ಬೆಂಗಳೂರು : ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ದೇಶದ ಉನ್ನತ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳನ್ನು ದುಬಾರಿಗೊಳಿಸಿವೆ.ಇದರಿಂದಾಗಿ ಅನೇಕ ಬಳಕೆದಾರರು BSNL ಗೆ ಪೋರ್ಟ್ ಮಾಡುತ್ತಿದ್ದಾರೆ.  BSNL ತನ್ನ 4G ಸೇವೆಯನ್ನು ಆದಷ್ಟು ಬೇಗ ದೇಶಾದ್ಯಂತ ಹೊರತರಲು ಪ್ರಯತ್ನಿಸುತ್ತಿದೆ. 2025ರ ಮಧ್ಯದ ವೇಳೆಗೆ 1 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು BSNL ಹೊಂದಿದೆ. ಆದರೆ ಜಿಯೋ ಈಗಲೂ ದೇಶದ ಅಗ್ರ ಟೆಲಿಕಾಂ ಕಂಪನಿಯಾಗಿದೆ.ಜಿಯೋ ಈಗಲೂ 47 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.ಇದೀಗ ಜಿಯೋ ಮತ್ತೊಂದು ಉತ್ತಮ ಯೋಜನೆಯನ್ನು ಹೊರ ತಂದಿದೆ.ಇದರಲ್ಲಿ 9 ರೂಪಾಯಿ ಖರ್ಚು ಮಾಡಿದರೆ 2.5GB  ಡೇಟಾ ಮತ್ತು ಅನ್ಲಿಮಿಟೆಡ್ ಕರೆಯ ಸೌಲಭ್ಯ ಸಿಗುವುದು. 


COMMERCIAL BREAK
SCROLL TO CONTINUE READING

ಜಿಯೋ 3,599 ರೂಪಾಯಿ ಪ್ರಿಪೇಯ್ಡ್ ಪ್ಲಾನ್ :
ಜಿಯೋ  3,599 ರೂಪಾಯಿ ವಾರ್ಷಿಕ ಯೋಜನೆಯನ್ನು ಹೊಂದಿದೆ.ಇದು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.ಇದಲ್ಲದೆ,ಅನಿಯಮಿತ ಕರೆ ಮತ್ತು ಪ್ರತಿದಿನ  100 SMS ಲಭ್ಯವಿದೆ.ಅಲ್ಲದೆ,ಪ್ರತಿದಿನ 2.5GB ಡೇಟಾವನ್ನು ನೀಡಲಾಗುತ್ತದೆ. 


ಇದನ್ನೂ ಓದಿ : ಗ್ರಾಹಕರಿಗಾಗಿ ಕೇವಲ 26 ರೂ. ರಿಚಾರ್ಜ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್..!


ಇನ್ನು ಈ ಯೋಜನೆಯ ಇತರ ಲಾಭವನ್ನು ನೋಡುವುದಾದರೆ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆ ಲಭ್ಯವಿದೆ.ಜಿಯೋ ಸಿನಿಮಾ ಚಂದಾದಾರಿಕೆ ಈ ಯೋಜನೆಯಲ್ಲಿ ಲಭ್ಯವಿಲ್ಲ. ಇದಕ್ಕಾಗಿ ನೀವು ಪ್ರತ್ಯೇಕವಾಗಿ ರೀಚಾರ್ಜ್ ಮಾಡಬೇಕು. 


ದಿನಕ್ಕೆ 9 ರೂ.ಗೆ 2.5GB ಡೇಟಾ :
ಈ ಯೋಜನೆಯನ್ನು ತಿಂಗಳಿಗೆ ಲೆಕ್ಕ ಹಾಕಿ ನೋಡಿದರೆ ತಗಲುವ ಮಾಸಿಕ ಖರ್ಚು 276 ರೂ. ಅಂದರೆ ದಿನಕ್ಕೆ ಸುಮಾರು 9 ರೂಪಾಯಿ ಖರ್ಚು ಮಾಡಿದರೆ 2.5GB ಡೇಟಾ ಸಿಕ್ಕಿದ ಹಾಗೆ ಆಗುತ್ತದೆ. ಅಲ್ಲದೆ, ಇತರ ಪ್ರಯೋಜನಗಳು ಕೂಡಾ ಲಭ್ಯವಿದೆ. 


ಇದನ್ನೂ ಓದಿ : ಮನೆಯಲ್ಲಿ ಎಲೆಕ್ಟ್ರಿಕ್ ಗೀಸರ್‌ ಬಳಸುತ್ತಿದ್ದೀರಾ? ಹಾಗಾದ್ರೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.. ಏನದು ಅಂತಾ ಈಗಲೇ ತಿಳಿಯಿರಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ