Komaki XGT-X1 Electric Scooter: ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಕೋಮಕಿ XGT-X1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷ ಜೂನ್ ನಲ್ಲಿ ಬಿಡುಗಡೆ ಮಾಡಿತ್ತು. ಆದರೆ ಕಂಪನಿಯು ಈ ವರ್ಷ ತನ್ನ ಬೆಲೆಯನ್ನು ಪರಿಷ್ಕರಿಸಿದೆ. ಇದೀಗ ಈ ಸ್ಕೂಟರ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ರೂ 60,000 ಮತ್ತು ಜೆಲ್ ಬ್ಯಾಟರಿಯೊಂದಿಗೆ ರೂ 45,000 ಕ್ಕೆ ಸಿಗುತ್ತಿದೆ (Komaki Scooters).


COMMERCIAL BREAK
SCROLL TO CONTINUE READING

Komaki XGT-X1 Electric Scooter ವೈಶಿಷ್ಟ್ಯಗಳು
Komaki XGT-X1 ಟೆಲಿಸ್ಕೋಪಿಕ್ ಶಾಕರ್ಸ್, ರಿಮೋಟ್ ಲಾಕ್, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್, ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂ ಮೊದಲಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕೋಮಕಿ ತನ್ನ ಲಿಥಿಯಂ-ಐಯಾನ್ ಬ್ಯಾಟರಿಯ ಮೇಲೆ 2+1 (1 ವರ್ಷದ ಸೇವಾ ಖಾತರಿ) ವರ್ಷದ ಖಾತರಿ ಮತ್ತು ಲೆಡ್-ಆಸಿಡ್ ಬ್ಯಾಟರಿಯ ಮೇಲೆ ಒಂದು ವರ್ಷದ ಖಾತರಿ ನೀಡುತ್ತಿದೆ. XGT-X1 ಕಂಪನಿಯು ದೊಡ್ಡ ಟ್ರಂಕ್ ಆಗಿದೆ  ಮತ್ತು ಸ್ಮಾರ್ಟ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ರಿಮೋಟ್ ಡಯಾಗ್ನೋಸ್ಟಿಕ್ಸ್‌ಗಾಗಿ ಸೆನ್ಸರ್ ಅನ್ನು ಹೊಂದಿದೆ ಮತ್ತು ರಿಮೋಟ್ ಲಾಕ್‌ನೊಂದಿಗೆ ಬರುತ್ತದೆ.


ಈ ಸ್ಕೂಟರ್ ಜಬರ್ದಸ್ತ್ ರೇಂಜ್ ಹೊಂದಿದೆ
ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ 100 ಕಿಮೀ ನಿಂದ 120 ಕಿಮೀ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯ ಹೊಂದಿದ್ದು ಇದು ತನ್ನ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸುತ್ತದೆ.


ಇದನ್ನೂ ಓದಿ-Electric Mobility: ಕೇವಲ 25 ಪೈಸೆ ವೆಚ್ಚದಲ್ಲಿ ಚಲಿಸಲಿದೆ ಈ e-Scooter, 160 ಕಿ.ಮೀ ಡ್ರೈವಿಂಗ್ ರೇಂಜ್, ಕೇವಲ ರೂ.499 ಕೊಟ್ಟು ಬುಕ್ ಮಾಡಿ


ಇ-ಸ್ಕೂಟರ್ ಮಾರಾಟ ಹೆಚ್ಚಾಗಲಿದೆ
ಈ ಕುರಿತು ಹೇಳಿಕೆ ನೀಡಿರುವ ಕೋಮಕಿ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕ ಗುಂಜನ್ ಮಲ್ಹೋತ್ರಾ, ಮುಂಬರುವ ದಿನಗಳಲ್ಲಿ ಈ ಇ-ಸ್ಕೂಟರ್ ಹೆಚ್ಚು ಖರೀದಿದಾರರನ್ನು ತನ್ನತ್ತ ಸೆಳೆಯಲಿದೆ ವಿಶೇಷವಾಗಿ ದೇಶದಲ್ಲಿ ಇಂಧನ ಬೆಲೆಗಳು ತನ್ನ ದಾಖಲೆ ಮಟ್ಟದಲ್ಲಿವೆ ಎಂದು ಅವರು ಹೇಳಿದ್ದಾರೆ. 'ಎಂದಿನಂತೆ, ಕೋಮಕಿ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ನಿರೂಪಿಸುವ ಅದ್ಭುತ ವೈಶಿಷ್ಟ್ಯಗಳೊಂದಿಗೆ ವಾಹನಗಳನ್ನು ಪ್ಯಾಕ್ ಮಾಡುವಾಗ ನಾವು ಗಮನ ಹರಿಸಿದ್ದೇವೆ. ಪೆಟ್ರೋಲ್ ಬೆಲೆ ಮತ್ತು ಮಾಲಿನ್ಯದ ಮಟ್ಟವನ್ನು ಪರಿಗಣಿಸಿ, ಕಂಪನಿಯು ಎಲೆಕ್ಟ್ರಿಕ್ ವಾಹನಗಳತ್ತ ವಾಲುವ ಕಾಲ ಬಂದಿದೆ' ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ-Simple One Electric Scooter: ಆಗಸ್ಟ್ 15 ರಂದು 13 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ವಿಶೇಷತೆ ಏನೆಂದು ತಿಳಿಯಿರಿ


ಬೆಲೆಯಲ್ಲಿ ಸರಿಸಾಟಿ ಇಲ್ಲ
ಸಾಮಾನ್ಯವಾಗಿ Activa Scootar ಬೆಲೆ ರೂ.85000 ಇದೆ. Komaki XGT-X1 ಸ್ಕೂಟರ್ ಬೆಲೆ ಎಷ್ಟೊಂದು ಕಮ್ಮಿಯಾಗಿದೆ ಎಂದರೆ. ವಾಹನ ಖರೀದಿದಾರರು ಒಂದು ಆಕ್ಟಿವಾ ಬೆಲೆಯಲ್ಲಿ ಎರಡು Komaki ಸ್ಕೂಟರ್ ಖರೀದಿಸಬಹುದು.


ಇದನ್ನೂ ಓದಿ-Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.