Viral video: ಕೇವಲ ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ..!

ಪೂರ್ತಿಯಾಗಿ ಬಟ್ಟೆ ಧರಿಸಲು ಮರೆತವಳು ಮಾಸ್ಕ್ ಧರಿಸುವುದನ್ನು ಮಾತ್ರ ಮರೆತಿಲ್ಲವೆಂದು ಅನೇಕರು ಮಹಿಳೆಯನ್ನು ಹೊಗಳಿದ್ದಾರೆ.

Written by - Puttaraj K Alur | Last Updated : Sep 5, 2021, 02:47 PM IST
  • ಕೇವಲ ಬಿಕಿನಿ ತೊಟ್ಟು ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆ
  • ಫ್ಲೈಟ್ ಕ್ಯಾಚ್ ಮಾಡಲು ಬಟ್ಟೆ ಧರಿಸುವುದನ್ನೇ ಮರೆದು ಬಿಕಿನಿಯಲ್ಲಿ ಬಂದಿದ್ದಾಳೆಂದ ನೆಟಿಜನ್‌ಗಳು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಬಿಕಿನಿ ತೊಟ್ಟ ಮಹಿಳೆಯ ವಿಡಿಯೋ
Viral video: ಕೇವಲ ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ..! title=
ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ (Photo Courtesy: @Zee News)

ಮಿಯಾಮಿ: ಅಮೆರಿಕದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಕೇವಲ ಬಿಕಿನಿ ಧರಿಸಿ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Miami airport)ಕ್ಕೆ ಆಗಮಿಸಿದ್ದಾಳೆ. ಹೌದು, ಕೇವಲ ಬಿಕಿನಿ ಧರಿಸಿದ್ದ ಮಹಿಳೆಯೊಬ್ಬಳು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೂಲಕ ನೆರೆದಿದ್ದ ಜನರು ಹೌಹಾರುವಂತೆ ಮಾಡಿದ್ದಾಳೆ

ಹೀಗೆ ವಿಮಾನ ನಿಲ್ದಾಣಕ್ಕೆ ಬಿಕಿನಿಯಲ್ಲಿ ಬಂದ ಆ ಮಹಿಳೆ  ಫೇಸ್ ಮಾಸ್ಕ್ ಧರಿಸುವುದನ್ನು ಮರೆತಿರಲಿಲ್ಲ. ಕೇವಲ ಬಿಕಿನಿ ಮತ್ತು ಫೇಸ್ ಮಾಸ್ಕ್ ಧರಿಸಿ ಆಕೆ ಮಿಯಾಮಿ ವಿಮಾನ ನಿಲ್ದಾಣದೊಳಗೆ ಕಾಲಿಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾ(CCTV Footage)ದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಸಿಗಲಿದೆ Loan, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಹಸಿರು ಬಣ್ಣದ ಬಿಕಿನಿ ತೊಟ್ಟು ಬಂದ ಮಹಿಳೆ(Woman in Bikni)ಯ ಕೈಯಲ್ಲಿ ಬ್ಯಾಗ್ ಮತ್ತು ಮುಖದಲ್ಲಿ ಮಾಸ್ಕ್ ಇತ್ತು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪರಿಶೀಲಿಸಿ ಆಕೆಯನ್ನು ಒಳಬಿಟ್ಟಿದ್ದಾರೆ. ಈ ವೇಳೆ ಆಕೆ ಅಲ್ಲಲ್ಲಿ ಅಡ್ಡಾಡಿರುವ ದೃಶ್ಯ ನೋಡಗರಿಗೆ ಆಘಾತವನ್ನುಂಟು ಮಾಡಿತ್ತು. ವಿಮಾನ ನಿಲ್ದಾಣದಲ್ಲಿದ್ದವರೆಲ್ಲರ ಕಣ್ಣು ಈ ಬಿಕಿನಿ ತೊಟ್ಟ ಮಹಿಳೆಯ ಮೇಲಿತ್ತು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ(Viral Video)ವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕೇವಲ ಬಿಕಿನಿ ತೊಟ್ಟು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆಯನ್ನು ಕಂಡು ಅನೇಕ ನೆಟಿಜನ್‌ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪೂರ್ತಿಯಾಗಿ ಬಟ್ಟೆ ಧರಿಸಲು ಮರೆತವಳು ಮಾಸ್ಕ್ ಧರಿಸುವುದನ್ನು ಮಾತ್ರ ಮರೆತಿಲ್ಲವೆಂದು ಅನೇಕರು ಮಹಿಳೆಯನ್ನು ಹೊಗಳಿದ್ದಾರೆ.

ಇದನ್ನೂ ಓದಿ: Whatsapp Alert : ಈ ಫೀಚರ್ ನಿಂದ ಕಳುವಾಗಲಿದೆ ಎಲ್ಲಾ ಡಾಟಾ, ಈ ರೀತಿ ಬಳಸಿಕೊಳ್ಳುತ್ತಾರೆ Hacker

ಇನ್ನು ಕೆಲವು ನೆಟಿಜನ್‌ಗಳು ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ. ಮಧ್ಯಾಹ್ನದ ವೇಳೆ ಫುಲ್ ಪಾರ್ಟಿ ಮಾಡಿದ ಮಹಿಳೆ ಎಲ್ಲಿ ಫ್ಲೈಟ್ ಮಿಸ್ ಆಗುತ್ತೋ ಅಂತಾ ಪೂರ್ತಿ ಬಟ್ಟೆ ಧರಿಸದೆ ಕೇವಲ ಬಿಕಿನಿಯಲ್ಲಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿರಬೇಕು ಅಂತಾ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಬಿಕಿನಿ ತೊಟ್ಟರೂ ಆಕೆ ಫೇಸ್ ಮಾಸ್ಕ್ ಧರಿಸಿ ಕೋವಿಡ್-19(Covid-19) ಮಾರ್ಗಸೂಚಿಗಳನ್ನು ಸರಿಯಾರಿ ಪಾಲಿಸಿದ್ದಾಳೆಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಹಿಳೆ ಯಾರು..? ಎಲ್ಲಿಗೆ ಹೊರಟ್ಟಿದ್ದಳು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಬಗ್ಗೆ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಹಿಳೆ ಏಕೆ ಬಿಕಿನಿ ತೊಟ್ಟಿದ್ದರು ಎಂಬುದು ಕೂಡ ತಿಳಿದುಬಂದಿಲ್ಲ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News