ನವದೆಹಲಿ: ದೀರ್ಘ ಕಾಯುವಿಕೆಯ ನಂತರ ಐಫೋನ್ 12 ಅನ್ನು ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಹೊಸ ಐಫೋನ್ (ಐಫೋನ್ 12 ಲಾಂಚ್ಡ್) ಬಿಡುಗಡೆಯಾದ ನಂತರ, ಎಲ್ಲಾ ಹಳೆಯ ಮಾದರಿಗಳ ಬೆಲೆಗಳು ಕುಸಿಯುತ್ತವೆ ಎಂಬುದು ಸ್ಪಷ್ಟವಾಗಿದೆ. ಏತನ್ಮಧ್ಯೆ ಒಳ್ಳೆಯ ಸುದ್ದಿ ಏನೆಂದರೆ ಈಗ ನೀವು ಐಫೋನ್ 11 (iPhone 11) ರಿಂದ ಐಫೋನ್ ಎಸ್ಇ ವರೆಗೆ ಮಾದರಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ನಾಳೆಯಿಂದ ಪ್ರಾರಂಭವಾಗುವ ಫ್ಲಿಪ್‌ಕಾರ್ಟ್ (Flipkart) ಸೇಲ್ ಮತ್ತು ಅಮೆಜಾನ್ (Amazon) ಸೇಲ್ ಆನ್‌ಲೈನ್ ಮಾರಾಟದಲ್ಲಿ ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಬನ್ನಿ ಸೆಲ್‌ನಲ್ಲಿ ಈ ಫೋನ್ ಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯೋಣ...


ಐಫೋನ್ 11 ಬೆಲೆಗಳು ಕಡಿಮೆಯಾಗಲಿವೆ:
ಐಫೋನ್ 12 ಬಿಡುಗಡೆಯು ಹಳೆಯ ಮಾದರಿಗಳು ಅಗ್ಗವಾಗಲಿ ಎಂದು ಕಾಯುತ್ತಿರುವ ಜನರಿಗೆ ಹೆಚ್ಚಿನ ಲಾಭವಾಗಲಿದೆ. ಅಕ್ಟೋಬರ್ 13ರಂದು ಹೊಸ ಐಫೋನ್ ಬಿಡುಗಡೆಯಾದಾಗಿನಿಂದ, ಐಫೋನ್ 11ರ ಬೆಲೆಯನ್ನು ಕಡಿತಗೊಳಿಸಲಾಗುವುದು ಎಂಬ ಊಹಾಪೋಹಗಳಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಮ್ಮ ಮುಂಬರುವ ಸೆಲ್‌ನಲ್ಲಿ ಐಫೋನ್ 11 ಮಾದರಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದು.


VIDEO: 6 ಸಾವಿರ ರೂ. ಪೋನನ್ನು 1 ಲಕ್ಷ ರೂ. iPhone ನಂತೆ ರೂಪಾಂತರಗೊಳಿಸಿದ ವ್ಯಕ್ತಿ


ಐಫೋನ್ 11 ಬೆಲೆ 50,000 ರೂ.:-
ಅಮೆಜಾನ್ ತನ್ನ ಜಾಹೀರಾತಿನಲ್ಲಿ ಐಫೋನ್ 11 4_, 999 ಬೆಲೆಯನ್ನು ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಅಂದರೆ ಈಗ ಇ-ಕಾಮರ್ಸ್ ಕಂಪನಿಯು ಮುಂಬರುವ ಮಾರಾಟದಲ್ಲಿ ಐಫೋನ್ 11 ಅನ್ನು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ ಎಂಬುದು ಖಚಿತ. ಆದಾಗ್ಯೂ ಈ ಫೋನ್‌ನ ನಿಖರವಾದ ಬೆಲೆ ಮಾರಾಟದ ದಿನದಂದು ಮಾತ್ರ ತಿಳಿಯುತ್ತದೆ ಎನ್ನಲಾಗಿದೆ.


40 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ  iPhone XR:
ಹೌದು ಈ ಸೆಲ್‌ನಲ್ಲಿ ನೀವು ಐಫೋನ್ ಎಕ್ಸ್‌ಆರ್ ಅನ್ನು 40 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಬೆಲೆಯನ್ನು 3x, 999 ರೂಪಾಯಿಗಳು ಎಂದು ತಿಳಿಸುವ ಮೂಲಕ ಇನ್ನೂ ಸಸ್ಪೆನ್ಸ್ ಕಾದುಕೊಂಡಿದೆ. ಇದರರ್ಥ 52,500 ರೂ.ಗೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಈ ಫೋನ್‌ನಲ್ಲಿ ನೀವು ಸುಮಾರು 12,500 ರೂ.ಗಳ ನೇರ ಲಾಭವನ್ನು ಪಡೆಯುತ್ತೀರಿ ಎಂಬುದು ಬಹಳ ಸ್ಪಷ್ಟವಾಗಿದೆ. ಮಾರಾಟದ ಸಮಯದಲ್ಲಿ ನೀವು ಅಮೆಜಾನ್ ಮೇಲೆ ಕಣ್ಣಿಡಬೇಕಾಗುತ್ತದೆ. ಏಕೆಂದರೆ ನೀವು ಫ್ಲಿಪ್‌ಕಾರ್ಟ್ ಬದಲಿಗೆ ಅಮೆಜಾನ್‌ನಲ್ಲಿ ಇನ್ನೂ ಕಡಿಮೆ ಬೆಲೆಗೆ ಸೇಲ್ ಮಾಡುವ ನಿರೀಕ್ಷೆಯಿದೆ.


1000 ಅಡಿಯಿಂದ ಬಿದ್ದರೂ ಐಪೋನ್ ಗೆ ಏನು ಆಗಿಲ್ಲ ಅಂದ್ರೆ ನಂಬುತ್ತೀರಾ?


35,000 ಕ್ಕಿಂತ ಕಡಿಮೆ ದರದಲ್ಲಿ ಐಫೋನ್ ಎಸ್ಇ 2020 :
ಐಫೋನ್ ಬ್ರಾಂಡ್‌ಗೆ ಸೇರಲು ಬಯಸುವವರಿಗೆ ಇದು ಒಳ್ಳೆಯ ವ್ಯವಹಾರವೂ ಆಗಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಐಫೋನ್ 12 ಅಥವಾ ಐಫೋನ್ 11 ಅನ್ನು ಪಡೆಯಲು ಸಾಧ್ಯವಾಗದ ಜನರು ಐಫೋನ್ ಎಸ್ಇ ಖರೀದಿಸಬಹುದು. ಈ ಮಾದರಿಯಲ್ಲಿಯೂ ಉತ್ತಮ ಆಫರ್ ಗಳು  ಕಂಡುಬರುತ್ತವೆ. ಈ ಫೋನ್ ಅನ್ನು ಮುಂಬರುವ ಆನ್‌ಲೈನ್ ಸೆಲ್‌ನಲ್ಲಿ ನೀವು 35,000 ರೂ.ಗಳಿಗೆ ಪಡೆಯಬಹುದು ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.