Jio: ರಿಲಯನ್ಸ್ ಜಿಯೋ ಸದ್ದು ಮಾಡದೆ ಮಾರುಕಟ್ಟೆಯಲ್ಲಿ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ಇತರ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್‌ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಇದು ಕಂಪನಿಯ ದೀರ್ಘಾವಧಿಯ ಯೋಜನೆಯಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ ರಿಲಯನ್ಸ್ ಜಿಯೋ ರೂ. 2999ರ ಪ್ರಿಪೇಯ್ಡ್ ಯೋಜನೆಯನ್ನು (Jio Rs 2999 Prepaid Plan) ಪ್ರಾರಂಭಿಸಿದ್ದು, ಇದು ಅನೇಕ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ. ಈ ಯೋಜನೆಯಲ್ಲಿ, ದೈನಂದಿನ ಡೇಟಾ, (Jio Best Plan) ಅನಿಯಮಿತ ಕರೆ ಮತ್ತು ಸಂದೇಶಗಳನ್ನು ಹೊರತುಪಡಿಸಿ , ನೀವು  ಕ್ಯಾಶ್‌ಬ್ಯಾಕ್‌ನ  (Jio Cashback Offer) ಪ್ರಯೋಜನವನ್ನು ಸಹ ಪಡೆಯುತ್ತೀರಿ. ಹೌದು, ರಿಲಯನ್ಸ್ ಜಿಯೋದ ಈ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು 20% ವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 


ಇದನ್ನೂ ಓದಿ - Government Alert! ತಕ್ಷಣ ನಿಮ್ಮ Google Chrome ಬ್ರೌಸರ್ ಅಪ್ಡೇಟ್ ಮಾಡಿ, ಇಲ್ದಿದ್ರೆ ಭಾರಿ ಹಾನಿ


ಜಿಯೋದ ರೂ. 2,999 ಯೋಜನೆ:
Jio ಇತರ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧಿಸಲು ಮಾರುಕಟ್ಟೆಯಲ್ಲಿ ಬ್ಯಾಂಗ್ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಬೆಲೆ ರೂ 2,999 ಮತ್ತು ಇದು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 2.5GB ಡೇಟಾವನ್ನು ಬಳಸಿಕೊಳ್ಳಬಹುದು. ಅಂದರೆ, 365 ದಿನಗಳ ಮಾನ್ಯತೆಯ ಅವಧಿಯಲ್ಲಿ, ನೀವು ಒಟ್ಟು 912.5GB ಡೇಟಾವನ್ನು ಪಡೆಯುತ್ತೀರಿ. ಇದಲ್ಲದೇ, ಅನಿಯಮಿತ ಕರೆ (Unlimited Call) ಸೌಲಭ್ಯವನ್ನು ಸಹ ಯೋಜನೆಯಲ್ಲಿ ಒದಗಿಸಲಾಗುತ್ತಿದ್ದು, ಇದನ್ನು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಪಡೆಯಬಹುದಾಗಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ನೀಡಲಾಗುತ್ತಿದೆ. 


ಇದನ್ನೂ ಓದಿ - Ration Card: ಸರ್ಕಾರಿ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ!


20% ಕ್ಯಾಶ್‌ಬ್ಯಾಕ್: 
ರಿಲಯನ್ಸ್ ಜಿಯೋದ ರೂ. 2,999 ಪ್ಲಾನ್‌ನೊಂದಿಗೆ ಬಳಕೆದಾರರು 20% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ '20% JioMart ಮಹಾ ಕ್ಯಾಶ್‌ಬ್ಯಾಕ್' ಕೊಡುಗೆಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಇದರರ್ಥ ಬಳಕೆದಾರರು JioMart ವ್ಯಾಲೆಟ್ ಅನ್ನು ಬಳಸಿಕೊಂಡು ಈ ಯೋಜನೆಯಲ್ಲಿ 20% ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ ಅನ್ನು ರೀಚಾರ್ಜ್ ಮಾಡಲು ಮತ್ತು JioMart ಅಥವಾ ರಿಲಯನ್ಸ್ ಸ್ಟೋರ್‌ನಿಂದ ಶಾಪಿಂಗ್ ಮಾಡಲು ಬಳಸಬಹುದು. ಈ ಯೋಜನೆಯೊಂದಿಗೆ, ಬಳಕೆದಾರರು JioTV, JioCinema, JioSecurity ಮತ್ತು JioCloud ಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.