ಚಂದ್ರನ ಮೇಲ್ಮೈಯಲ್ಲಿ ಈ ರೀತಿ ಇಳಿಯಿತು ಚಂದ್ರಯಾನ 3 ರೋವರ್ ಪ್ರಗ್ಯಾನ್! ಇಸ್ರೋ ಹಂಚಿಕೊಂಡ ವಿಡಿಯೋ ಇಲ್ಲಿದೆ
Pragyaan Rover Video:ಇತಿಹಾಸ ಸೃಷ್ಟಿಸಿದ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿದ್ದು, ನಿರಂತರವಾಗಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಸ್ರೋ ಅದಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದು, ಇಂದು ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
Pragyaan Rover Video : ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡುವ ವಿಡಿಯೋ ಇದೀಗ ಹೊರಬಿದ್ದಿದೆ. ಇಸ್ರೋ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ, ಲ್ಯಾಂಡರ್‌ನಿಂದ ಇಳಿದ ನಂತರ ಪ್ರಗ್ಯಾನ್ ರೋವರ್ ಮುಂದೆ ಸಾಗುತ್ತಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ, ಚಂದ್ರಯಾನ -3 ರ ಲ್ಯಾಂಡಿಂಗ್ ನಂತರ, ರೋವರ್ ಪ್ರಗ್ಯಾನ್ ಲ್ಯಾಂಡರ್ ವಿಕ್ರಮ್ ನಿಂದ ಹೊರ ಬಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವುದನ್ನು ಕಾಣಬಹುದು. ರೋವರ್ ಪ್ರಗ್ಯಾನ್‌ನಲ್ಲಿ ತ್ರಿವರ್ಣ ಧ್ವಜ ಕೂಡಾ ಗೋಚರಿಸುತ್ತದೆ. ಇತಿಹಾಸ ಸೃಷ್ಟಿಸಿದ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿದ್ದು, ನಿರಂತರವಾಗಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಸ್ರೋ ಅದಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದು, ಇಂದು ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಚಂದ್ರನ ಮೇಲೆ ರೋವರ್ ಚಲನೆ :
ಇದಕ್ಕೂ ಮುನ್ನ ಇಸ್ರೋ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲಿನ ಲ್ಯಾಂಡರ್ ಸ್ಪಷ್ಟವಾಗಿ ಗೋಚರಿಸುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರವನ್ನು ತೆಗೆದದ್ದು ಭಾರತದ ಚಂದ್ರಯಾನ 2. ಭಾರತದ ಹೆಮ್ಮೆಯ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಿತ್ರದಲ್ಲಿ ಗೋಚರಿಸುತ್ತದೆ. ಇಂದು ಬೆಳಿಗ್ಗೆ ಇಸ್ರೋ ಈ ಚಿತ್ರವನ್ನು ಪೋಸ್ಟ್ ಮಾಡಿದೆ. ಚಂದ್ರಯಾನ 2 ಚಂದ್ರಯಾನ 3 ರ ಲ್ಯಾಂಡರ್‌ನ ಫೋಟೋಶೂಟ್ ಮಾಡಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ 2 ಆರ್ಬಿಟರ್‌ನ ಹೈ ರೆಸಲ್ಯೂಶನ್ ಕ್ಯಾಮೆರಾವು ಚಂದ್ರಯಾನ 3 ರ ಲ್ಯಾಂಡರ್ ಅನ್ನು ಗುರುತಿಸಿದೆ. ಚಂದ್ರಯಾನ 2 ರ ಆರ್ಬಿಟರ್‌ನಲ್ಲಿ ಸ್ಥಾಪಿಸಲಾದ ಕ್ಯಾಮೆರಾ ಪ್ರಸ್ತುತ ಚಂದ್ರನ ಮೇಲೆ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾವಾಗಿದೆ.
ಇದನ್ನೂ ಓದಿ : ತನ್ನ ಈ ಜನಪ್ರಿಯ ಯೋಜನೆ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ, ಇನ್ಮುಂದೆ ಇದೇ ನೋಡಿ ಅಗ್ಗದ ಯೋಜನೆ!
ಫೋಟೋ ಕ್ಲಿಕ್ಕಿಸುತ್ತಲೇ ಇದೆ ಚಂದ್ರಯಾನ-2 :
2019 ರಲ್ಲಿ ಚಂದ್ರನೆಡೆಗೆ ಕಳುಹಿಸಲಾದ ಚಂದ್ರಯಾನ 2 ಸಾಫ್ಟ್ ಲ್ಯಾಂಡಿಂಗ್ ಮಾಡಲು ವಿಫಲವಾಗಿರಬಹುದು. ಆದರೆ ಅದರ ಆರ್ಬಿಟರ್ ಇನ್ನೂ ಚಂದ್ರನನ್ನು ಸುತ್ತುತ್ತಿದ್ದು, ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿದೆ. ಈ ಆರ್ಬಿಟರ್ ಚಂದ್ರಯಾನ-3 ಅನ್ನು ಗುರುತಿಸಿದ್ದು, ಅದರ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.
ಚಂದ್ರನ ಮೇಲ್ಮೈಯಲ್ಲಿ ಇಳಿದ ನಂತರ, ಲ್ಯಾಂಡರ್ ಮತ್ತು ರೋವರ್ ತಮ್ಮ ಕಾರ್ಯಾಚರಣೆಯನ್ನು ನಿರ್ವಹಿಸಲು ಸೌರ ಶಕ್ತಿಯನ್ನು ಬಳಸುತ್ತಿವೆ. ಈಗ ಮತ್ತು ಸೆಪ್ಟೆಂಬರ್ 5 ರ ನಡುವೆ, ಸೂರ್ಯನು ದಕ್ಷಿಣ ಧ್ರುವದ ಮೇಲೆ ಬಂದಿದ್ದಾನೆ. ಅದರ ಸಹಾಯದಿಂದ ಚಂದ್ರಯಾನದ ರೋವರ್ ಅನ್ನು ಚಾರ್ಜ್ ಮಾಡಲಾಗುತ್ತಿದೆ. ಈ ಮೂಲಕ ರೋವರ್ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ನಿರಂತರವಾಗಿ ಫೋಟೋ ಮತ್ತು ಡೇಟಾ ಕಳುಹಿಸುತ್ತಿದೆ.
ಇದನ್ನೂ ಓದಿ : ಈ ಎಲ್ಲಾ Appಗಳನ್ನು Play Storeನಿಂದ ಡಿಲೀಟ್ ಮಾಡಿದ ಗೂಗಲ್
https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k