ನವದೆಹಲಿ : ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಉತ್ತಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್ ಗಳನ್ನು ನೀಡಲು ಪ್ರಯತ್ನಿಸುತ್ತಿವೆ. ಅದು ಕೂಡಾ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಪ್ರಯತ್ನಿಸುತ್ತವೆ.   ಜಿಯೋದ (Reliance Jio) ಅಂತಹ ನಾಲ್ಕು ಅದ್ಬುತ ಪ್ಲಾನ್ ಗಳನ್ನು ಪರ್ಚಯಿಸಿದೆ. ಇದರಲ್ಲಿ ಪ್ರತಿದಿನ 3GB ಡೇಟಾ ಸಿಗಲಿದೆ. 


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋದ  349 ರೂ. ಪ್ರಿಪೇಯ್ಡ್ ಯೋಜನೆ :
ಜಿಯೋದ (Jio) 3GB ಪ್ರತಿ ದಿನ ಪ್ರಿಪೇಯ್ಡ್ ಯೋಜನೆಗಳ (Jio Prepaid plan) ಪಟ್ಟಿಯಲ್ಲಿ ಅಗ್ಗವಾಗಿದೆ. ಇದರಲ್ಲಿ, ಬಳಕೆದಾರರು ಪ್ರತಿದಿನ 3GB ಡೇಟಾ, ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಸೇವೆ ಮತ್ತು ಕಂಪನಿಯಿಂದ ಜಿಯೋ ಮ್ಯೂಸಿಕ್ (Jio music) ಮತ್ತು ಜಿಯೋ ಸಿನಿಮಾದಂತಹ (Jio cinema) ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಕೇವಲ 349 ರೂ.ಗೆ ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆಯು 28 ದಿನಗಳವರೆಗೆ ಇರಲಿದೆ. 


ಇದನ್ನೂ ಓದಿ : Truecaller ನಲ್ಲಿ ಹೊಸ ಫೀಚರ್..ಏನಿದು ಘೋಸ್ಟ್ ಕಾಲ್.? ಬಳಕೆದಾರರು ತಪ್ಪದೇ ಓದಿ...


ಜಿಯೋದ  499 ರೂ. ಯೋಜನೆ :
ಜಿಯೋದ  499  ರೂ. ಯೋಜನೆಯಲ್ಲಿ, ದಿನಕ್ಕೆ 3GB ಡೇಟಾ,  100 SMS ಮತ್ತು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯ ಸಿಗಲಿದೆ. ಈ ಯೋಜನೆಯಲ್ಲಿ 6GB ಬೋನಸ್ ಡೇಟಾ ಸಹ ಲಭ್ಯವಿರುತ್ತದೆ.  OTT ಚಂದಾದಾರಿಕೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ Jio ನ ಎಲ್ಲಾ ಅಪ್ಲಿಕೇಶನ್‌ಗಳ ಜೊತೆಗೆ Disney + Hotstar ನ ಒಂದು ವರ್ಷದ ಚಂದಾದಾರಿಕೆ ಕೂಡಾ ಸಿಗಲಿದೆ. ಈ ಯೋಜನೆಯು 28 ದಿನಗಳವರೆಗೆ ಮಾನ್ಯವಾಗಿರುತ್ತದೆ.


 999 ಕ್ಕೆ 252GB ಇಂಟರ್ನೆಟ್ :
ಜಿಯೋದ ಈ ಯೋಜನೆಯಲ್ಲಿ (Jio recharge plan),  999 ರೂ. ಬದಲಿಗೆ 84 ದಿನಗಳವರೆಗೆ, 3GB ಡೇಟಾ ಅಂದರೆ 252GB ಇಂಟರ್ನೆಟ್, ದಿನಕ್ಕೆ 100 SMS, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು Jio ಸಿನಿಮಾ ಮತ್ತು Jio TV ನಂತಹ ಎಲ್ಲಾ Jio ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತೀರಿ. ದೈನಂದಿನ ಇಂಟರ್ನೆಟ್ ಕೊನೆಗೊಂಡರೆ, ಡೇಟಾ ವೇಗವು 64Kbps ಗೆ ಕಡಿಮೆಯಾಗುತ್ತದೆ.  


ಇದನ್ನೂ ಓದಿ : ಕೇವಲ 65 ರೂ. ಗೆ ಖರೀದಿಸಿ Oppo Smartphone, ಏನಿದು ಡೀಲ್ ತಿಳಿಯಿರಿ


3,499 ರೂ.  ಪ್ರಿಪೇಯ್ಡ್ ಯೋಜನೆ :
ಜಿಯೋದ ಈ ಪ್ರಿಪೇಯ್ಡ್ ಯೋಜನೆಯು ಅತ್ಯಂತ ದುಬಾರಿ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಇದರ ಬೆಲೆ 3,499 ರೂ. 365 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯಲ್ಲಿ,  ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮಾಡಬಹುದು.  ಪ್ರತಿದಿನ 3GB ಇಂಟರ್ನೆಟ್ ಮತ್ತು ದಿನಕ್ಕೆ 100 SMS ಸಿಗಲಿದೆ. OTT ಪ್ರಯೋಜನಗಳ ಕುರಿತು ಹೇಳುವುದಾದರೆ,  ಈ ಯೋಜನೆಯಲ್ಲಿ ಎಲ್ಲಾ Jio ಅಪ್ಲಿಕೇಶನ್‌ಗಳ ಚಂದಾದಾರಿಕೆ ಸಿಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.