ಏರ್ಟೆಲ್ ನ 79 ರೂ. ಪ್ಲಾನ್ ಗೆ ಟಕ್ಕರ್ ನೀಡುತ್ತಿದೆ Jio All In One Plan
ಏರ್ಟೆಲ್ ತನ್ನ ಅಗ್ಗದ 49 ರೂ ಪ್ಲಾನ್ ಅನ್ನು ನಿಲ್ಲಿಸಿದೆ. ಈಗ 79 ರೂಗಳ ಪ್ಲಾನ್ ಏರ್ಟೆಲ್ ನ ಅಗ್ಗದ ಪ್ಲಾನ್ ಆಗಿದೆ. ಇದೀಗ ಏರ್ಟೆಲ್ ನ ಪ್ಲಾನ್ ಗೆ ಜಿಯೋ ಕಂಪನಿಯ 75 ರೂ. ಯೋಜನೆ ಟಕ್ಕರ್ ನೀಡುತ್ತಿದೆ.
ನವದೆಹಲಿ : ಏರ್ಟೆಲ್ ತನ್ನ ಅಗ್ಗದ 49 ರೂ ಪ್ಲಾನ್ (Airtel recharge plan) ಅನ್ನು ನಿಲ್ಲಿಸಿದೆ. ಈಗ 79 ರೂಗಳ ಪ್ಲಾನ್ ಏರ್ಟೆಲ್ ನ ಅಗ್ಗದ ಪ್ಲಾನ್ ಆಗಿದೆ. ಇದೀಗ ಏರ್ಟೆಲ್ ನ ಪ್ಲಾನ್ ಗೆ ಜಿಯೋ ಕಂಪನಿಯ 75 ರೂ. ಯೋಜನೆ ಟಕ್ಕರ್ ನೀಡುತ್ತಿದೆ. ಏರ್‌ಟೆಲ್‌ನ ಈ ಯೋಜನೆಯು ಡೇಟಾ ಮತ್ತು ಕರೆಗಳನ್ನು ಒಳಗೊಂಡಿರುತ್ತದೆ. ಜಿಯೋ ತನ್ನ ಬಳಕೆದಾರರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತಿದೆ. ಆದರೆ ಜಿಯೋನ ಈ ಯೋಜನೆ (Jio recharge plan) ಜಿಯೋಫೋನ್ ಬಳಕೆದಾರರಿಗೆ ಮಾತ್ರ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಏರ್‌ಟೆಲ್ ನ 79 ರೂ ರೀಚಾರ್ಜ್ ಪ್ಲಾನ್ :
ಏರ್ಟೆಲ್ ನ 79 ರೂಗಳ (Airtel recharge plan) ಪ್ರಿಪೇಯ್ಡ್ ಯೋಜನೆಯಲ್ಲಿ, 64 ರೂ.ಗಳ ಟಾಕ್ ಟೈಮ್ ಲಭ್ಯವಿರುತ್ತದೆ. ಈ ಯೋಜನೆಯ ಸಿಂಧುತ್ವವು 28 ದಿನಗಳವರೆಗೆ ಇರಲಿದೆ. ಇದರೊಂದಿಗೆ ಬಳಕೆದಾರರು 200 ಎಂಬಿ ಡೇಟಾವನ್ನು ಪಡೆಯುತ್ತಾರೆ. 49 ರೂ.ಗಳ ಯೋಜನೆಯಲ್ಲಿ, ಬಳಕೆದಾರರಿಗೆ 38 ರೂ.ಗಳ ಟಾಕ್ ಟೈಮ್ (Talk time) ನೀಡಲಾಗುತ್ತಿತ್ತು ಮತ್ತು 100 ಎಂಬಿ ಡೇಟಾ ಕೂಡಾ ಸಿಗುತ್ತಿತ್ತು. ಇದರ ವ್ಯಾಲಿಡಿಟಿ ಕೂಡಾ 28 ದಿನಗಳವರೆಗೆ ಇರುತ್ತಿತ್ತು.
ಇದನ್ನೂ ಓದಿ : ನಿಮ್ಮ ಫೋನಿಗೂ ಈ ಎಸ್ಎಂಎಸ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ಖಾಲಿಯಾದೀತು ಬ್ಯಾಂಕ್ ಅಕೌಂಟ್
ಜಿಯೋ 75 ರೂ . ಪ್ಲಾನ್ :
ಜಿಯೋ (jio)ಕಂಪನಿಯ 75 ರೂ ಯೋಜನೆಯ ಹೆಸರು JIOPHONE ALL-IN-ONE PLAN. ಇದರಲ್ಲಿ ಬಳಕೆದಾರರಿಗೆ 3 ಜಿಬಿ ಡೇಟಾವನ್ನು ಸಿಗುತ್ತದೆ. ಅಂದರೆ ದಿನಕ್ಕೆ 0.1 ಜಿಬಿ ಡೇಟಾವನ್ನು ಗ್ರಾಹಕರು ಪಡೆಯುತ್ತಾರೆ. ಅಲ್ಲದೆ, ಹೆಚ್ಚುವರಿ 200 ಎಂಬಿ ಡೇಟಾ ಲಭ್ಯವಿರುತ್ತದೆ. ಇದರ ಸಿಂಧುತ್ವವು 28 ದಿನಗಳವರೆಗೆ ಇರಲಿದೆ. ಈ ಯೋಜನೆಯಲ್ಲಿ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯ ಇರುತ್ತದೆ. ಅಲ್ಲದೆ, 50 ಎಸ್‌ಎಂಎಸ್ ಸಹ ನೀಡಲಾಗಿದೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ (Jio application) ಚಂದಾದಾರಿಕೆಯನ್ನು ಸಹ ಪಡೆಯಬಹುದು.
ಇದನ್ನೂ ಓದಿ : Oppo Reno 6 4G: 44MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿದೆ Oppo Reno 6 4G ಸ್ಮಾರ್ಟ್‌ಫೋನ್, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.