ವಾಟ್ಸಾಪ್ ಚಾಟಿಂಗ್ ಸೆಕ್ಯುರಿಟಿ ಟಿಪ್ಸ್: ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ವಾಟ್ಸಾಪ್ ಜನಪ್ರಿಯ ಸಂವಹನ ಸಾಧನವಾಗಿದೆ. ವಾಟ್ಸಾಪ್ ಚಾಟ್ ಮೂಲಕ ಜನರು ತಮ್ಮ ವೃತ್ತಿಪರ ಹಾಗೂ ಖಾಸಗಿ ಸಂಭಾಷಣೆಗಳನ್ನು ನಡೆಸುತ್ತಾರೆ. ಆದರೆ, ನಿಮ್ಮ ಅರಿವಿಲ್ಲದೆ ಯಾರಾದರೂ ವಾಟ್ಸಾಪ್‌ನಲ್ಲಿ ನಿಮ್ಮ ಚಾಟಿಂಗ್ ಓದಬಹುದೇ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಮೊಬೈಲ್ ಫೋನ್‌ನಲ್ಲಿ ಅದರ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ ಎಂದು ನಿಮಗೆ ತಿಳಿದಿಲ್ಲದಿರಬಹುದು. ನಿಮ್ಮ ಸುರಕ್ಷಿತ ವಾಟ್ಸಾಪ್ ಚಾಟಿಂಗ್ ಹೇಗೆ ಸೋರಿಕೆಯಾಗಬಹುದು ಮತ್ತು ಅದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.


COMMERCIAL BREAK
SCROLL TO CONTINUE READING

ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯವು ಭಾರೀ ನಷ್ಟವನ್ನು ಉಂಟು ಮಾಡಬಹುದು:
ಪ್ರಸ್ತುತ ಭಾರತದಲ್ಲಿ ಸುಮಾರು 48 ಕೋಟಿ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಈ ಆ್ಯಪ್‌ನ ಬಳಕೆ ಹೆಚ್ಚಲು ಕಾರಣ ಅದರ ಸುರಕ್ಷತೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯವು ಈ ಸುರಕ್ಷತೆಯನ್ನು ಮುರಿಯಲು ಯಾರಿಗಾದರೂ ಅವಕಾಶವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? 


ಹೌದು, ಒಂದು ಸಣ್ಣ ಟ್ರಿಕ್ ಬಳಸುವ ಮೂಲಕ ಇದು ಸಾಧ್ಯವಾಗಲಿದೆ. ಈ ಟ್ರಿಕ್‌ನ ಹೆಸರು ವಾಟ್ಸಾಪ್ ವೆಬ್. ವಾಟ್ಸಾಪ್ ವೆಬ್‌ನ ವೈಶಿಷ್ಟ್ಯವನ್ನು ಎಲ್ಲಾ ಫೋನ್‌ಗಳ ವಾಟ್ಸಾಪ್‌ನಲ್ಲಿ ಒದಗಿಸಲಾಗಿದೆ. ಇದರರ್ಥ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಒಂದೇ ವಾಟ್ಸಾಪ್ ಖಾತೆಯನ್ನು ನೀವು 4 ಸಾಧನಗಳಲ್ಲಿ ಬಳಸಬಹುದು. 


ಇದನ್ನೂ ಓದಿ- ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ? ಈ ರೀತಿ ತಿಳಿಯಿರಿ


ಒಂದೇ ವಾಟ್ಸಾಪ್ ಖಾತೆಯನ್ನು 4 ಸಾಧನಗಳಲ್ಲಿ ಬಳಸಬಹುದು:
ನೀವು ಕಛೇರಿಯಲ್ಲಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಹಲವು ಸಂದರ್ಭಗಳಲ್ಲಿ ನಿಮಗೆ ಪದೇ ಪದೇ ವಾಟ್ಸಾಪ್ ಚಾಟ್ ಮಾಡುವ ಅಗತ್ಯವಿರಬಹುದು. ಇಂತಹ ಸಂದರ್ಭದಲ್ಲಿ ನೀವು ವಾಟ್ಸಾಪ್ ವೆಬ್‌ಗೆ ಹೋಗುವ ಮೂಲಕ ನೀವು ಬೇರೆ ಸಾಧನಗಳಲ್ಲಿ ನಿಮ್ಮ ಚಾಟಿಂಗ್ ಅನ್ನು ಸಕ್ರಿಯಗೊಳಿಸಬಹುದು. 


ಇದಕ್ಕಾಗಿ, ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗೆ ಹೋಗಿ ಮತ್ತು ಗೂಗಲ್ನಲ್ಲಿ ವಾಟ್ಸಾಪ್ ವೆಬ್ ಎಂದು ಬರೆಯೇಕು. ನಂತರ ನೀವು ವಾಟ್ಸಾಪ್ ವೆಬ್‌ಗೆ ಬಂದಾಗ, ನೀವು ಸ್ಕ್ಯಾನ್ ಕೋಡ್ ಅನ್ನು ನೋಡುತ್ತೀರಿ. ನಂತರ ನೀವು ನಿಮ್ಮ ಫೋನ್‌ನ ವಾಟ್ಸಾಪ್ ಖಾತೆಗೆ ಹೋಗಿ ಮತ್ತು ಮೇಲಿನ ಬಲಭಾಗದಲ್ಲಿರುವ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ನೀವು ಲಿಂಕ್ಡ್ ಸಾಧನಗಳನ್ನು ಬರೆಯುವುದನ್ನು ನೋಡುತ್ತೀರಿ. 


ಈ ನಿರ್ಲಕ್ಷ್ಯದಿಂದ ನಿಮ್ಮ ಚಾಟಿಂಗ್ ಸೋರಿಕೆ ಆಗಬಹುದು:
ನೀವು ಲಿಂಕ್ಡ್ ಸಾಧನಗಳ ಮೇಲೆ ಕ್ಲಿಕ್ ಮಾಡಿದರೆ, ಕ್ಯಾಮೆರಾ ತೆರೆಯುತ್ತದೆ. ಇದರ ನಂತರ, ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ತೋರಿಸಿರುವ ಕೋಡ್ ಅನ್ನು ಆ ಕ್ಯಾಮೆರಾದೊಂದಿಗೆ ಸ್ಕ್ಯಾನ್ ಮಾಡುತ್ತೀರಿ. ಅದನ್ನು ಸ್ಕ್ಯಾನ್ ಮಾಡಿದ ತಕ್ಷಣ, ವಾಟ್ಸಾಪ್ ನಿಮ್ಮ ಮೊಬೈಲ್ ಫೋನ್ ಮತ್ತು ನಿಮ್ಮ ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ನಲ್ಲಿ ಅದೇ ಖಾತೆಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. 


ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಗೆ ಹೋಗುವಾಗ ಆಕಸ್ಮಿಕವಾಗಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ವೆಬ್‌ನಿಂದ ಲಾಗ್ ಔಟ್ ಆಗದಿದ್ದರೆ, ನಿಮ್ಮ ವಾಟ್ಸಾಪ್ ತೆರೆದಿರುತ್ತದೆ ಮತ್ತು ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು ಏನು ಬರೆದರೂ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕುಳಿತವರು ಸಹ ಅದನ್ನು ಓದಬಹುದು. 


ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಮುನ್ನ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ


ಬೇರೆ ಯಾರಾದರೂ ನಿಮ್ಮ ಚಾಟಿಂಗ್ ಓದುತ್ತಿರಬಹುದು ಎಂಬ ಸಂದೇಹವಿದ್ದರೆ ಈ ಕೆಲಸ ಮಾಡಿ: 
ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ವೆಬ್‌ನಿಂದ ಲಾಗ್ ಔಟ್ ಆಗಿದ್ದೇವೋ ಇಲ್ಲವೋ ಎಂಬ ಅನುಮಾನವಿದ್ದರೆ ಅಥವಾ ಬೇರೆ ಯಾರಾದರೂ ನಿಮ್ಮ ಚಾಟಿಂಗ್ ಓದುತ್ತಿರಬಹುದು ಎಂಬ ಸಂದೇಹವಿದ್ದರೆ ಅದನ್ನು ಸಹ ಸುಲಭವಾಗಿ ಕಂಡು ಹಿಡಿಯಬುದು. ಇದಕ್ಕಾಗಿ ಮೊದಲು ನಿಮ್ಮ ವಾಟ್ಸಾಪ್ ಅನ್ನು ತೆರೆಯಬೇಕು. ಅಲ್ಲಿ ಮೇಲಿನ ಬಲಭಾಗದ ಮೂಲೆಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡುತ್ತೀರಿ. ಆ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ಡ್ ಡಿವೈಸಸ್ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನಿಮ್ಮ ವಾಟ್ಸಾಪ್ ಖಾತೆಯು ಚಾಲನೆಯಲ್ಲಿರುವ ಎಲ್ಲಾ ಸಾಧನಗಳ ಮಾಹಿತಿಯನ್ನು ನೀವು ಪಡೆಯುತ್ತೀರಿ. 


ಒಂದೊಮ್ಮೆ ಬೇರೆ ಯಾವುದಾದರೂ ಸಾಧನದಲ್ಲಿ ನೀವು ಲಾಗಿನ್ ಆಗಿದ್ದು ಲಾಗ್ ಔಟ್ ಆಗಲು ಮರೆತಿದ್ದರೆ ನಿಮ್ಮ ಸಾಧನದಲ್ಲಿಯೇ ಲಾಗ್ ಔಟ್ ಆಗಬಹುದು. ಈ ಮೂಲಕ ನಿಮ್ಮ ವಾಟ್ಸಾಪ್ ಚಾಟಿಂಗ್ ಅನ್ನು ಸುರಕ್ಷಿತವಾಗಿರಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.