iPhone vs Vivo: ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ವಿವೋ ಸ್ಮಾರ್ಟ್‌ಫೋನ್!

Vivo ನಾಳೆ 3 ಸಾಧನಗಳನ್ನು ಬಿಡುಗಡೆ ಮಾಡುತ್ತಿದೆ. ಈ ವೇಳೆ ಐಫೋನ್ 13 ಪ್ರೊ ಮ್ಯಾಕ್ಸ್‌ನೊಂದಿಗೆ ಸ್ಪರ್ಧಿಸಲಿರುವ ವಿವೋ ಎಕ್ಸ್ ನೋಟ್ ರಿಲೀಸ್ ಮಾಡಲಾಗುತ್ತಿದೆ. ಇದರಲ್ಲಿ ನೀವು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಇದಲ್ಲದೆ ವಿವೋ ಎಕ್ಸ್ ಫೋಲ್ಡ್ ಮತ್ತು ವಿವೋ ಪ್ಯಾಡ್ ಅನ್ನು ಸಹ ಪರಿಚಯಿಸಲಾಗುತ್ತಿದೆ.  

Written by - Puttaraj K Alur | Last Updated : Apr 10, 2022, 11:31 AM IST
  • Vivo ನಾಳೆ ಅಂದರೆ ಏಪ್ರಿಲ್ 11ರಂದು ಸ್ಪ್ರಿಂಗ್ ಲಾಂಚ್ ಕಾರ್ಯಕ್ರಮ ಆಯೋಜಿಸಿದೆ
  • Vivo X Fold, Vivo X Note ಮತ್ತು Vivo Pad ಸಾಧನಗಳು ಬಿಡುಗಡೆಯಾಗಲಿವೆ
  • ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್ ಪರಿಚಯಿಸಲಿರುವ ವಿವೋ
iPhone vs Vivo: ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ವಿವೋ ಸ್ಮಾರ್ಟ್‌ಫೋನ್! title=
ವಿವೋದಿಂದ 3 ಸಾಧನಗಳ ಬಿಡುಗಡೆ

ನವದೆಹಲಿ: ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ Vivo ನಾಳೆ ಅಂದರೆ ಏಪ್ರಿಲ್ 11ರಂದು ಸ್ಪ್ರಿಂಗ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ Vivo X Fold, Vivo X Note ಮತ್ತು Vivo Pad ಸಾಧನಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಚೀನಾದಲ್ಲಿ ರಾತ್ರಿ 8.30ಕ್ಕೆ(ಭಾರತೀಯ ಕಾಲಮಾನ ಸಂಜೆ 5) ಈ ವಿಶೇಷ ಸಾಧನಗಳನ್ನು ರಿಲೀಸ್ ಮಾಡಲಾಗುತ್ತಿದೆ.

ಈ ಶುಭ ಸಂದರ್ಭದಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್‌ನೊಂದಿಗೆ ಸ್ಪರ್ಧಿಸಲಿರುವ ವಿವೋ ಎಕ್ಸ್ ನೋಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ Vivo X Fold ಸಹ Samsung Galaxy Z Fold3ಗೆ ಸ್ಪರ್ಧೆ ಒಡ್ಡಲಿದೆ.  ಈ ಸಮಾರಂಭದಲ್ಲಿ ವಿವೋ ಪ್ಯಾಡ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಈ 3 ಸಾಧನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: iPhone 13 Pro Maxನಲ್ಲಿ ಅತಿ ದೊಡ್ಡ ರಿಯಾಯಿತಿ, ಕೇವಲ 22 ಸಾವಿರಕ್ಕೆ ಈ ರೀತಿ ಖರೀದಿಸಿ

Vivo XNote

2021ರಲ್ಲಿ ಹಲವು ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಿಗೆ ಪೈಪೋಟಿ ನೀಡಲು Vivo ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ. ಇದಕ್ಕೆ Vivo X Note ಎಂದು ಹೆಸರಿಸಲಾಗಿದೆ. ಇದು iPhone 13 Pro Max ಮತ್ತು Xiaomi Mi 11 Ultra ನಂತಹ ಫೋನ್‌ಗಳೊಂದಿಗೆ ಸ್ಪರ್ಧಿಸಲಿದೆ. ಈ ಫೋನ್ QHD + 7-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದಲ್ಲದೇ 5000mAh ಸ್ಟ್ರಾಂಗ್ ಬ್ಯಾಟರಿ ಇದು 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಅಂದರೆ  ಕೇವಲ 30 ನಿಮಿಷಗಳಲ್ಲಿ ಫೋನ್ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು ಇಡೀ ದಿನವೂ ಕಾರ್ಯನಿರ್ವಹಿಸುತ್ತದೆ.

ವಿವೋ ಎಕ್ಸ್ ಫೋಲ್ಡ್

X ಫೋಲ್ಡ್ Vivo ಬ್ರ್ಯಾಂಡ್‌ನ ಮಡಚಬಹುದಾದ ಮೊದಲನೆಯ ಸ್ಮಾರ್ಟ್‍ ಫೋನ್ ಆಗಿದೆ. ಇದರ ವಿನ್ಯಾಸವು Samsung Galaxy Z Fold 3 ಮತ್ತು Huawei Mate X 2 ಅನ್ನು ಹೋಲುತ್ತದೆ. ಇದು 8-ಇಂಚಿನ 2K LTPO 3.0 ಒಳಗಿನ ಫೋಲ್ಡಿಂಗ್ OLED ಪ್ಯಾನೆಲ್ ಮತ್ತು 6.53-ಇಂಚಿನ ಪೂರ್ಣ HD+ external displayಯನ್ನು ಬೆಂಬಲಿಸುವ ನಿರೀಕ್ಷೆಯಿದೆ. ಆಂತರಿಕ ಮತ್ತು ಬಾಹ್ಯ ಡಿಸ್ಪ್ಲೇ ಎರಡೂ 120Hz ರಿಫ್ರೆಶ್ ದರದೊಂದಿಗೆ ಸಿದ್ಧವಾಗಿದೆ. Vivo X ಫೋಲ್ಡ್ ತನ್ನ 4,600mAh ಬ್ಯಾಟರಿಯನ್ನು ಚಾರ್ಜ್ ಮಾಡಲು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಮೊದಲ ಫೋಲ್ಡಬಲ್ ಫೋನ್ ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿPOCO Smartphone: ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ! ಕೇವಲ 821 ರೂ.ಗೆ 5G ಸ್ಮಾರ್ಟ್‌ಫೋನ್‌

ವಿವೋ ಪ್ಯಾಡ್

Vivo ಕಂಪನಿಯು ವಿವೋ ಪ್ಯಾಡ್‌ನೊಂದಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಸಾಧನವು ಜನಪ್ರಿಯ Qualcomm Snapdragon 870 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. Vivo Pad 11-ಇಂಚಿನ ಪ್ಯಾನೆಲ್ ಅನ್ನು ಸಹ ಹೊಂದಿದೆ. ಇದು 2.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಅದರ ಬಳಕೆದಾರರಿಗೆ ಸುಗಮ ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ. ಈ 3 ಸಾಧನಗಳ ದರಗಳ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಡುಗಡೆಯಾದ ಬಳಿಕ ಸಂಪೂರ್ಣ ಮಾಹಿತಿ ಸಿಗುವ ಸಾಧ‍್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News