ಎಚ್ಚರ ! ನಿಮ್ಮ WhatsAppಗೂ ಈ ಇಂಟರ್ ನ್ಯಾಷನಲ್ ಕರೆ ಬಂದಿದೆಯೇ?

WhatsApp International Call Scam: ಭಾರತದಲ್ಲಿ ಹಲವಾರು WhatsApp ಬಳಕೆದಾರರು ಅಪರಿಚಿತ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್ ಗಳನ್ನು ಸ್ವೀಕರಿಸಿದ್ದಾರೆ ಎಂಬುದಾಗಿ  ವರದಿಯಾಗಿದೆ. ಈ ಸಮಸ್ಯೆ ದೇಶದೆಲ್ಲೆಡೆ ಕಾಣುತ್ತಿದೆ. ಈ ವಿಷಯ ಎಷ್ಟು ಗಂಭೀರವಾಗಿದೆ ಎಂದರೆ ಭಾರತ ಸರ್ಕಾರದ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಮುಂದೆ ಬಂದು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. 

Written by - Ranjitha R K | Last Updated : May 12, 2023, 09:53 AM IST
  • WhatsApp ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಪ್ಲಾಟ್ ಫಾರಂ ಆಗಿದೆ.
  • ಇದು ದೇಶದಲ್ಲಿ ಕೋಟಿಗಟ್ಟಲೆ ಸಕ್ರಿಯ ಬಳಕೆದಾರರನ್ನು ಹೊಂದಿದೆ
  • ಬಳಕೆದಾರರ ಆತಂಕ ಹೆಚ್ಚಿಸಿದೆ ಇಂಟರ್ ನ್ಯಾಷನಲ್ ಕಾಲ್ಸ್
ಎಚ್ಚರ !  ನಿಮ್ಮ WhatsAppಗೂ ಈ ಇಂಟರ್ ನ್ಯಾಷನಲ್ ಕರೆ  ಬಂದಿದೆಯೇ?  title=

WhatsApp International Call Scam : WhatsApp ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಪ್ಲಾಟ್ ಫಾರಂ ಆಗಿದೆ. ಇದು ದೇಶದಲ್ಲಿ ಕೋಟಿಗಟ್ಟಲೆ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿ ಹಲವಾರು WhatsApp ಬಳಕೆದಾರರು ಅಪರಿಚಿತ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್ ಗಳನ್ನು ಸ್ವೀಕರಿಸಿದ್ದಾರೆ ಎಂಬುದಾಗಿ  ವರದಿಯಾಗಿದೆ. ISD ಕೋಡ್‌ ಆಧಾರದ ಮೇಲೆ ಈ ಕರೆಗಳು, ಮಲೇಷ್ಯಾ, ಕೀನ್ಯಾ ಮತ್ತು ವಿಯೆಟ್ನಾಂ, ಇಥಿಯೋಪಿಯಾದಿಂದ ಬರುವಂಥದ್ದು ಎನ್ನಲಾಗಿದೆ. ಈ ಕರೆ ಮಾಡಿದವರು ಯಾರು ಯಾವ ಉದ್ದೇಶಕ್ಕಾಗಿ ಕರೆ ಮಾಡುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತಮಗೆ ಬರುತ್ತಿರುವ ಇಂಟರ್ ನ್ಯಾಷನಲ್ ಕರೆಗಳ ಬಗೆಗಿನ   ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡುವ ಮೂಲಕ ಬಳಕೆದಾರರು ದೂರುಗಳನ್ನು ನೋಂದಾಯಿಸುತ್ತಿದ್ದಾರೆ. 

ಈ ಸಮಸ್ಯೆ ದೇಶದೆಲ್ಲೆಡೆ ಕಾಣುತ್ತಿದೆ. ಈ ವಿಷಯ ಎಷ್ಟು ಗಂಭೀರವಾಗಿದೆ ಎಂದರೆ ಭಾರತ ಸರ್ಕಾರದ ಸಚಿವ ರಾಜೀವ್ ಚಂದ್ರಶೇಖರ್ ಮುಂದೆ ಬಂದು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ದೂರಿನ ಬಗ್ಗೆ ವಾಟ್ಸಾಪ್ ಗೆ ನೋಟಿಸ್ ಕೂಡಾ ಕಳುಹಿಸಲಾಗಿದೆ.  ಇದೀಗ ವಾಟ್ಸಾಪ್ ಈ ನೋಟಿಸ್‌ಗೆ ಉತ್ತರ ನೀಡಿದೆ.

ಇದನ್ನೂ ಓದಿ : ಎಸಿ-ಕೂಲರ್ ಬೇಕೇ ಆಗಿಲ್ಲ! ಬೇಸಿಗೆಯಲ್ಲಿ ಆರಾಮದಾಯಕ ನಿದ್ರೆಗಾಗಿ ಇಂದೇ ಖರೀದಿಸಿ ಎಸಿ ಬೆಡ್ ಶೀಟ್

WhatsApp ಹೇಳಿದ್ದೇನು? :
ವಾಟ್ಸಾಪ್ ವಕ್ತಾರರು, 'ನಾವು ಈಗಾಗಲೇ ಅನೇಕ ಸುರಕ್ಷತಾ  ಟೂಲ್ ಗಳನ್ನು ಒದಗಿಸುತ್ತಿದ್ದೇವೆ. ಜನರು ತಮಗೆ ಬರುವ ಕರೆಗಳನ್ನು ಬ್ಲಾಕ್ ಅಥವಾ ರಿಪೋರ್ಟ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಪ್ಲಾಟ್ ಫಾರಂ ಮೇಲೆ ನಾವು ನಿರಂತರವಾಗಿ ಕಣ್ಣಿಟ್ಟಿದ್ದೇವೆ. ಯಾವುದೇ ರೀತಿಯ ಅನಧಿಕೃತ ಅಥವಾ ಕಾನೂನು ಬಾಹಿರ  ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ಕಡಿವಾಣ ಹಾಕಲಾಗುವುದು. ಇದೀಗ ಹೊಸ ಹಗರಣವೊಂದು ಬಯಲಿಗೆ ಬಂದಿದೆ. ಬಳಕೆದಾರರಿಗೆ ಮಿಸ್ ಕಾಲ್ ಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ಬಳಕೆದಾರರು ಆ ನಂಬರ್ ಗೆ ಮತ್ತೆ ಕರೆ ಮಾಡಿದಾಗ ಸ್ಕ್ಯಾಮ್ ಗೆ ಬಲಿಯಾಗುತ್ತಾರೆ.  ಆದರೆ ನಮ್ಮ ಹೊಸ ನಿರ್ಬಂಧಗಳು ಈ ಹಗರಣವನ್ನು 50% ರಷ್ಟು ಕಡಿಮೆ ಮಾಡುತ್ತದೆ. ಬಳಕೆದಾರರ ಸಮಸ್ಯೆಗಳನ್ನು ಕಡಿಮೆ ಮಾಡಲು ಕಂಪನಿ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ ಎಂದಿದೆ. 

'ಈಗಾಗಲೇ ಫೋನ್‌ಗಳಲ್ಲಿ ಇನ್ಸ್ಟಾಲ್ ಮಾಡಲಾದ ಅಪ್ಲಿಕೇಶನ್‌ಗಳಿಗೆ ಎಷ್ಟು ಆಕ್ಸೆಸ್ಸ್ ನೀಡಬೇಕು ಎಂಬುದನ್ನು ಸರ್ಕಾರ  ನಿರ್ಧರಿಸುತ್ತದೆ ಎಂದು ವಿವಾದದ ಕುರಿತು ಮಾತನಾಡಿರುವ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರ ಡೇಟಾವನ್ನು ರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೂಡಾ ಅವರು ಹೇಳಿದ್ದಾರೆ. 

ಇದನ್ನೂ ಓದಿ : WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ

ಇನ್ನು  ಬಳಕೆದಾರರಿಗೆ ಬರುತ್ತಿರುವ ಈ ಕರೆಗಳಿಂದ ಸುರಕಕ್ಷಿತವಾಗಿರಲು  ಎರಡು ಸಲಹೆಗಳನ್ನು Whatsapp ಸೂಚಿಸಿದೆ. ಅವುಗಳೆಂದರೆ  ಆ ಸಂಖ್ಯೆಗಳನ್ನು ಬ್ಲಾಕ್ ಮಾಡುವುದು ಅಥವಾ ರಿಪೋರ್ಟ್ ಮಾಡುವುದು. 

ವಾಟ್ಸಾಪ್ ಸಂಖ್ಯೆಯನ್ನು ಬ್ಲಾಕ್ ಮಾಡುವುದು ಹೇಗೆ ? :
1. WhatsApp ನಲ್ಲಿ ಸಂಖ್ಯೆಯನ್ನು ಬ್ಲಾಕ್ ಮಾಡಬೇಕಾದರೆ  ಬಳಕೆದಾರರು ಮೊದಲು ಕಾಂಟಾಕ್ಟ್ ಮೂಲಕ ಚಾಟ್ ಅನ್ನು  ಓಪನ್ ಮಾಡಬೇಕು. 
2. ಇದರ ನಂತರ,  ಕಾಲ್ ಆಪ್ಷನ್ ಪಕ್ಕದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
3.  More ಮೇಲೆ ಟ್ಯಾಪ್ ಮಾಡಿ ಮತ್ತು ಸಂಖ್ಯೆಯನ್ನು ಬ್ಲಾಕ್ ಮಾಡಿ. 

ಇಷ್ಟಾದ ಮೇಲೆ ಬ್ಲಾಕ್ ಮಾಡಲಾದ ಸಂಖ್ಯೆಗಳ ಮೂಲಕ ನಿಮಗೆ ಕರೆ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ನೀವು ಆನ್‌ಲೈನ್ ನಲ್ಲಿದ್ದಿರೆ? ಸ್ಟೇಟಸ್ ಅಪ್ಡೇಟ್,  ಪ್ರೊಫೈಲ್ ಫೋಟೋದಲ್ಲಿನ ಯಾವುದೇ ಬದಲಾವಣೆಗಳು ನ ಬ್ಲಾಕ್ ಮಾಡಿದ ಕಾಂಟಾಕ್ಟ್ ಗಳಿಗೆ ಕಾಣಿಸುವುದಿಲ್ಲ.  ಒಟ್ಟಾರೆ ಹೇಳಬೇಕೆಂದರೆ ಒಮ್ಮೆ ಬ್ಲಾಕ್ ಮಾಡಿದ ಮೇಲೆ ನಿಮ್ಮ WhatsApp ಚಟುವಟಿಕೆ ಮೇಲೆ ಅವರು ಕಣ್ಣಿಡುವುದು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಎರಡು ತಿಂಗಳವರೆಗೆ ನಡೆಯುತ್ತದೆ ಈ ಫೋನ್! ಈ ವಾಟರ್ ಪ್ರೂಫ್ ಫೋನ್ ಬೆಲೆ ಕೂಡಾ ಕಡಿಮೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News