ಜಿಯೋ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಗಳು: ಟೆಲಿಕಾಂ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಮತ್ತೆ ತನ್ನ ಗ್ರಾಹಕರಿಗಾಗಿ ಒಂದು ರೀಚಾರ್ಜ್, ವರ್ಷಪೂರ್ತಿ ಮೋಜಿನ ಯೋಜನೆಯನ್ನು ಪರಿಚಯಿಸಿದೆ. ಹೌದು, ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯನ್ನೂ ಪರಿಚಯಿಸಿದೆ.  ಗ್ರಾಹಕರು ದೀರ್ಘಕಾಲದವರೆಗೆ ಕರೆ ಮತ್ತು ಇಂಟರ್ನೆಟ್ ಅನ್ನು ಆನಂದಿಸಲು ಕೈಗೆಟುಕುವ ದರದಲ್ಲಿ ರಿಲಯನ್ಸ್ ಜಿಯೋ ಈ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬೆಲೆ ಎಷ್ಟು? ಇದರಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ವಾರ್ಷಿಕ ಯೋಜನೆಯ ವಿಶೇಷತೆ:
ರಿಲಯನ್ಸ್  ಜಿಯೋದ ಈ ಪ್ಲಾನ್‌ನ ವಿಶೇಷತೆ ಏನೆಂದರೆ, ಒಮ್ಮೆ ನೀವು ಅದನ್ನು ನಿಮ್ಮ ನಂಬರ್‌ನಲ್ಲಿ ಆಕ್ಟಿವೇಟ್ ಮಾಡಿದ ನಂತರ ವರ್ಷದವರೆಗೆ ಮತ್ತೆ ರೀಚಾರ್ಜ್ ಮಾಡುವ ರಗಳೆ ಇರುವುದಿಲ್ಲ.


ಇದನ್ನೂ ಓದಿ- WhatsApp New Features: ಈಗ ನೀವು ಡೇಟ್ ಪ್ರಕಾರವೂ ವಾಟ್ಸಾಪ್ ಚಾಟ್‌ಗಳನ್ನು ಹುಡುಕಬಹುದು!


ಜಿಯೋ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆ ಹೆಸರೇ ಸೂಚಿಸುವಂತೆ 365 ದಿನಗಳವರೆಗೆ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನ ಸೀಮಿತ ಪ್ರಮಾಣದ ಇಂಟರ್ನೆಟ್ ಸೇವೆಯನ್ನೂ ಸಹ ಆನಂದಿಸಬಹುದಾಗಿದೆ.


ಇದನ್ನೂ ಓದಿ- ಮೊಬೈಲ್ ರೀಚಾರ್ಜ್ ಮಾಡಿದರೆ 10 ಲಕ್ಷ ಬಹುಮಾನ.! ಜಿಯೋ ಗ್ರಾಹಕರಿಗೆ ಬಂಪರ್ ಆಫರ್
 
ಜಿಯೋ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆ ಬೆಲೆ ಮತ್ತು ಪ್ರಯೋಜನಗಳು:
ಜಿಯೋದ ಈ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆ ಬೆಲೆ 2,879 ರೂ.ಗಳು


ಜಿಯೋ 2,879 ರೂ. ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು:
* ಇದು ಒಂದು ವರ್ಷದ ಮಾನ್ಯತೆಯೊಂದಿಗೆ ಲಭ್ಯವಿರುವ ಅಗ್ಗದ ಯೋಜನೆಯಾಗಿದೆ
* ಇದರಲ್ಲಿ ಬಳಕೆದಾರರಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತ್ತದೆ
* ಇದರಲ್ಲಿ ಅನಿಯಮಿತ ಕರೆಯೊಂದಿಗೆ, 730 ಜಿಬಿ ಡೇಟಾವನ್ನು  ಒದಗಿಸಲಾಗುವುದು.
* ಪ್ರತಿದಿನ 100 ಉಚಿತ ಎಸ್‌ಎಂಎಸ್ ನೀಡಲಾಗುತ್ತದೆ. 
* ಗ್ರಾಹಕರು ಇದರಲ್ಲಿ 365 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ ಮತ್ತು ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.