ರಾತ್ರಿ ವೇಳೆ Android ಬಳಕೆದಾರರ ಬೇಹುಗಾರಿಕೆ ನಡೆಸುತ್ತಾ WhatsApp!
WhatsApp: ಪ್ರಸ್ತುತ ಜನರ ಜೀವನಾಡಿ ಆಗಿರುವ ವಾಟ್ಸಾಪ್ ರಾತ್ರಿಯಲ್ಲಿ ಗ್ರಾಹಕರ `ಗೂಢಾಚಾರಿಕೆ` ನಡೆಸುತ್ತಿದೆಯೇ? ಈ ರೀತಿಯ ಶಾಕಿಂಗ್ ಮಾಹಿತಿಯೊಂದು ಸದ್ಯ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
Shocking News About WhatsApp: ಪ್ರಸ್ತುತ ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ, ವಾಟ್ಸಾಪ್ ರಾತ್ರಿ ವೇಳೆ Android ಬಳಕೆದಾರರ ಬೇಹುಗಾರಿಕೆ ನಡೆಸುತ್ತಿದೆ ಎಂಬ ಶಾಕಿಂಗ್ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಇಂಜಿನಿಯರ್ ಒಬ್ಬರು ತನ್ನ ವಾಟ್ಸಾಪ್ ಅಪ್ಲಿಕೇಶನ್‌ನ ಮೈಕ್ರೊಫೋನ್ ನಿದ್ರೆಯ ಸಮಯದಲ್ಲಿಯೂ ಕಾರ್ಯನಿರ್ವಹಿಸುವುದನ್ನು ಗಮನಿಸಿರುವುದಾಗಿ ಟ್ವೀಟ್ ಮಾಡಿದ್ದರು. ಬಳಿಕ ಈ ಟ್ವೀಟ್ ಸಖತ್ ಸದ್ದು ಮಾಡಿತ್ತು. ಎಲೋನ್ ಮಸ್ಕ್ ಕೂಡ ಈ ವೈರಲ್ ಟ್ವೀಟ್ ಗೆ ಉತ್ತರ ನೀಡಿದ್ದು, "ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ" ಎಂದಿದ್ದರು.
ಗಮನಾರ್ಹವಾಗಿ, ಎಲೋನ್ ಮಸ್ಕ್ ಮೆಟಾವನ್ನು ಹೆಚ್ಚು ಇಷ್ಟಪಡುವುದಿಲ್ಲ. ಮಾತ್ರವಲ್ಲ, ಅಂತಹ ಅಪ್ಲಿಕೇಶನ್‌ಗಳ ವಿರುದ್ಧ ಅವರು ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ. ವಾಟ್ಸಾಪ್ ರಾತ್ರಿಯಲ್ಲಿ 'ಗೂಢಚಾರಿಕೆ' ನಡೆಸುತ್ತಿದೆ ಎಂದು ಟ್ವೀಟ್ ಮಾಡಿದ್ದ ಇಂಜಿನಿಯರ್ ಬಳಿಕ ಮತ್ತೊಂದು ಟ್ವೀಟ್ ಮಾಡಿ ಅದು ಆಂಡ್ರಾಯ್ಡ್ ಡ್ಯಾಶ್‌ಬೋರ್ಡ್‌ನಲ್ಲಿ ಬೆಳಿಗ್ಗೆ 4:20 ರಿಂದ 6:53 ರವರೆಗೆ ಹಿನ್ನೆಲೆಯಲ್ಲಿ ತನ್ನ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೈಕ್ರೊಫೋನ್ ತೋರಿಸುತ್ತದೆ. ಈ ಡ್ಯಾಶ್‌ಬೋರ್ಡ್ ಅವರ Android ಸಾಧನದ ಮೈಕ್ರೋಫೋನ್ ಅನ್ನು ವಾಟ್ಸಾಪ್ ಹೇಗೆ ಪ್ರವೇಶಿಸುತ್ತಿದೆ ಎಂಬುದನ್ನು ತಿಳಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
[[{"fid":"306506","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಇದನ್ನೂ ಓದಿ- ಈಗ Paytm ಮೂಲಕ ಹಣ ರವಾನೆ ಇನ್ನೂ ಸುಲಭ!
Foad Dabiri ಎಂಬುವ ಟ್ವಿಟ್ಟರ್ ಎಂಜಿನಿಯರ್ ಆಂಡ್ರಾಯ್ಡ್ ಡ್ಯಾಶ್‌ಬೋರ್ಡ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ 'ನಾನು ಮಲಗಿರುವಾಗ ಮತ್ತು ಬೆಳಿಗ್ಗೆ 6 ಗಂಟೆಗೆ ಎಚ್ಚರವಾದಾಗಿನಿಂದ WhatsApp ಮೈಕ್ರೊಫೋನ್ ಅನ್ನು ಹಿನ್ನೆಲೆಯಲ್ಲಿ ಬಳಸುತ್ತಿದೆ. ಏನಾಗುತ್ತಿದೆ?' ಎಂದುಯಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಆರೋಪ ಮಾಡಿರುವ ಫೋಡ್ ಡಬೀರಿ (Foad Dabiri) ಗೂಗಲ್ ಪಿಕ್ಸೆಲ್ ಫೋನ್ ಬಳಸುತ್ತಿದ್ದು, ಈ ವಿಷಯವನ್ನು ಪರಿಶೀಲಿಸಲು ನಾವು ಗೂಗಲ್‌ಗೆ ಕೇಳಿದ್ದೇವೆ ಮತ್ತು ಏನಾಗುತ್ತಿದೆ ಎಂಬುದರ ಕುರಿತು ಕಂಪನಿಯು ತನಿಖೆ ನಡೆಸುತ್ತಿದೆ ಎಂದು ಗೂಗಲ್ ವಕ್ತಾರರು ಖಚಿತಪಡಿಸಿದ್ದಾರೆ ಎಂದು ವಾಟ್ಸಾಪ್ ಈ ಹಿಂದೆ ಹೇಳಿತ್ತು.
ಇದನ್ನೂ ಓದಿ- ಹ್ಯಾವನ್ -1 ಪ್ರಥಮ ವಾಣಿಜ್ಯ ನಭೋ ನಿಲ್ದಾಣ (ಸ್ಪೇಸ್ ಸ್ಟೇಷನ್)
ಲಭ್ಯವಿರುವ ಮಾಹಿತಿಗಳ ಪ್ರಕಾರ, ಗೂಗಲ್ ವಕ್ತಾರರು ಆಂಡ್ರಾಯ್ಡ್‌ನಲ್ಲಿ ತಪ್ಪು ಮಾಹಿತಿಯನ್ನು ಸೃಷ್ಟಿಸುವ ದೋಷವಿದೆ ಎಂದು ಖಚಿತಪಡಿಸಿದ್ದಾರೆ. 'ನಮ್ಮ ಪ್ರಸ್ತುತ ತನಿಖೆಯ ಆಧಾರದ ಮೇಲೆ, ವಾಟ್ಸಾಪ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಆಂಡ್ರಾಯ್ಡ್‌ನಲ್ಲಿ ವರದಿಯಾದ ದೋಷವು ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿ ತಪ್ಪಾದ ಗೌಪ್ಯತೆ ಸೂಚಕಗಳು ಮತ್ತು ಅಧಿಸೂಚನೆಗಳನ್ನು ರಚಿಸುತ್ತದೆ' ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ