ದೀಪಾವಳಿ ಗಿಫ್ಟ್ ಘೋಷಿಸಿದ ಜಿಯೋ! ಸಿಗಲಿದೆ 1 ವರ್ಷದವರೆಗೆ ಉಚಿತ 5G ಇಂಟರ್ನೆಟ್!

Jio Diwali Dhamaka Offer:ಈ ಆಫರ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯವಿರಲಿದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರು ಇದರ ಲಾಭವನ್ನು ಪಡೆಯಬಹುದು. 

Written by - Ranjitha R K | Last Updated : Sep 18, 2024, 11:49 AM IST
  • ರಿಲಯನ್ಸ್ ಜಿಯೋ ದೀಪಾವಳಿಗೆ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ.
  • 1 ವರ್ಷ ಉಚಿತ ಜಿಯೋ ಏರ್‌ಫೈಬರ್ ಸಂಪರ್ಕ
  • ಪ್ರಮೋಶನ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯ
ದೀಪಾವಳಿ ಗಿಫ್ಟ್ ಘೋಷಿಸಿದ ಜಿಯೋ! ಸಿಗಲಿದೆ 1 ವರ್ಷದವರೆಗೆ ಉಚಿತ 5G ಇಂಟರ್ನೆಟ್! title=

Jio Diwali Dhamaka Offer : ರಿಲಯನ್ಸ್ ಜಿಯೋ ದೀಪಾವಳಿಗೆ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ 1 ವರ್ಷ ಉಚಿತ ಜಿಯೋ ಏರ್‌ಫೈಬರ್ ಸಂಪರ್ಕವನ್ನು ಪಡೆಯುವ ಅವಕಾಶವನ್ನು ನೀಡುತ್ತದೆ.ಈ  ಪ್ರಮೋಶನ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯವಿರಲಿದೆ.  ಹೊಸ ಮತ್ತು ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರು ಈ ಆಫರ್ ನ ಲಾಭ ಪಡೆಯಬಹುದು. 

ಹೊಸ ಗ್ರಾಹಕರಿಗೆ ಷರತ್ತುಗಳು :
ಯಾವುದೇ ರಿಲಯನ್ಸ್ ಡಿಜಿಟಲ್ ಅಥವಾ MyJio ಸ್ಟೋರ್‌ನಿಂದ 20,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಖರೀದಿಸಬೇಕು.ಈ ಮಿತಿಯು ಸ್ವಲ್ಪ ಹೆಚ್ಚು ಎನ್ನುವಂತೆ ತೋರುತ್ತದೆ. ಆದರೆ ನೀವು ಈಗಾಗಲೇ ದೊಡ್ಡ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸಲು ಯೋಜಿಸುತ್ತಿದ್ದರೆ ಇ ಡೀಲ್ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : ಈ ಐಫೋನ್‌ಗಳಲ್ಲಿ iOS 18 ಅಪ್‌ಡೇಟ್ ಲಭ್ಯ: ಇಲ್ಲಿದೆ ಡೌನ್‌ಲೋಡ್ ಮಾಡುವ ಸುಲಭ ವಿಧಾನ

ಹಳೆಯ ಗ್ರಾಹಕರಿಗೆ ಈ ಆಫರ್ :
2,222 ಮೌಲ್ಯದ ವಿಶೇಷ ದೀಪಾವಳಿ ಪ್ಲಾನ್ ರೀಚಾರ್ಜ್ ಮಾಡಿ. ಈ ಯೋಜನೆಯೊಂದಿಗೆ 1 ವರ್ಷ ಉಚಿತ Jio AirFiber ಸೇವೆಯನ್ನು ಪಡೆಯುತ್ತೀರಿ.

ಅರ್ಹ ಗ್ರಾಹಕರಿಗೆ 12 ಕೂಪನ್‌ಗಳು ಸಿಗುತ್ತವೆ. ಪ್ರತಿಯೊಂದೂ ಅವರ ಸಕ್ರಿಯ Jio AirFiber ಯೋಜನೆಯ ಮೌಲ್ಯಕ್ಕೆ ಸಮನಾಗಿರುತ್ತದೆ.ಈ ಕೂಪನ್‌ಗಳನ್ನು ರಿಲಯನ್ಸ್ ಡಿಜಿಟಲ್, ಮೈಜಿಯೋ, ಜಿಯೋಪಾಯಿಂಟ್ ಅಥವಾ ಜಿಯೋಮಾರ್ಟ್ ಡಿಜಿಟಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು.ಪ್ರತಿ ಕೂಪನ್ ಅನ್ನು ಬಳಸಲು,ಅದನ್ನು ಸ್ವೀಕರಿಸಿದ 30 ದಿನಗಳಲ್ಲಿ  15,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ ಖರೀದಿಗಳನ್ನು ಮಾಡಬೇಕು.

ಆಫರ್ ಎಷ್ಟು ಸಮಯದವರೆಗೆ ಇರುತ್ತದೆ ?
ಈ ಕೊಡುಗೆಯು ಸೆಪ್ಟೆಂಬರ್ 18 ರಿಂದ ನವೆಂಬರ್ 3 ರವರೆಗೆ ಇರುತ್ತದೆ. ಲಭ್ಯವಿರುವ ಕೂಪನ್‌ಗಳು ನವೆಂಬರ್‌ನಿಂದ ಅಕ್ಟೋಬರ್ 2025 ರವರೆಗೆ ಮಾನ್ಯವಾಗಿರುತ್ತವೆ.

ಇದನ್ನೂ ಓದಿ : ಇದೇ ಗೀಸರ್ ಮನೆಗೆ ಬೆಸ್ಟ್ ಆಯ್ಕೆ ! ಸ್ಪೋಟವಾಗುವ ಭಯ ಇರುವುದೇ ಇಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News