ನವದೆಹಲಿ: Johns Hopkins Study - ಜಾನ್ ಹಾಪ್ಕಿನ್ಸ್ ಅವರ ಅಧ್ಯಯನವು ವಿದ್ಯಾವಂತ ಮಹಿಳೆಯರಲ್ಲಿ ಮದುವೆಗೆ ಮುಂಚೆ ಮಗುವನ್ನು ಹೊಂದುವ ಬಯಕೆ ಹೆಚ್ಚಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಮದುವೆಯ ನಂತರ ಮಗುವಿನ ಬಗ್ಗೆ ಯೋಚಿಸುತ್ತಾನೆ. ಆದರೆ ಕಳೆದ ಕೆಲವು ದಿನಗಳಲ್ಲಿ ಈ ಚಿಂತನೆ ಬದಲಾಗಿದೆ. ವಿದ್ಯಾವಂತ ಮಹಿಳೆಯರು ಇದೀಗ ಮದುವೆಗೆ ಮುಂಚೆ ಮಗುವನ್ನು ಬಯಸುತ್ತಿದ್ದು, ಇಂತಹ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.


COMMERCIAL BREAK
SCROLL TO CONTINUE READING

ಮದುವೆಗೂ ಮುನ್ನ ಮೊದಲ ಮಗು ಬಯಸುತ್ತಿದ್ದಾರೆ ಮಹಿಳೆಯರು
ವಿದ್ಯಾವಂತ ಮಹಿಳೆಯರಲ್ಲಿ ಐತಿಹಾಸಿಕ ಬದಲಾವಣೆ ಕಾಣಲು ಸಿಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದು 90 ರ ದಶಕದಲ್ಲಿ ಅಷ್ಟೊಂದು ಜಾಸ್ತಿಯಾಗಿರಲಿಲ್ಲ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ (Johns Hopkins University) ಸಮಾಜಶಾಸ್ತ್ರಜ್ಞ ಆಂಡ್ರ್ಯೂ ಶೆರ್ಲಿನ್, ಪದವಿ ಪಡೆದ ಮಹಿಳೆಯರು ತಮ್ಮ ಎರಡನೇ ಮಗುವಿನ ಜನನದ ಮೊದಲು ಅಥವಾ ತಕ್ಷಣ ಮದುವೆಯಾಗಲು ಬಯಸುತ್ತಾರೆ, ಆದರೆ ಅವರು ಮದುವೆಗೂ ಮುನ್ನ ಮಗುವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 


ಶೇ.18 ರಿಂದ 27ರಷ್ಟು ಮಹಿಳೆಯರು ಅವಿವಾಹಿತರಾಗಿದ್ದಾರೆ
ಆಂಡ್ರ್ಯೂ ಶೆರ್ಲಿನ್ ಹೇಳುವ ಪ್ರಕಾರ ಮದುವೆಯ ನಂತರ ಮಗು ಪಡೆಯುವ ಬಯಕೆ ಮಹಿಳೆಯರಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾವಂತ ಮಹಿಳೆಯರು ಮೊದಲು ಮಗುವಿಗೆ ಜನ್ಮ ನೀಡಿ ನಂತರ ಮದುವೆಯಾಗುತ್ತಿದ್ದಾರೆ (Marriage). ಪ್ರೋಸಿಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮತ್ತು 30 ವಯಸ್ಸಿನ ಆಸುಪಾಸಿನ ಶೇ.18 ರಿಂದ ಶೇ.27 ರಷ್ಟು ಯುವತಿಯರು ತಮ್ಮ ಮೊದಲ ಮಗುವಿನ ಜನನದ ಸಮಯದಲ್ಲಿ ಮದುವೆಯಾಗಿರಲಿಲ್ಲ ಎಂದು ಆಂಡ್ರ್ಯೂ ಶೆರ್ಲಿನ್ ಹೇಳಿದ್ದಾರೆ.


ಆಂಡ್ರ್ಯೂ ಶೆರ್ಲಿನ್ (Andrew Sherlyn) ತನ್ನ ಅಧ್ಯಯನಕ್ಕಾಗಿ ಒಟ್ಟು ಮೂರು ಪ್ರಮುಖ ಸಮೀಕ್ಷೆಗಳಾಗಿರುವ ನ್ಯಾಷನಲ್ ಲಾಂಗಿಟ್ಯೂಡಿನಲ್ ಸರ್ವೇ ಆಫ್ ಯೂಥ್, ನ್ಯಾಷನಲ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಅಡೋಲ್ಸೆಂಟ್ ಹೆಲ್ತ್ ಹಾಗೂ ನ್ಯಾಷನಲ್ ಸರ್ವೇ ಆಫ್ ಫ್ಯಾಮಿಲಿನಲ್ಲಿರುವ ಡೆಮೋಗ್ರಾಫಿ ದತ್ತಾಂಶಗಳ ಬಳಕೆ ಮಾಡಿದ್ದಾರೆ. ಮಹಿಳೆಯರು ವಿಕಾಸಗೊಂಡಿದ್ದಾರೆ ಎಂಬ ಅಂಶ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಅವರಲ್ಲಿ ಮೊದಲ ಮಗು (First Child) ಪಡೆಯುವ ಬಯಕೆ ಕೂಡ ಹೆಚ್ಚಾಗಿರುವುದು ಕಂಡು ಬಂದಿದೆ.


ಹೈಸ್ಕೂಲ್ ವ್ಯಾಸಂಗ ಪೂರೈಸಿದ ಅರ್ಧಕ್ಕೂ ಹೆಚ್ಚು ಮಹಿಳೆಯರು ತಮ್ಮ ಮೊದಲ ಮಗುವಿನ ಜನನದ ವೇಳೆ ವಿವಾಹಿತರಾಗಿರಲಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.


ಇದನ್ನೂ ಓದಿ-ಕ್ವಾರಂಟೈನ್ ಉಲ್ಲಂಘಿಸಿ ಕೊರೊನಾ ಹರಡಿದ್ದ ವ್ಯಕ್ತಿಗೆ 5 ವರ್ಷ ಜೈಲುಶಿಕ್ಷೆ..!


ಮದುವೆಯ ನಿಯಮಗಳು ಬದಲಾಗುತ್ತಿವೆ
ಅಧ್ಯಯನದ ಪ್ರಕಾರ 1996ರಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ 30ರ ಆಸುಪಾಸಿನ ಶೇ.4ರಷ್ಟು ಮಹಿಳೆಯರು ತಮ್ಮ ಮೊದಲ ಮಗುವಿನ ಜನನದ ವೇಳೆ ವಿವಾಹಿತರಾಗಿರಲಿಲ್ಲ. 20 ವರ್ಷಗಳ ಬಳಿಕ ಇಂತಹ ಮಹಿಳೆಯರ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಇಂತಹ ಮಹಿಳೆಯರ ಸಂಖ್ಯೆ ಶೇ.24.5 ರಷ್ಟಿದೆ. 


ಇದನ್ನೂ ಓದಿ-Viral Video: ಇದು ಯಾವುದೋ ಹಾರರ್ ಸಿನಿಮಾದ ದೃಶ್ಯವಲ್ಲ, ನಿಜವಾಗಿಯೂ ಏನಾಗಿದೆ ನೋಡಿ..!


ಇನ್ನೊಂದೆಡೆ ಕಾಲೇಜಿನಿಂದ ಪಾಸೌಟ್ ಆಗಿರದ ಹಾಗೂ ಬ್ಯಾಚಲರ್ ಡಿಗ್ರೀ ಪಡೆದ ಮಹಿಳೆಯರಲ್ಲಿ ಹೋಲಿಕೆ ಕಂಡುಬಂದಿದೆ. ಇಬ್ಬರು ಮಹಿಳೆಯರು ಒಂದೇ ಸಂಗಾತಿಯನ್ನು ಆಯ್ಕೆ ಮಾಡುತ್ತಿದ್ದಾರೆ. ಮದುವೆಗೂ ಮುನ್ನ ಈ ಮಹಿಳೆಯರು ತಮ್ಮ ಲಿವ್ ಇನ್ ಪಾರ್ಟ್ನರ್ ಜೊತೆಗೆ ವಾಸಿಸುತ್ತಿದ್ದರು. ಮಹಿಳೆಯರ ವಿಷಯದಲ್ಲಿ ಇದೊಂದು ದೊಡ್ಡ ಬದಲಾವಣೆಯಾಗಿದೆ. ಕಾಲೇಜು ವ್ಯಾಸಂಗ ಮಾಡಿರುವ ವ್ಯಕ್ತಿಗಳು ಮದುವೆಯ ನಿಯಮಗಳನ್ನು ನಿರಂತರವಾಗಿ ಬದಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Viral video: ಕೇವಲ ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.