ಇನ್ಮುಂದೆ ನಿಮ್ಮ ಫೋನ್ ಮೂಲಕವೇ ನೀವು ಐಟಿಆರ್ ದಾಖಲಿಸಬಹುದು, ಹೇಗೆ ಇಲ್ಲಿ ತಿಳಿದುಕೊಳ್ಳಿ!
ITR On PhonePe: ಇದಕ್ಕಾಗಿ ತೆರಿಗೆದಾರರು ಆ್ಯಪ್‌ಗೆ ಲಾಗಿನ್ ಆಗಿ `ಆದಾಯ ತೆರಿಗೆ` ವಿಭಾಗವನ್ನು ಆಯ್ಕೆ ಮಾಡುವ ಮೂಲಕ ತೆರಿಗೆ ಪಾವತಿಸಬಹುದು ಎಂದು ಫೋನ್ ಪೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಅವರು ತೆರಿಗೆ ಪ್ರಕಾರ, ಮೌಲ್ಯಮಾಪನ ವರ್ಷ, ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು.
ನವದೆಹಲಿ: ಆದಾಯ ತೆರಿಗೆ ಪಾವತಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಏತನ್ಮಧ್ಯೆ, ಇದೀಗ ನೀವು ಮೊಬೈಲ್ ಮೂಲಕ ಕೂಡ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡಬಹುದು. ಈ ಸೌಲಭ್ಯವನ್ನು ಡಿಜಿಟಲ್ ಪಾವತಿ ಮತ್ತು ಹಣಕಾಸು ತಂತ್ರಜ್ಞಾನ ವೇದಿಕೆಯಾದ PhonePe ನೀಡಿದೆ. ಇದೀಗ ಗ್ರಾಹಕರು PhonePe ಅಪ್ಲಿಕೇಶನ್ ಮೂಲಕ ಆದಾಯ ತೆರಿಗೆಯನ್ನು ಪಾವತಿಸಲು ಸಾಧ್ಯವಾಗಲಿದೆ (Business News In Kannada). ವೈಯಕ್ತಿಕ ತೆರಿಗೆದಾರರು ಮತ್ತು ಉದ್ಯಮಿಗಳು ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸ್ವಯಂ ಮೌಲ್ಯಮಾಪನದ ನಂತರ ತೆರಿಗೆ ಮತ್ತು ಮುಂಗಡ ತೆರಿಗೆಯನ್ನು ಪಾವತಿಸಬಹುದು ಎಂದು ಫೋನ್‌ಪೇ ಸೋಮವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಪ್ಲಿಕೇಶನ್‌ನಲ್ಲಿ ಇದಕ್ಕಾಗಿ ವೈಶಿಷ್ಟ್ಯವನ್ನು ಸೇರಿಸಲಾಗಿದೆ.
ಈ ಸೌಲಭ್ಯಗಳು ಸಿಗಲಿವೆ
ಮುಂಗಡ ತೆರಿಗೆ ಪಾವತಿಗಾಗಿ ತೆರಿಗೆದಾರರು ಆದಾಯ ತೆರಿಗೆ ಪೋರ್ಟಲ್‌ಗೆ ಸಂಪರ್ಕಿಸುವ ಅಗತ್ಯವಿಲ್ಲ. ಈ ಮೊತ್ತವನ್ನು ಎರಡು ಕೆಲಸದ ದಿನಗಳಲ್ಲಿ ತೆರಿಗೆ ಪೋರ್ಟಲ್‌ನಲ್ಲಿ ಅಪ್ಡೇಟ್ ಮಾಡಲಾಗುದು. ತೆರಿಗೆದಾರರು ಆ್ಯಪ್‌ಗೆ ಲಾಗಿನ್ ಆಗಿ 'ಆದಾಯ ತೆರಿಗೆ' ಭಾಗವನ್ನು ಆಯ್ಕೆ ಮಾಡುವ ಮೂಲಕ ತೆರಿಗೆ ಪಾವತಿಸಬಹುದು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಅವರು ತೆರಿಗೆ ಪ್ರಕಾರ, ಮೌಲ್ಯಮಾಪನ ವರ್ಷ, ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು. ತೆರಿಗೆ ಪಾವತಿಯ ದಿನದೊಳಗೆ, ತೆರಿಗೆದಾರರು ವಿಶಿಷ್ಟ ವಹಿವಾಟು ಸಂಖ್ಯೆಯನ್ನು ಪಡೆಯುತ್ತಾರೆ ಅಂದರೆ ಅದು ಯುಟಿಆರ್.
ಇದನ್ನೂ ಓದಿ-ಐದು ನೂರು ಮುಖಬೆಲೆಯ ನೋಟು ನಿಷ್ಕ್ರೀಯಗೊಳ್ಳಲಿದೆಯೇ? ಮಹತ್ವದ ಹೇಳಿಕೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!
ಎರಡು ಕೆಲಸದ ದಿನಗಳಲ್ಲಿ ಪಾವತಿ ಚಲನ್ ಬರುತ್ತದೆ. ಈ ಕುರಿತು ಮಾತನಾಡಿರುವ ಫೋನ್‌ಪೇ ಬಿಲ್ ಪಾವತಿ ಮತ್ತು ರೀಚಾರ್ಜ್ ಬ್ಯುಸಿನೆಸ್ ಮುಖ್ಯಸ್ಥ ನಿಹಾರಿಕಾ ಸೆಗಲ್ "ತೆರಿಗೆ ಪಾವತಿ ಯಾವಾಗಲೂ ಸಂಕೀರ್ಣ ಪ್ರಕ್ರಿಯೆಯಾಗಿದೆ. PhonePe ಇದೀಗ ತನ್ನ ಗ್ರಾಹಕರಿಗೆ ತಮ್ಮ ತೆರಿಗೆ ಬಾಧ್ಯತೆಗಳನ್ನು ಪೂರೈಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತಿದೆ. ಈ ವೈಶಿಷ್ಟ್ಯಕ್ಕಾಗಿ PhonePe ಡಿಜಿಟಲ್ B2B ಪಾವತಿ ಸೇವಾ ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿದೆ.
ಇದನ್ನೂ ಓದಿ-ಕೇವಲ 55 ಸಾವಿರ ರೂ.ಗಳಿಗೆ ಮನೆಗೆ ಕೊಂಡೊಯ್ಯಿರಿ ಈ ಎಲೆಕ್ಟ್ರಿಕ್ ಸ್ಕೂಟರ್!
ಹಣಕಾಸು ಸಚಿವರು ಹೇಳಿದ್ದೇನು?
ಮತ್ತೊಂದೆಡೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇ. 6.18 ರಷ್ಟು ಏರಿಕೆಯಾಗಿ 7.40 ಕೋಟಿಗೆ ತಲುಪಿದೆ ಮತ್ತು ಈ ಪೈಕಿ ಸುಮಾರು 5.16 ಕೋಟಿ ಜನರು ಯಾವುದೇ ತೆರಿಗೆ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ನೇರ ತೆರಿಗೆ ಸಂಗ್ರಹವು ಶೇ 20.33 ರಷ್ಟು ಏರಿಕೆಯಾಗಿ 19.68 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.