Jio 5G service in India in 2021 second half: ಮುಂದಿನ ವರ್ಷ ಅಂದರೆ 2021 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಜಿಯೋ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ಮಂಗಳವಾರ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2020 ರಲ್ಲಿ ಈ ವಿಷಯವನ್ನು ಪ್ರಕಟಿಸಿದರು. 


COMMERCIAL BREAK
SCROLL TO CONTINUE READING

5 ಜಿ ಸೇವೆಯನ್ನು ಪ್ರಾರಂಭಿಸುವುದರ ಜೊತೆಗೆ, ಜಿಯೋ (Jio) ಗೂಗಲ್‌ನೊಂದಿಗೆ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಸಹ ತಯಾರಿಸುತ್ತಿದೆ, ಇದು ಮುಂದಿನ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ.


5G) ಕ್ರಾಂತಿಯನ್ನು ತರಲಿದೆ ಎಂದು ಹೇಳಿದರು. ಇದರ ಸಂಪೂರ್ಣ ನೆಟ್‌ವರ್ಕ್ ಸ್ಥಳೀಯವಾಗಿರುತ್ತದೆ. ಇದಲ್ಲದೆ ಯಂತ್ರಾಂಶ ಮತ್ತು ತಂತ್ರಜ್ಞಾನವೂ ಸ್ಥಳೀಯವಾಗಿರುತ್ತದೆ. ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ ಎಂದು ಹೇಳಿದರು. 


ಹೇಗೆ ಕಾರ್ಯನಿರ್ವಹಿಸಲಿದೆ 5G ಸೇವೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಜಿಯೋ 5 ಜಿ (Jio 5G) ಕ್ರಾಂತಿಯನ್ನು ಮುನ್ನಡೆಸಲಿದೆ. ಆದಾಗ್ಯೂ ಇದಕ್ಕಾಗಿ ನೀತಿ ಬದಲಾವಣೆ ಮತ್ತು ಪ್ರಕ್ರಿಯೆಯನ್ನು ಚುರುಕುಗೊಳಿಸುವ ಅವಶ್ಯಕತೆಯಿದೆ ಎಂದು ಅವರು ಒತ್ತಿ ಹೇಳಿದರು. ಅದನ್ನು ಸುಲಭ ಮತ್ತು ಅಗ್ಗದ ನೀತಿ ಪ್ರಕಾರ ಮಾಡಲಾಗುವುದಿಲ್ಲ, ಎಲ್ಲರಿಗೂ ಅದರ ಪ್ರವೇಶ ಸಾಧ್ಯವಿಲ್ಲ ಎಂದವರು ತಿಳಿಸಿದರು.


5 ಜಿ ಮೊಬೈಲ್ ಫೋನ್ ಸೇವೆ ಪ್ರಾರಂಭಿಸಿದ ಚೀನಾ