WhatsApp Features: ವಾಟ್ಸ್ ಆಪ್ ಮೂಲಕವೂ ನೀವು ನಿಮ್ಮ UPI PIN ಬದಲಾಯಿಸಬಹುದು, ಇಲ್ಲಿದೆ ವಿಧಾನ

WhatsApp UPI PIN:ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅನುಮೋದನೆಯ ನಂತರ 2020 ರಲ್ಲಿ ಎಲ್ಲಾ ಬಳಕೆದಾರರಿಗಾಗಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ.

Written by - Nitin Tabib | Last Updated : Jan 8, 2022, 05:51 PM IST
  • ವಿಶ್ವದ ಖ್ಯಾತ ಚಾಟಿಂಗ್ ಆಪ್ WhatsApp ನಿರಂತರವಾಗಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದೆ.
  • ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ.
  • ಇದರಿಂದ ಅದು ಬಳಕೆದಾರರ ದೈನಂದಿನ ವಿಷಯಗಳನ್ನು ಮತ್ತಷ್ಟು ಸುಲಭಗೊಳಿಸುತ್ತಿದೆ.
WhatsApp Features: ವಾಟ್ಸ್ ಆಪ್ ಮೂಲಕವೂ ನೀವು ನಿಮ್ಮ UPI PIN ಬದಲಾಯಿಸಬಹುದು, ಇಲ್ಲಿದೆ ವಿಧಾನ title=
Whatsapp Latest Features (File Photo)

Whatsapp Latest Features: ವಿಶ್ವದ ಖ್ಯಾತ ಚಾಟಿಂಗ್ ಆಪ್ WhatsApp ನಿರಂತರವಾಗಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದೆ ಮತ್ತು ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಇದರಿಂದ ಅದು ಬಳಕೆದಾರರ ದೈನಂದಿನ ವಿಷಯಗಳನ್ನು ಸುಲಭಗೊಳಿಸುತ್ತಿದೆ. ಸಂದೇಶ ಕಳುಹಿಸುವುದರಿಂದ ಹಿಡಿದು ಹಣ ವರ್ಗಾವಣೆವರೆಗೆ ಎಲ್ಲಾ ಕೆಲಸಗಳನ್ನು ಈಗ ವಾಟ್ಸಾಪ್‌ನಲ್ಲಿ ಸುಲಭವಾಗಿ ಮಾಡಬಹುದು. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಸಿಪಿಐ) ಅನುಮೋದನೆಯ ನಂತರ 2020 ರಲ್ಲಿ ಎಲ್ಲಾ ಬಳಕೆದಾರರಿಗಾಗಿ ಈ ಸೇವೆಯನ್ನು  ಪ್ರಾರಂಭಿಸಲಾಗಿದೆ. ಆದರೆ ಅಪ್ಲಿಕೇಶನ್ 227 ಕ್ಕೂ ಹೆಚ್ಚು ಬ್ಯಾಂಕ್‌ಗಳೊಂದಿಗೆ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ನೀಡುತ್ತದೆ. WhatsApp ಮೂಲಕ ನಿಮ್ಮ UPI ಪಿನ್ ಅನ್ನು ನೀವು ಹೇಗೆ ಬದಲಾಯಿಸಬಹುದು ಅಥವಾ ಮರುಹೊಂದಿಸಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.

ವಾಟ್ಸಾಪ್‌ನಲ್ಲಿ ಯುಪಿಐ ಪಿನ್ ಅನ್ನು ಹೇಗೆ ಬದಲಾಯಿಸುವುದು? (WhatsApp Tricks)
>> ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ WhatsApp ಅಪ್ಲಿಕೇಶನ್ ತೆರೆಯಿರಿ.
>> ನಂತರ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಪಾವತಿಗಳ ಮೇಲೆ ಟ್ಯಾಪ್ ಮಾಡಿ.
>> ಪಾವತಿಗಳ ವಿಭಾಗದ ಅಡಿಯಲ್ಲಿ, ನೀವು UPI ಪಿನ್ ಸಂಖ್ಯೆಯನ್ನು ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ.
>> ನಂತರ ಚೇಂಜ್ UPI ಪಿನ್ ಮೇಲೆ ಟ್ಯಾಪ್ ಮಾಡಿ.
>> ಮುಂದೆ, ಅಸ್ತಿತ್ವದಲ್ಲಿರುವ UPI ಪಿನ್ ಅನ್ನು ನಮೂದಿಸಿ ಮತ್ತು ನಂತರ ಹೊಸ UPI ಪಿನ್ ಅನ್ನು ನಮೂದಿಸಿ.
>> ಹೊಸ UPI ಪಿನ್ ಸಂಖ್ಯೆಯನ್ನು ದೃಢೀಕರಿಸಿ ಮತ್ತು ಈಗ ನಿಮ್ಮ ಹೊಸ ಪಿನ್ ಸಿದ್ಧವಾಗಿದೆ.

ಇದನ್ನೂ ಓದಿ-Ulefone Durability Test: ಬಿಲ್ಡಿಂಗ್ ನಿಂದ ಕೆಳಕ್ಕೆ ಎಸೆದು ನಂತರ 24 ಗಂಟೆ ಫ್ರೀಜರ್ ನಲ್ಲಿಟ್ರು, ಎಲ್ಲಾ ಟೆಸ್ಟ್ ನಲ್ಲೂ ಸೈ ಎನಿಸಿಕೊಂಡ ಸ್ಮಾರ್ಟ್ ಫೋನ್

WhatsApp ನಲ್ಲಿ UPI ಪಿನ್ ಅನ್ನು ಮರುಹೊಂದಿಸುವುದು ಹೇಗೆ? (WhatsApp Tips)
ನೀವು WhatsApp ನಲ್ಲಿ UPI ಪಿನ್ ಅನ್ನು ಮರುಹೊಂದಿಸಲು ಬಯಸಿದರೆ, ಇದಕ್ಕಾಗಿ ನೀವು ಕೆಳಗೆ ಸೂಚಿಸಲಾದ ಪ್ರಕ್ರಿಯೆಯನ್ನು ಅನುಸರಿಸಬೇಕು…
>> More Options ಮೇಲೆ  ಟ್ಯಾಪ್ ಮಾಡಿ ಮತ್ತು ನಂತರ ಪಾವತಿಗಳನ್ನು ಆಯ್ಕೆಮಾಡಿ.
>> ನಿಮ್ಮ UPI ಪಿನ್ ಸಂಖ್ಯೆಯನ್ನು ನೀವು ಮರೆತಿರುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.

ಇದನ್ನೂ ಓದಿ-Airtel Latest News: ಕೇವಲ ರೂ.99 ಗಳಲ್ಲಿ ನಿಮ್ಮ ಮನೆ ಕಣ್ಗಾವಲು ಮಾಡಲಿದೆ Airtel, ಹೇಗೆ ತಿಳಿಯಲು ಸುದ್ದಿ ಓದಿ

>> ಅದರ ನಂತರ ಯುಪಿಐ ಪಿನ್ ಮರೆತುಹೋಗಿದೆ ಎಂಬುದನ್ನು ಟ್ಯಾಪ್ ಮಾಡಿ.
>> ಮುಂದೆ, Continue ಆಯ್ಕೆಮಾಡಿ ಮತ್ತು ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಕೊನೆಯ ದಿನಾಂಕದ ಕೊನೆಯ 6-ಅಂಕಿಗಳನ್ನು ನಮೂದಿಸಿ (ಕೆಲವು ಬ್ಯಾಂಕ್‌ಗಳು ನಿಮ್ಮ CVV ಸಂಖ್ಯೆಯನ್ನು ಸಹ ಕೇಳಬಹುದು).
>> ಇದರ ನಂತರ ನೀವು ನಿಮ್ಮ UPI ಪಿನ್ ಅನ್ನು ಮರುಹೊಂದಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ-Reliance Jio: ಜಿಯೋದ ಈ ಅಗ್ಗದ ಯೋಜನೆಯಲ್ಲಿ ನಿತ್ಯ 3GB ಡೇಟಾ, ಡಿಸ್ನಿ + ಹಾಟ್‌ಸ್ಟಾರ್ ಜೊತೆಗೆ ಸಿಗುತ್ತೆ ಇನ್ನೂ ಹಲವು ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News