ನಿಮ್ಮ ಫೋನಿಗೂ ಈ ಎಸ್ಎಂಎಸ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ಖಾಲಿಯಾದೀತು ಬ್ಯಾಂಕ್ ಅಕೌಂಟ್

ಕೆವೈಸಿ ಪರಿಶೀಲನೆ ಎಂದು ಹೇಳಿ ಗ್ರಾಹಕರು ಎಸ್‌ಎಂಎಸ್ ಪಡೆಯುತ್ತಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸದಿದ್ದರೆ, ನಂಬರ್ ಅನ್ನು 24 ಗಂಟೆಗಳಲ್ಲಿ ಬ್ಲೋಕ್ ಮಾಡುವುದಾಗಿ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ.

Written by - Ranjitha R K | Last Updated : Jul 29, 2021, 03:01 PM IST
  • ಕೆವೈಸಿ ಪರಿಶೀಲನೆಗಾಗಿ ಬಳಕೆದಾರರಿಗೆ ಎಸ್‌ಎಂಎಸ್
  • ಮೆಸೇಜ್ ಸ್ವೀಕರಿಸಿದ ತಕ್ಷಣ ಕರೆ ಮಾಡುವಂತೆ ಸೂಚನೆ
  • ಯಾವುದೇ ಕಾರಣಕ್ಕೂ ಈ ನಂಬರ್ ಗೆ ಕರೆ ಮಾಡಬಾರದು
ನಿಮ್ಮ ಫೋನಿಗೂ ಈ ಎಸ್ಎಂಎಸ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ಖಾಲಿಯಾದೀತು ಬ್ಯಾಂಕ್ ಅಕೌಂಟ್  title=
ಕೆವೈಸಿ ಪರಿಶೀಲನೆಗಾಗಿ ಬಳಕೆದಾರರಿಗೆ ಎಸ್‌ಎಂಎಸ್ (file photo)

ನವದೆಹಲಿ : ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಹುತೇಕ ಮಂದಿ, ಆನ್‌ಲೈನ್ ಪೇಮೆಂಟ್ ಗಳತ್ತ (Online payment) ಮುಖ ಮಾಡಿದ್ದಾರೆ.  ವಂಚಕರು ಇದನ್ನೇ ಈಗ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ದಿನೇ ದಿನೇ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ವಂಚನೆಗಳ (Cyber crime) ಬಗ್ಗೆ ಎಚ್ಚರದಿಂದ ಇರುವಂತೆ  ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಸೂಚಿಸುತ್ತಿದೆ. ಏರ್‌ಟೆಲ್ (Airtel) ಸಿಇಒ ಗೋಪಾಲ್ ವಿಟ್ಟಲ್ ಇತ್ತೀಚೆಗೆ ಟೆಲಿಕಾಂ ಗ್ರಾಹಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹ್ಯಾಕರ್‌ಗಳು ಬಳಕೆದಾರರಿಂದ ಒಟಿಪಿಗಳನ್ನುಪಡೆದು ವಂಚನೆಗೊಳಿಸುವ ಬಗ್ಗೆ ಅವರು ಎಚ್ಚರಿಸಿದ್ದಾರೆ.  

ಹೇಗೆ ಕಾರ್ಯನಿರ್ವಹಿಸುತ್ತದೆ ಈ ಮೋಸದ ಜಾಲ ? 
ಕೆವೈಸಿ ಪರಿಶೀಲನೆ (KYC Varification) ಎಂದು ಹೇಳಿ ಗ್ರಾಹಕರು ಎಸ್‌ಎಂಎಸ್ ಪಡೆಯುತ್ತಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸದಿದ್ದರೆ, ನಂಬರ್ ಅನ್ನು 24 ಗಂಟೆಗಳಲ್ಲಿ ಬ್ಲೋಕ್ ಮಾಡುವುದಾಗಿ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ. ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಜಿಯೋ (Jio) ಬಳಕೆದಾರರು ಈ ರೀತಿಯ ಮೆಸೇಜ್ ಗಳನ್ನು ಪಡೆಯುತ್ತಿದ್ದಾರೆ. ಕಂಪನಿಯ ಅಧಿಕಾರಿಗಳ ಸೋಗಿನಲ್ಲಿ ಕೆವೈಸಿ ಪರಿಶೀಲನೆ  ಎಂದು ಹೇಳಿ ಗ್ರಾಹಕರನ್ನು ವಂಚಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಅನೇಕ ಗ್ರಾಹಕರು ತಮ್ಮ ಟ್ವಿಟ್ಟರ್ ನಲ್ಲಿ (twitter)ಈ ಬಗ್ಗೆ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : Oppo Reno 6 4G: 44MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿದೆ Oppo Reno 6 4G ಸ್ಮಾರ್ಟ್‌ಫೋನ್, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಈ ಸಂಖ್ಯೆಯಿಂದ ಬರುತ್ತದೆ ಸಂದೇಶ : 
ಏರ್ಟೆಲ್ ಸಿಮ್ ಕಾರ್ಡ್ ಹೊಂದಿರುವವರಿಗೆ 9114204378 ಈ ನಂಬರ್ ನಿಂದ ಮೆಸೇಜ್ ಬರುತ್ತಿದೆ. ಮತ್ತು ಆ ಮೆಸೇಜ್ ನಲ್ಲಿ, ಸಿಮ್ ಕಾರ್ಡನ್ನು (Sim card) ಅಪ್ಡೇಟ್ ಮಾಡದಿದ್ದಲ್ಲಿ ಸಿಮ್ ಅನ್ನು ಬ್ಲೋಕ್ ಮಾಡುವುದಾಗಿ ಹೇಳಲಾಗುತ್ತದೆ. ಅಲ್ಲದೆ, ಈ ಮೆಸೇಜ್ ಗೆ ತಕ್ಷಣ ಪ್ರತಿಕ್ರಿಯಿಸುವಂತೆಯೂ ಸೂಚಿಸಲಾಗುತ್ತದೆ.  ಮೆಸೇಜ್ ಸ್ವೀಕರಿಸಿದ ತಕ್ಷಣ 8582845285 ನಂಬರ್ ಗೆ ಕರೆ ಮಾಡುವಂತೆ ಹೇಳಲಾಗುತ್ತದೆ. ಈ ಮೆಸೇಜ್ ಅನ್ನು ನಂಬಿ, ಗ್ರಾಹಕರು ಕರೆ ಮಾಡಿದರೆ ಮೋಸಗಾರರ ಜಾಲಕ್ಕೆ ಬೀಳುತ್ತಾರೆ. 

ಈ ವಿಷಯಗಳು ಸದಾ ನೆನಪಿನಲ್ಲಿರಲಿ : 
ಟೆಲಿಕಾಂ ಕಂಪನಿಗಳು (Telecom company) ಒಮ್ಮೆ ನಂಬರ್ ನೀಡಿದ ನಂತರ ಯಾವುದೇ ಕಾರಣಕ್ಕೂ ಕೆವೈಸಿ ಪರಿಶೀಲನೆಯನ್ನು ಕೇಳುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ ಅದನ್ನು ಅಧಿಕೃತ ಚಾನೆಲ್ ಮೂಲಕವೇ ಮಾಡುತ್ತಾರೆ.  ಅಪರಿಚಿತ ನಂಬರ್ ಗಳ ಮೂಲಕ ಮಾಡುವುದಿಲ್ಲ. ಹಾಗಾಗಿ ಗ್ರಾಹಕರು ಎಂದಿಗೂ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬಾರದು, ಯಾವುದೇ ಅಪರಿಚಿತ ನಂಬರ್ ಗೆ ಕರೆ ಮಾಡಬಾರದು. 

ಇದನ್ನೂ ಓದಿ : NOKIA ಲಾಂಚ್ ಮಾಡಿದೆ ಅದ್ಬುತ ಸ್ಮಾರ್ಟ್ ಫೋನ್, ಮೂರು ದಿನಗಳವರೆಗೆ ನಿಲ್ಲಲ್ಲಿದೆ ಬ್ಯಾಟರಿ ಚಾರ್ಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News