನವದೆಹಲಿ: iPhone 14 Pro ಟ್ರೆಂಡಿಂಗ್ ಮಾಡೆಲ್ ಆಗಿದೆ. ಇದು ಗ್ರಾಹಕರಿಗೆ ತುಂಬಾ ಇಷ್ಟವಾಗಿರುವ Appleನ ಅತ್ಯುತ್ತಮ ಸ್ಮಾರ್ಟ್‍ಫೋನ್ ಆಗಿದೆ. ಆದರೆ ಇದರ ಬೆಲೆ ಲಕ್ಷಗಳಲ್ಲಿರುವುದರಿಂದ ಅನೇಕರಿಗೆ ಇದು ಕೈಗೆಟುಕದ ಹುಳಿದ್ರಾಕ್ಷಿಯಾಗಿದೆ. ಹೆಚ್ಚಿನ ಬೆಲೆಯಿಂದಾಗಿ ಬಹುತೇಕ ಗ್ರಾಹಕರು ಇದನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ.


COMMERCIAL BREAK
SCROLL TO CONTINUE READING

ನಿಮಗೂ ಸಹ iPhone 14 Pro ಖರೀದಿಸುವ ಆಸೆಯಿದ್ದರೆ ಅಥವಾ ಲಕ್ಷಗಟ್ಟಲೇ ದುಡ್ಡು ಕೊಟ್ಟು ಹೇಗಪ್ಪಾ ಐಫೋನ್ ಖರೀದಿಸಲಿ ಎಂಬ ಚಿಂತೆಯಲ್ಲಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ. ಹೌದು, ಮಾರುಕಟ್ಟೆಯಲ್ಲಿ ಐಫೋನ್ 14 ಪ್ರೊ ವಿನ್ಯಾಸದಂತೆ ಕಾಣುವ ಸ್ಮಾರ್ಟ್‌ಫೋನ್ ಬಂದಿದೆ. ಇದು ಸೇಮ್‍ ಟು ಸೇಮ್ ಐಫೋನ್‍ನನ್ನೇ ಹೊಲುತ್ತದೆ. ನೀವು ನಂಬುವುದು ಕಷ್ಟ. ಇದರ ಬೆಲೆಯೂ ಸಹ ನೀವು ಊಹಿಸಲು ಸಾಧ್ಯವಾಗದಷ್ಟು ಕಡಿಮೆಯಿದೆ. ಚೀನಾದವರು ಐಫೋನ್ ತಲೆಮೇಲೆ ಹೊಡೆದಂತೆ ಈ ಸ್ಮಾರ್ಟ್‍ಫೋನ್ ತಯಾರಿಸಿ ಶಾಕ್ ನೀಡಿದ್ದಾರೆ.


ಇದನ್ನೂ ಓದಿ: ಫ್ಲಿಪ್‌ಕಾರ್ಟ್ ಬಂಪರ್ ಆಫರ್: iPhone 14ರಲ್ಲಿ ಸಿಗುತ್ತಿದೆ ಅತಿದೊಡ್ಡ ಡಿಸ್ಕೌಂಟ್


ಈ ಸ್ಮಾರ್ಟ್‌ಫೋನ್ ಯಾವುದು?


ನಾವು ಹೇಳುತ್ತಿರುವ ಸ್ಮಾರ್ಟ್‌ಫೋನ್‌ನ ಹೆಸರು LeEco S1 Pro. ಇದು ನೋಡಲು ನಿಖರವಾಗಿ iPhone 14 Proನಂತೆಯೇ ಕಾಣುತ್ತದೆ. LeEcoನ ಈ ಸ್ಮಾರ್ಟ್‌ಫೋನ್‍ ಮುಂಭಾಗ ಮತ್ತು ಹಿಂಭಾಗದಲ್ಲಿ iPhone 14 Pro ಹೋಲುವ ವಿನ್ಯಾಸ ನೀಡಲಾಗಿದೆ. ಇವುಗಳನ್ನು ಒಟ್ಟಿಗೆ ಇಟ್ಟರೆ ಯಾವುದು ನಿಜವಾದ ಐಫೋನ್ ಎಂದು ಗುರುತಿಸುವುದೇ ಕಷ್ಟ. ನೋಡಲು ಐಫೋನ್‍ನಂತೆಯೇ ಕಾಣುವ ಈ ಸ್ಮಾರ್ಟ್‍ಫೋನ್‍ ಇದೀಗ ಗ್ರಾಹಕರಿಗೆ ಇಷ್ಟವಾಗಿದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಇದರ ಮಾರಾಟವೂ ಜೋರಾಗಿದೆ.


ವಿಶೇಷಣಗಳು ಮತ್ತು ವೈಶಿಷ್ಟ್ಯಗಳು


iPhone 14 Proನಂತೆ ಕಾಣುವ LeEco S1 Pro ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ ಚೀನೀ ಮಾರುಕಟ್ಟೆಯಲ್ಲಿ ನೀವು ಇದನ್ನು ಖರೀದಿಸಬಹುದು. ಇದರಲ್ಲಿ 6.5-ಇಂಚಿನ LCD ಡಿಸ್ಪ್ಲೇಯನ್ನು ನೀಡಲಾಗಿದ್ದು, ಅದು 60HZ ರಿಫ್ರೆಶ್ ರೇಟ್‍ ನೀಡುತ್ತದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಬಳಕೆದಾರರು ಕೇವಲ 10,897 ರೂ.(899 ಯುವಾನ್)ಗೆ  ಇದರ 8GB + 128GB ಮಾದರಿಯ ಸ್ಮಾರ್ಟ್‍ಫೋನ್ ಖರೀದಿಸಬಹುದು. Unisoc T7150 ಚಿಪ್‌ಸೆಟ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.


ಇದನ್ನೂ ಓದಿ: ಕೇವಲ 599 ರೂಪಾಯಿ ಪಾವತಿಸಿ ಖರೀದಿಸಿ Motorola ಮತ್ತು RedmiSmartphone


LeEcoನಲ್ಲಿ ನೀವು ಬಹುಶಃ ಬಹಳಷ್ಟು ಇಷ್ಟಪಡುವ ಮತ್ತೊಂದು ಉತ್ತಮ ವೈಶಿಷ್ಟ್ಯವಿದೆ. ಈ ವೈಶಿಷ್ಟ್ಯವು ಡೈನಾಮಿಕ್ ಐಲ್ಯಾಂಡ್ ಆಗಿದ್ದು, ಇದು iPhone 14 Proನಂತೆಯೇ ಈ ಫೋನ್‍ಗೆ ಹೆಚ್ಚಿನ ತೂಕ ನೀಡಿದೆ. ಈ ಸ್ಮಾರ್ಟ್‌ಫೋನ್ 4GB + 64GB, 6GB + 128GB ಮತ್ತು 8GB + 256GB ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.