ನವದೆಹಲಿ : ಆಪಲ್ ಎರಡು ವರ್ಷಗಳ ಹಿಂದೆ ಅಂದರೆ 2020 ರಲ್ಲಿ ಎರಡನೇ ತಲೆಮಾರಿನ iPhone SE ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯು ತನ್ನ ಮುಂಬರುವ ಈವೆಂಟ್‌ನಲ್ಲಿ ಈ ಫೋನ್ ನ ಹೊಸ ವರ್ಷನ್ ಲಾಂಚ್ ಮಾಡುವ ನಿರೀಕ್ಷೆಯಿದೆ. ಈ ಲಾಂಚ್ ಮಾರ್ಚ್ 8 ರಂದು ನಡೆಯಲಿದೆ ಎನ್ನಲಾಗಿದೆ. ಐಫೋನ್‌ನೊಂದಿಗೆ  (iPhone) ಐಪ್ಯಾಡ್ ಏರ್ (iPad Air) ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಬಹುದು.  ಇದೀಗ  iPhone SE 2022 ರ ಸಂಭವನೀಯ ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಫೋನ್‌ನ ಬೆಲೆಯ ಹೊರತಾಗಿ, ಹಲವಾರು ವೈಶಿಷ್ಟ್ಯಗಳು ಕೂಡಾ ಮುನ್ನೆಲೆಗೆ ಬಂದಿವೆ (iPhone SE 2022 Specification). 


COMMERCIAL BREAK
SCROLL TO CONTINUE READING

iPhone SE 2022 ನಿರೀಕ್ಷಿತ ಬೆಲೆ :
ವಿಶ್ಲೇಷಕ ಜಾನ್ ಡೊನೊವನ್ ಪ್ರಕಾರ, ಇನ್ನೂ ಬಿಡುಗಡೆಯಾಗಬೇಕಿರುವ iPhone SE ಆರಂಭಿಕ ಬೆಲೆ  22 ರಿಂದ 23 ಸಾವಿರ ಎಂದು ಹೇಳಲಾಗುತ್ತದೆ (iPhone SE price) . ಇದು ನಿಜವಾಗಿದ್ದರೆ, iPhone SE ಯ 2022 ಆವೃತ್ತಿಯು iPhone SE 2020 ಕ್ಕಿಂತ  ಅಗ್ಗವಾಗಿರಲಿದೆ. iPhone SE ಬೆಲೆಯು ಇಷ್ಟು ಕಡಿಮೆಯಾಗುವ ನಿರೀಕ್ಷೆಯಿಲ್ಲ. iPhone SE ನ ಬೆಲೆ ಸುಮಾರು 40,000 ರೂಪಾಯಿಗಳಾಗುವ ಎಲ್ಲಾ ಸಾಧ್ಯತೆಗಳಿವೆ. ಮತ್ತೊಂದೆಡೆ, ಮತ್ತೊಂದು ವಿಶ್ಲೇಷಕ, ಡೇನಿಯಲ್ ಐವ್ಸ್ ಕೂಡ ಮುಂಬರುವ iPhone SE  30,000 ರೂಪಾಯಿಗಳಾಗಿರಬಹುದು ಎಂದು ಹೇಳಿದೆ.  


ಇದನ್ನೂ ಓದಿ : Mobile Game ಆಡುವವರಿಗೆ ದೊಡ್ಡ ಉಡುಗೊರೆ ನೀಡಿದ Google, ಇಲ್ಲಿದೆ ಡೀಟೇಲ್ಸ್


iPhone SE 2022 ನಿರೀಕ್ಷಿತ ವಿಶೇಷಣಗಳು :
ಹೊಸ iPhone SE ಎರಡನೇ ಜನರೇಶನ್ ನ ಸಾಧನದ ರೀತಿಯ ವಿನ್ಯಾಸದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್ಫೋನ್ 4.7-ಇಂಚಿನ ರೆಟಿನಾ HD ಡಿಸ್ಪ್ಲೇಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್ ಟಚ್‌ಐಡಿ ಹೋಮ್ ಬಟನ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್‌ಫೋನ್ ಆಪಲ್‌ನ ಸ್ವಂತ A15 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು iOS 15 ಆಪರೇಟಿಂಗ್ ಸಿಸ್ಟಮ್ ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ. ಐಫೋನ್ SE 2022 ಸಹ 5G ಸಂಪರ್ಕದೊಂದಿಗೆ ಬರುತ್ತದೆ ಎನ್ನಲಾಗಿದೆ (iPhone SE 2022 Specification). 


iPad Air (5th generation) :
ಹೊಸ iPhone SE ಜೊತೆಗೆ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಕೂಡ ಮುಂಬರುವ ಬಿಡುಗಡೆ  ಸಮಾರಂಭದಲ್ಲಿ ಹೊಸ iPad ಏರ್ ಅನ್ನು ಬಿಡುಗಡೆ ಮಾಡಲಿದೆ  ಎಂದು ಹೇಳಲಾಗುತ್ತದೆ. ಹೊಸ ಐಪ್ಯಾಡ್ ಏರ್ ಬಗ್ಗೆ ಕೆಲವು ವಿವರಗಳು ಮಾತ್ರ ಲಭ್ಯವಾಗಿದೆ. 


ಇದನ್ನೂ ಓದಿ : BSNL ಭರ್ಜರಿ ಪ್ಲಾನ್: 200ರೂ.ಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.