ಬೆಂಗಳೂರು : Whatsapp Feature Update: ವಾಟ್ಸ್‌ಆ್ಯಪ್‌ ಅನ್ನು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ವಾಟ್ಸ್‌ಆ್ಯಪ್‌ನಲ್ಲಿ ಹಲವು ವಂಚನೆ ಪ್ರಕರಣಗಳು ನಡೆದಿರುವ ಪ್ರಕರಣಗಳು ಕೂಡಾ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿವೆ. ಇದು ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗ ವಾಟ್ಸ್‌ಆ್ಯಪ್‌ ಈ ಸಮಸ್ಯೆಗೆ ಮುಕ್ತಿ ನೀಡಿದೆ. ವಾಟ್ಸ್‌ಆ್ಯಪ್‌ ಖಾತೆಗೆ ಸಂಪೂರ್ಣ ಲಾಗಿನ್ ಪ್ರಕ್ರಿಯೆಯನ್ನು ಸುರಕ್ಷಿತಗೊಳಿಸಲು ಡಬಲ್ ವೆರಿಫಿಕೇಶನ್ ಕೋಡ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು  ಲಾಗ್ ಇನ್ ಮಾಡುವಾಗ ಆ್ಯಪ್‌ ಅನ್ನು  ಹೆಚ್ಚು ಸುರಕ್ಷಿತವಾಗಿರಿಸುತ್ತದೆ. ಈ ಹೊಸ ವೈಶಿಷ್ಟ್ಯವು Android ಮತ್ತು iOS ಬಳಕೆದಾರರಿಗೆ ಲಭ್ಯವಿರುತ್ತದೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ವಾಟ್ಸ್‌ಆ್ಯಪ್‌ ನ ಈ ವೈಶಿಷ್ಟ್ಯದ ಸಹಾಯದಿಂದ, ಕಂಪನಿಯು ಒಂದಕ್ಕಿಂತ ಹೆಚ್ಚು ಸಾಧನಗಳಿಗೆ ಲಾಗ್ ಇನ್ ಮಾಡುವ ಮೊದಲು WhatsApp ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ. ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬೇರೆ ಯಾವುದೇ ಸಾಧನದಲ್ಲಿ ನಿಮ್ಮ WhatsAppಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ಹಳೆಯ ಸಾಧನಕ್ಕೆ 6 ಅಂಕಿಯ ಕೋಡ್ ಅನ್ನು ಕಳುಹಿಸಲಾಗುತ್ತದೆ. ನಿಮ್ಮ ಹೊಸ ಸಾಧನದಲ್ಲಿ ಈ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಕೋಡ್ ಹೊಂದಿಕೆಯಾದ ನಂತರವೇ ಹೊಸ ಸಾಧನದಲ್ಲಿ WhatsApp ಗೆ ಲಾಗ್ ಇನ್ ಮಾಡುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಇಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಅಗ್ಗದ 5G ಸ್ಮಾರ್ಟ್‌ಫೋನ್ , ಬೆಲೆ ವೈಶಿಷ್ಟ್ಯ ವಿನ್ಯಾಸ ತಿಳಿಯಿರಿ ..!


ಪರಿಶೀಲನೆ ಪ್ರಕ್ರಿಯೆ ಸುರಕ್ಷಿತ : 
6 ಅಂಕಿಯ ಕೋಡ್ ಪರಿಶೀಲನೆ ಪ್ರಕ್ರಿಯೆಯನ್ನು ಸುರಕ್ಷಿತವಾಗಿರಿಸುತ್ತದೆ. ಹೊಸ ಫೋನ್‌ನಿಂದ WhatsAppಗೆ ಲಾಗ್ ಇನ್ ಮಾಡಿದಾಗಲೆಲ್ಲಾ, ಚಾಟ್ ಅನ್ನು ಲೋಡ್ ಮಾಡಲು ಮತ್ತು ಬ್ಯಾಕಪ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಗಳ ಆಟೋ ಮ್ಯಾಟಿಕ್ ಕೋಡ್ ಅನ್ನು ಕಳುಹಿಸಲಾಗುತ್ತದೆ. WhatsApp ಲಾಗಿನ್ ಪ್ರಕ್ರಿಯೆಯನ್ನು ಸುರಕ್ಷಿತವಾಗಿರಿಸುವುದು, ವೈಯಕ್ತಿಕ ಮಾಹಿತಿ ಮತ್ತು ಖಾತೆಯ ಡೇಟಾದ ದುರುಪಯೋಗವನ್ನು ತಡೆಯುವುದು ಈ ಡಬಲ್ ವೆರಿಫಿಕೇಶನ್ ಕೋಡ್‌ನ ಉದ್ದೇಶವಾಗಿದೆ.  


ನೋಟಿಫಿಕೇಶನ್ ಮೂಲಕ ಮಾಹಿತಿ  : 
ವರದಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ನೀವು ಹೊಸ ಸಾಧನದಲ್ಲಿ ಹಳೆಯ ವಾಟ್ಸಾಪ್‌ಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ, ನಿಮಗೆ ನೋಟಿಫಿಕೇಶನ್ ಬರುತ್ತದೆ. ಈ WhatsApp ಖಾತೆಯು ಈಗಾಗಲೇ ಯಾವುದೋ  ಸಾಧನದಲ್ಲಿ ಲಾಗ್ ಇನ್ ಆಗಿದೆ ಎನ್ನುವುದನ್ನು ತಿಳಿಸಲಾಗುತ್ತದೆ. ಅದರ ಹೊರತಾಗಿಯೂ WhatsAppಗೆ ಲಾಗ್ ಇನ್ ಆಗಲು ಬಯಸಿದರೆ, ಹಳೆಯ ಸಾಧನದಲ್ಲಿ ಕಳುಹಿಸಲಾದ ಕೋಡ್ ಅನ್ನು ಹೊಸ ಸಾಧನದಲ್ಲಿ ನಮೂದಿಸಬೇಕಾಗುತ್ತದೆ. ಈ ರೀತಿಯಾಗಿ ನಿಮಗೆ ಗೊತ್ತಿಲ್ಲದೇ ಯಾರಾದರೂ ನಿಮ್ಮ ಯಲ್ಲಿ ಯಾರಾದರೂ ನಿಮ್ಮ ವಾಟ್ಸ್‌ಆ್ಯಪ್‌ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸುವುದನ್ನು ತಡೆಯಬಹುದು. 


ಇದನ್ನೂ ಓದಿ : WhatsApp ಬಳಕೆದಾರರಿಗೆ ಗುಡ್ ನ್ಯೂಸ್!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.