ಕೇವಲ 65 ರೂ. ಗೆ ಖರೀದಿಸಿ Oppo Smartphone, ಏನಿದು ಡೀಲ್ ತಿಳಿಯಿರಿ

Oppo A33 ಒಂದು ಅದ್ಬುತ ಸ್ಮಾರ್ಟ್‌ಫೋನ್  ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.12,990 ಆಗಿದೆ. ಆದರೆ ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ ನಲ್ಲಿ ಈ ಫೋನ್ ಅನ್ನು 10,490 ರೂ.ಗೆ ಖರೀದಿಸಬಹುದು.

Written by - Ranjitha R K | Last Updated : Nov 27, 2021, 02:14 PM IST
  • ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್ ಶುರುವಾಗಿದೆ
  • Oppo A33 ಅನ್ನು 65 ರೂಪಾಯಿಗೆ ಖರೀದಿಸಬಹುದು
  • ಈ ಸೇಲ್ ನವೆಂಬರ್ 30 ರವರೆಗೆ ಮುಂದುವರಿಯುತ್ತದೆ
ಕೇವಲ 65 ರೂ. ಗೆ ಖರೀದಿಸಿ  Oppo Smartphone, ಏನಿದು ಡೀಲ್ ತಿಳಿಯಿರಿ  title=
ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್ ಶುರುವಾಗಿದೆ (file photo)

ನವದೆಹಲಿ : ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ನಲ್ಲಿ  ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್ (Flipkart Black Friday Sale) ಅನ್ನು ಪ್ರಾರಂಭಿಸಿದೆ. ಇದರಲ್ಲಿ  ಪ್ರತಿ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳ (Smartphone) ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಸಿಗುವ ಡೀಲ್ ನಲ್ಲಿ Oppo ನ ಸ್ಟ್ರಾಂಗ್ ಬ್ಯಾಟರಿ ಫೋನ್ ಅನ್ನು 65 ರೂಪಾಯಿಗೆ ಖರೀದಿಸಬಹುದು. 

Oppo A33 ಅನ್ನು 65 ರೂಪಾಯಿಗೆ ಖರೀದಿಸಿ :
Oppo A33 ಒಂದು ಅದ್ಬುತ ಸ್ಮಾರ್ಟ್‌ಫೋನ್ (Smartphone) ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.12,990 ಆಗಿದೆ. ಆದರೆ ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ ನಲ್ಲಿ (Flipkart Black Friday Sale) ಈ ಫೋನ್ ಅನ್ನು 10,490 ರೂ.ಗೆ ಖರೀದಿಸಬಹುದು. ಇನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ (Axis credit card) ಮೂಲಕ ಪಾವತಿಸುವುದಾದರೆ, 5% ಕ್ಯಾಶ್‌ಬ್ಯಾಕ್ ಅಂದರೆ  525 ರೂ. ಹಿಂಪಡೆಯಬಹುದು. ಈ ಮೂಲಕ ಈ ಫೋನ್ ಬೆಲೆ 9,965 ರೂ.ಗೆ ಇಳಿಯಲಿದೆ.

ಇದನ್ನೂ ಓದಿ : WhatsApp Update: ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸಲಿದೆ WhatsApp, ವಿವರ ತಿಳಿಯಲು ಸುದ್ದಿ ಓದಿ

ವಿನಿಮಯ ಕೊಡುಗೆಯೊಂದಿಗೆ ಹೆಚ್ಚಿನ ರಿಯಾಯಿತಿ:
 ಈ ಒಪ್ಪಂದದಲ್ಲಿ, ವಿನಿಮಯ ಕೊಡುಗೆಯ (Exchange offer) ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ನೀವು ಈ Oppo ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದರೆ, 9,900 ರೂ. ವರೆಗೆ ಪ್ರಯೋಜನವನ್ನು ಪಡೆಯಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದ ಮೇಲೆ, Oppo A 33ಯನ್ನು ಕೇವಲ  65 ರೂ.ಗೆ ಖರೀದಿಸಬಹುದು. 

ಈ Oppo ಸ್ಮಾರ್ಟ್‌ಫೋನ್‌ನ ವಿಶೇಷತೆಗಳು :
Oppo ನ ಈ ಸ್ಮಾರ್ಟ್‌ಫೋನ್ 4G ಸೇವೆಗಳನ್ನು ಸಪೋರ್ಟ್ ಮಾಡುತ್ತದೆ. 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಇದು ಬರುತ್ತದೆ. ಇದರಲ್ಲಿ, 6.5-ಇಂಚಿನ ಪಂಚ್ ಹೋಲ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್,  ಡ್ಯುಯಲ್ ಸಿಮ್ ಸೌಲಭ್ಯ ಮತ್ತು ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಪಡೆಯಬಹುದು. ಅಲ್ಲದೆ, Qualcomm Snapdragon 460-ಚಾಲಿತ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, 18W ಫಾಸ್ಟ್  ಚಾರ್ಜಿಂಗ್ ಮತ್ತು ಸೂಪರ್ ಪವರ್ ಸೇವಿಂಗ್ ಮೋಡ್‌ನೊಂದಿಗೆ ಬರುತ್ತದೆ. ಇದು AI ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. 

ಇದನ್ನೂ ಓದಿ : Amazon: 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ Xiaomi 5G ಫೋನ್ ಖರೀದಿಸಲು ಸುವರ್ಣಾವಕಾಶ

ನೀವು ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ನವೆಂಬರ್ 30 ರವರೆಗೆ ಈ ಕೊಡುಗೆಗಳ ಲಾಭವನ್ನು ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News