iPhone 14: ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ ಹೊಸ ಆ್ಯಪಲ್ ಐಫೋನ್!
iPhone 14 ಉಪಗ್ರಹ ಸಂಪರ್ಕ ವೈಶಿಷ್ಟ್ಯ: ಸೆಪ್ಟೆಂಬರ್‌ನಲ್ಲಿ Apple iPhone 14 ಸರಣಿ ಫೋನುಗಳು ಬಿಡುಗಡೆಯಾಗಲಿವೆ. ಇದರದಲ್ಲಿ ಬಳಕೆದಾರರಿಗೆ ಸಿಗ್ನಲ್ ಇಲ್ಲದೆ ತನ್ನ ಫೋನ್ ಬಳಸಲು ಅನುಮತಿಸುವ ವೈಶಿಷ್ಟ್ಯವನ್ನು ಇರಲಿದೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ Apple ತನ್ನ ಹೊಸ iPhone ಮತ್ತು iPhone 14 ಸರಣಿ ಫೋನುಗಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಇದರ ಹಲವು ವೈಶಿಷ್ಟ್ಯಗಳ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.
ಹೊಸ ವರದಿಯ ಪ್ರಕಾರ ಐಫೋನ್ 14 ವಿಶೇಷ ವೈಶಿಷ್ಟ್ಯವನ್ನು ಹೊಂದಿರುತ್ತದಂತೆ. ಈ ಫೋನ್ ಸಿಗ್ನಲ್ ಇಲ್ಲದ ಸ್ಥಳಗಳಲ್ಲಿಯೂ ಸಹ ಚೆನ್ನಾಗಿ ಕಾರ್ಯನಿರ್ವಹಿಸುತ್ತದಂತೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿರಿ.
ಇದನ್ನೂ ಓದಿ: Flipkart Big Saving Days: ರೆಡ್‌ಮಿಯ 5 ಜಿ ಫೋನ್ ಕೇವಲ 1500 ರೂ. ಗೆ ಲಭ್ಯ
Apple Watchನ ಈ ವೈಶಿಷ್ಟ್ಯವು iPhone 14ರಲ್ಲಿರಲಿದೆ
ವರದಿಯ ಪ್ರಕಾರ Apple ತನ್ನ ಹೊಸ iPhone ಮತ್ತು iPhone 14ಗೆ ತನ್ನ ಸ್ಮಾರ್ಟ್‌ವಾಚ್, Apple Watchನ ವೈಶಿಷ್ಟ್ಯವನ್ನು ಸೇರಿಸಲಿದೆಯಂತೆ. ಇದು ಬಳಕೆದಾರರಿಗೆ ತುರ್ತು ಪರಿಸ್ಥಿತಿಯಲ್ಲಿ ಸಿಗ್ನಲ್ ಇಲ್ಲದೆಯೂ ತಮ್ಮ ಸ್ಮಾರ್ಟ್‌ಫೋನ್ ಬಳಸಲು ಅನುವು ಮಾಡಿಕೊಡುತ್ತದೆ. ವಾಸ್ತವವಾಗಿ ಇಲ್ಲಿ ನಾವು ಐಫೋನ್ 14ನಲ್ಲಿ ಉಪಗ್ರಹ ಸಂಪರ್ಕದ ಬಗ್ಗೆ ಹೇಳುತ್ತಿದ್ದೇವೆ.
ಸಿಗ್ನಲ್ ಇಲ್ಲದೆ iPhone 14 ಬಳಸಬಹುದು
ವರದಿಯ ಪ್ರಕಾರ ಸ್ಮಾರ್ಟ್‌ಫೋನ್ ಬ್ರಾಂಡ್ ಆ್ಯಪಲ್ ತನ್ನ ಐಫೋನ್ 14ರಲ್ಲಿ ವಿಶೇಷ ಸಂಪರ್ಕ ವೈಶಿಷ್ಟ್ಯವನ್ನು ಸೆಪ್ಟೆಂಬರ್ 2022ರಲ್ಲಿ ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಸಂಪರ್ಕದ ಸಹಾಯದಿಂದ ಸಿಗ್ನಲ್ ಇಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಸಂದೇಶಗಳನ್ನು ಅಥವಾ SOS ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Realme GT 2 Pro Sale: ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮೇಲೆ 18,000 ರೂ.ವರೆಗೆ ರಿಯಾಯಿತಿ ಲಭ್ಯ
ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕಲ್ಲವೇ? ‘ಸಂಪರ್ಕಗಳ ಮೂಲಕ ತುರ್ತು ಸಂದೇಶ’(Emergency Message via Contacts) ಹೆಸರಿನ ವೈಶಿಷ್ಟ್ಯವನ್ನು iPhone 14ರ ಸಿಸ್ಟಮ್‌ಗೆ ಸೇರಿಸಲಾಗುವುದು. ಈ ವೈಶಿಷ್ಟ್ಯದ ಸಹಾಯದಿಂದ ಫೋನ್ ಸಿಗ್ನಲ್ ಬರದ ಸ್ಥಳಗಳಿಂದಲೂ ತುರ್ತು ಸಂದೇಶಗಳನ್ನು ಅಥವಾ ಪ್ರಮುಖ ಸಂದೇಶಗಳನ್ನು ಕಳುಹಿಸಲು ನಿಮಗೆ ಸಾಧ್ಯವಾಗಲಿದೆ.
ಐಫೋನ್ 13ರ ಬಿಡುಗಡೆಯ ಸಮಯದಲ್ಲಿಯೂ ಈ ವೈಶಿಷ್ಟ್ಯದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ, ಈ ವೈಶಿಷ್ಟ್ಯವನ್ನು ಅದರಲ್ಲಿ ಅಳವಡಿಸಿರಲಿಲ್ಲ. ಇದೀಗ ಈ ವೈಶಿಷ್ಟ್ಯವನ್ನು ಐಫೋನ್ 14ರಲ್ಲಿ ಸೇರಿಸಲಾಗುವುದು ಎಂದು ಹೇಳಲಾಗುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.