ಕೈಗೆಟುಕುವ ಬೆಲೆಯಲ್ಲಿ 84 ದಿನಗಳ ಪ್ಲಾನ್ ಪರಿಚಯಿಸಿದ ಜಿಯೋ, ಡಿಸ್ನಿ+ ಹಾಟ್ಸ್ಟಾರ್ ಕೂಡ ಉಚಿತ!
ಜಿಯೋ ತನ್ನ ಗ್ರಾಹಕರಿಗಾಗಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರಿಗೆ, ಅನಿಯಮಿತ ಕರೆ, ಡೇಟಾ ಜೊತೆಗೆ ಹಲವು ಓಟಿಟಿ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯೂ ಲಭ್ಯವಾಗಲಿದೆ.
Jio Cheapest Plans: ರಿಲಯನ್ಸ್ ಜಿಯೋ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಸತತ ಮೂರು ತಿಂಗಳವರೆಗೆ ಡಿಸ್ನಿ + ಹಾಟ್ಸ್ಟಾರ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋದಂತಹ ಓಟಿಟಿ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸೇರಿದಂತೆ ಸಾಕಷ್ಟು ಪ್ರಯೋಜನಗಳನ್ನು ಕೂಡ ಒದಗಿಸಲಾಗಿದೆ.
ರಿಲಯನ್ಸ್ ಜಿಯೋ ಮೂರು ತಿಂಗಳ ಯೋಜನೆ:
ಜಿಯೋ ಪರಿಚಯಿಸಿರುವ ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬೆಲೆ ದೈನಂದಿನ 12 ರೂ.ಗಿಂತಲೂ ಕಡಿಮೆ ಇದ್ದು 949ರೂ.ಗಳ ಪ್ರಿಪೇಯ್ಡ್ ಪ್ಲಾನ್ ಇದಾಗಿದೆ. ಈ ರಿಚಾರ್ಜ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಾಗಲಿದೆ.
ಇದನ್ನೂ ಓದಿ- BSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆ
ಜಿಯೋ 949 ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನ:
ರಿಲಯನ್ಸ್ ಜಿಯೋ 949 ರೂ. ಪ್ರೀಪೇಯ್ಡ್ ಪ್ಲಾನ್ ನಲ್ಲಿ 84 ದಿನಗಳವರೆಗೆ ಅನಿಯಮಿತ ಕರೆ, ನಿತ್ಯ 100 ಎಸ್ಎಮ್ಎಸ್, ದೈನಂದಿನ 2 ಜಿಬಿ ಹೈ ಸ್ಪೀಡ್ ಡೇಟಾ ಒದಗಿಸುತ್ತದೆ.
ಇದನ್ನೂ ಓದಿ- ಏರ್ಟೆಲ್ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನ
ಓಟಿಟಿ ಪ್ಲಾಟ್ಫಾರ್ಮ್ ಗಳಿಗೂ ಉಚಿತ ಪ್ರವೇಶ:
ರಿಲಯನ್ಸ್ ಜಿಯೋ ಪರಿಚಯಿಸಿರುವ ಈ ಯೋಜನೇಯಲ್ಲಿ ಡಿಸ್ನಿ + ಹಾಟ್ಸ್ಟಾರ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋದಂತಹ ಹಲವು ಓಟಿಟಿ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.