ನವದೆಹಲಿ:  Jio Recharge Plan -  ರಿಲಯನ್ಸ್ ಮಾಲಿಕತ್ವದ ಜಿಯೋ ಕಂಪನಿ ಯಾವಾಗಲು ತನ್ನ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿದೆ. ಜಿಯೋ ಬಳಿ ಪ್ರೀಪೇಡ್ ಜೊತೆಗೆ ಪೋಸ್ಟ್ ಪೇಡ್ ಪ್ಲಾನ್ ಗಳೂ ಕೂಡ ಇವೆ. ಇಂದು ನಾವು ನಿಮಗೆ ಜಿಯೋ ಕಂಪನಿಯ ಅತ್ಯಂತ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಕುರಿತು ಹೇಳಲಿದ್ದೇವೆ. ಈ ಪ್ಲಾನ್ ವಿಶೇಷತೆ ಎಂದರೆ ಇದರಲ್ಲಿ ನಿಮಗೆ ಅಮೆಜಾನ್ ಪ್ರೈಮ್ ಹಾಗೂ ನೆಟ್ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿ ಲಭಿಸುತ್ತದೆ. ಈ ಪ್ಲಾನ್ ಕುರಿತು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಜಿಯೋ ಕಂಪನಿಯ ರೂ.399 ರ ಪೋಸ್ಟ್ ಪೇಡ್ ಪ್ಲಾನ್ (Jio 399 Postpaid Plan)
ಜಿಯೋ ಕಂಪನಿಯ (Reliance Jio) ರೂ.399 ರ ಪೋಸ್ಟ್ ಪೇಡ್ ಪ್ಲಾನ್ ನಲ್ಲಿ ಒಂದು ತಿಂಗಳ ಅವಧಿಗಾಗಿ 75 ಜಿಬಿ ಡೇಟಾ ನೀಡಲಾಗುತ್ತದೆ. ಇದರಲ್ಲಿ ಪ್ರತಿನಿತ್ಯ ಯಾವುದೇ ಲಿಮಿಟ್ ಇಲ್ಲದೆ ನೀವು ಡೇಟಾ ಬಳಕೆ ಮಾಡಬಹುದು. ಒಂದು ವೇಳೆ ಡೇಟಾ ಉಳಿದರೂ ಕೂಡ ಜಿಯೋ ಈ ಪ್ಲಾನ್ ನಲ್ಲಿ 200GB ಡೇಟಾ ರೋಲ್ ಓವರ್ ಸೌಕರ್ಯ ಒದಗಿಸುತ್ತದೆ. ಡೇಟಾ ಮುಗಿದ ಬಳಿಕ ಕಂಪನಿ ಪ್ರತಿ ಜಿಬಿ ಡೇಟಾಗೆ ರೂ.10 ಶುಲ್ಕ ವಿಧಿಸುತ್ತದೆ.


ಇದನ್ನೂ ಓದಿ-LaunchHarley-Davidson Bike : ಹೀರೊ ಮೊಟೊಕಾರ್ಪ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ 'ರೆಟ್ರೊ ಶೈಲಿಯ ಹಾರ್ಲೆ-ಡೇವಿಡ್ಸನ್ ಬೈಕ್'


ಅನಿಯಮಿತ ಕಾಲಿಂಗ್ ಜೊತೆಗೆ Netflix-Amazon Prime ಉಚಿತ ಚಂದಾದಾರಿಕೆ  (Jio Unlimited Data Plan)
ಈ ಯೋಜನೆಯ ಪ್ರಯೋಜನಗಳ ಕುರಿತು ಹೇಳುವುದಾದರೆ,  ಈ ಯೋಜನೆಯಲ್ಲಿ, ಅನಿಯಮಿತ ಕರೆ ಜೊತೆಗೆ, ಪ್ರತಿದಿನ 100 SMS ನೀಡಲಾಗುತ್ತದೆ. ನೀವು OTT ಕಂಟೆಂಟ್ ಬಯಸುತ್ತಿದ್ದರೆ, ಈ ಯೋಜನೆ ನಿಮಗೆ ಉತ್ತಮವಾಗಿದೆ. ಈ ಯೋಜನೆಯೊಂದಿಗೆ, ನೀವು Netflix, Amazon Prime ಮತ್ತು Disney + Hotstar ಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇದಲ್ಲದೇ, ಜಿಯೋ ಆಪ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುವುದು.


ಇದನ್ನೂ ಓದಿ-Airtel ಬಳಕೆದಾರರಿಗೆ ಸಿಹಿ ಸುದ್ದಿ : ಹೊಸ ಕ್ಯಾಶ್‌ಬ್ಯಾಕ್ ಪ್ಲಾನ್ ಜೊತೆ ಉಚಿತ Disney+Hotstar ಚಂದಾದಾರಿಕೆ


ಜಿಯೋ (Jio) ಕಂಪನಿಯ ರೂ.399 ರ ಪ್ರೀ ಪೇಡ್ ಪ್ಲಾನ್ (Jio 399 Prepaid Plan)
ಜಿಯೋ ಕಂಪನಿಯ ಬಳಿ ರೂ.399 ಬೆಲೆಯ ಪ್ರಿಪೇಡ್ ಪ್ಲಾನ್ ಕೂಡ ಇದೆ. ಇದರ ವ್ಯಾಲಿಡಿಟಿ 56 ದಿನಗಳದ್ದಾಗಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕಾಲಿಂಗ್ ಹಾಗೂ ನಿತ್ಯ 100 ಉಚಿತ SMS ಸೌಕರ್ಯ ಕೂಡ ಸಿಗುತ್ತದೆ. ಇದಲ್ಲದೆ ಇದರಲ್ಲಿ ಜಿಯೋ ಆಪ್ ಗಳ ಸಬ್ಸ್ಕ್ರಿಪ್ಶನ್ ಕೂಡ ನೀಡಲಾಗುತ್ತದೆ.


ಇದನ್ನೂ ಓದಿ-Google Free Streaming Channels: TV ಲೋಕದಲ್ಲಿ ಧೂಳೆಬ್ಬಿಸಲಿದೆಯೇ Google? ವಿವರಗಳಿಗಾಗಿ ಸುದ್ದಿ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.